ಬೆಂಗಳೂರು: ನಗರದ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಎನ್ನುವಂತೆ ಇನ್ಮುಂದೆ ಹೊಸ ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಇರಲಿದೆ ಎಂಬುದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಇಂದು ಮೆಟ್ರೋ ಅಧಿಕಾರಿಗಳ ಜೊತೆಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗಾಗರೊಂದಿಗೆ ಮಾತನಾಡಿದಂತ ಅವರು, ಸಂಚಾರ ದಟ್ಟಣೆ ತಗ್ಗಿಸಬೇಕು. ಮೆಟ್ರೋ ಓಡಾಟ ಜಾಸ್ತಿ ಆಗಬೇಕು. ಬೆಂಗಳೂರಲ್ಲಿ ಸದ್ಯ 96 ಕಿಲೋ ಮೀಟರ್ ವರೆಗೆ ಮೆಟ್ರೋ ಚಾಲನೆಯಲ್ಲಿದೆ ಎಂದರು.
ನಾನು ಬಂದ ಮೇಲೆ 24 ಕಿ.ಮೀ ಹೆಚ್ಚುವರಿ ಸೇರ್ಪಡೆ ಮಾಡಿದ್ದೇನೆ. 2026ರ ಏಪ್ರಿಲ್ ಅಥವಾ ಮೇ ವರೆಗೆ 41 ಕಿ.ಮೀ ಹೊಸದಾಗಿ ಸೇರ್ಪಡೆಯಾಗಲಿದೆ. 2027ರ ಅಂತ್ಯಕ್ಕೆ ಏರ್ ಪೋರ್ಟ್ ಮಾರ್ಗ ಪೂರ್ಣಗೊಳ್ಳಲಿದೆ. ಅದು ಪೂರ್ಣವಾದ್ರೆ 175 ಕಿ.ಮೀ ಪೂರ್ಣಗೊಂಡಂತೆ ಆಗುತ್ತದೆ ಎಂದರು.
ಎಲ್ಲೆಲ್ಲಿ ಮೆಟ್ರೋ ನಿಲ್ದಾಣಗಳಿವೆ ಅಲ್ಲಿ ವಾಣಿಜ್ಯ ಚಟುವಟಿಕೆಗೆ ಅವಕಾಶ ನೀಡಲಾಗುತ್ತದೆ. ಇನ್ಮುಂದೆ ಹೊಸ ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಇರಲಿದೆ ಎಂಬುದಾಗಿ ಹೇಳುವ ಮೂಲಕ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದರು.
ರಾಜ್ಯದ ಮಾನ್ಯತೆ ಪಡೆದ ಪತ್ರಕರ್ತರಿಗೆ ವಿತರಿಸಿರುವ ‘ಸ್ಮಾರ್ಟ್ ಕಾರ್ಡ್’ ಬಸ್ ಪಾಸ್ ಅವಧಿ ವಿಸ್ತರಣೆ








