ಬೆಂಗಳೂರು : ನಟ ಪುನೀತ್ ರಾಜ್ಕುಮಾರ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಈ ನಾಲ್ಕು ದಿನಗಳ ಕಾಲ ‘ಗಂಧದ ಗುಡಿ‘ ಸಿನಿಮಾ ಟಿಕೆಟ್ ದರ ಇಳಿಸುವುದಾಗಿ ಅಪ್ಪು ಪತ್ನಿ ಅಶ್ವಿನಿ ಘೋಷಿಸಿದ್ದಾರೆ.
ಈ ಕುರಿತು ಬಹಿರಂಗ ಪತ್ರ ಬರೆದಿರುವ ಅಶ್ವಿನಿ ಪುನೀತ್ ರಾಜ್ಕುಮಾರ್, “ಗಂಧದ ಗುಡಿ ಅಪ್ಪು ಅವರ ಒಂದು ಕನಸು. ಕರ್ನಾಟಕದ ವನ್ಯ ಸಂಪತ್ತು ಹಾಗೂ ಪ್ರಕೃತಿ ಸೌಂದರ್ಯವನ್ನ ಕನ್ನಡಿಗರಿಗೆ ಪರಿಚಯಿಸುವ ಅವರ ಹಂಬಲ ಈ ಸಿನಿಮಾ ರೂಪುಗೊಳ್ಳಲು ಕಾರಣ. ಈ ಸಿನಿಮಾವನ್ನು ಎಲ್ಲಾ ಕನ್ನಡಿಗರು ನೋಡಬೇಕು, ಅದರಲ್ಲೂ ಮಕ್ಕಳು ನೋಡಬೇಕು ಎಂಬುದು ಅಪ್ಪು ಅವರ ಬಯಕೆಯಾಗಿತ್ತು. ಹೀಗಾಗಿ ನಾನು ಮತ್ತು ಚಿತ್ರತಂಡ ಎಲ್ಲರೊಡನೆ ಚರ್ಚಿಸಿ, ವಿತರಕ ಮತ್ತು ಪ್ರದರ್ಶಕರ ಸಹಕಾರದೊಂದಿಗೆ ನಮ್ಮ ಗಂಧದ ಗುಡಿಯನ್ನ 7.11.2022 ಸೋಮವಾರದಿಂದ 10.11.2022 ಗುರುವಾರದವರೆಗೆ ದರ ಇಳಿಕೆ ಮಾಡಿದ್ದೇವೆ. ಅದ್ರಂತೆ, ಈ ನಾಲ್ಕು ದಿನ ಸಿಂಗಲ್ ಸ್ಕ್ರೀನ್ಗಳಲ್ಲಿ 56 ರೂಪಾಯಿ ಹಾಗೂ ಮಲ್ಟಿಪ್ಲೆಕ್ಸ್ನಲ್ಲಿ 112 ರೂಪಾಯಿಗಳಿಗೆ ಕರ್ನಾಟಕದಾದ್ಯಂತ ದಿನದ ಎಲ್ಲಾ ಆಟಗಳು ಪ್ರದರ್ಶನ ಮಾಡಬೇಕೆಂದು ನಿರ್ಧಾರ ಮಾಡಿದ್ದೇವೆ” ಎಂದಿದ್ದಾರೆ.
ನಾಡಿನ ಜನತೆಯಲ್ಲಿ ನನ್ನ ಒಂದು ಮನವಿ…
An appeal to all the people of the state.#GGKids #GGMovie #GandhadaGudi #DrPuneethRajkumar pic.twitter.com/tf01Kt2Alu
— Ashwini Puneeth Rajkumar (@Ashwini_PRK) November 6, 2022
ಈ ಮೂಲಕ ಈ ನಾಲ್ಕು ದಿನಗಳ ಕಾಲ ಗಂಧದ ಗುಡಿ ಸಿನಿಮಾ ಸಿಂಗಲ್ ಸ್ಕ್ರೀನ್ಗಳಲ್ಲಿ 56 ರೂಪಾಯಿ ಹಾಗೂ ಮಲ್ಟಿಪ್ಲೆಕ್ಸ್ನಲ್ಲಿ 112 ರೂಪಾಯಿಗಳಿಗೆ ಕರ್ನಾಟಕದಾದ್ಯಂತ ದಿನದ ಎಲ್ಲಾ ಆಟಗಳು ಪ್ರದರ್ಶನಗೊಳ್ಳಲಿದೆ.
BIGG NEWS ; ‘ಚುನಾವಣಾ ಆಯೋಗ’ದಿಂದ ಬಿಗ್ ಶಾಕ್ ; ಅಭ್ಯರ್ಥಿಗಳ ನಗದು ವೆಚ್ಚ ₹2,000 ಇಳಿಕೆ |Election Commission
UPDATE ; ತಾಂಜೇನಿಯಾ ವಿಮಾನ ಪತನ ; ಮೃತರ ಸಂಖ್ಯೆ 19ಕ್ಕೆ ಏರಿಕೆ, 26 ಜನರ ರಕ್ಷಣೆ |Tanzania Plane Crash
Fungal Disease ; ವಾತಾವರಣದಲ್ಲಿ ಬದಲಾವಣೆ.. “ಈ ಜನರು ಅಪಾಯದಲ್ಲಿದ್ದಾರೆ” ಎಚ್ಚರಿಸಿದ WHO