ಬೆಂಗಳೂರು: ರಾಜ್ಯ ಸರ್ಕಾರದಿಂದ ಅಂಗಾಂಗ ಕಸಿ ನಿರೀಕ್ಷೆಯಲ್ಲಿದ್ದಂತ ಆದ್ಯತಾ ಕಾರ್ಡ್ ಹೊಂದಿರುವಂತ ಜನರಿಗೆ ಗುಡ್ ನ್ಯೂಸ್ ನೀಡಲಾಗಿದೆ. ಇನ್ಮುಂದೆ ಶ್ವಾಸಕೋಶ, ಹೃದಯ ಮತ್ತು ಶ್ವಾಸಕೋಸ ಕಸಿ ರೋಗಿಗಳಇಗೆ ಇಮ್ಯುನೂಸಪ್ರೆಶನ್ ಔಷಧಿ ದರಗಳಂತೆ ಅತಿ ವಿರಳ ಮತ್ತು ದುಬಾರಿ ಚಿಕಿತ್ಸಾ ವಿಧಾನಗಳ ಯೋಜನೆಯಲ್ಲಿ ವ್ಯಾಖ್ಯಾನಿಸಲಾದ ಮೂಳೆ ಮಜ್ಜೆಯ ಕಸಿ ಪ್ರಕ್ರಿಯೆಗಳನ್ನು ಜೀವ ಸಾರ್ಥಕಥೆ ಯೋಜನೆಯಡಿ ಸೇರ್ಪಡೆಗೊಳಿಸಲಾಗಿದೆ.
ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಡವಳಿಯನ್ನು ಹೊರಡಿಸಲಾಗಿದ್ದು, ಕರ್ನಾಟಕ ಸರ್ಕಾರವು Priority House Hold (ಆದ್ಯತಾ ಮನೆ) ಕಾರ್ಡ್ ಹೊಂದಿರುವವರಿಗೆ ‘ಅಂಗ ಕಸಿ ಯೋಜನೆ’ ಯನ್ನು ಜಾರಿಗೊಳಿಸಲಾಗಿರುತ್ತದೆ. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ಬಡ/ಬಡತನ ರೇಖೆಗಿಂತ ಕೆಳಗಿನ ರೋಗಿಗಳಿಗೆ ಮಾತ್ರ ಅನ್ವಯವಾಗುವ ಈ ಯೋಜನೆಯನ್ನು ಜಾರಿಗೊಳಿಸುವ ನೋಡಲ್ ಏಜೆನ್ಸಿಯಾಗಿರುತ್ತದೆ. ಈ ಯೋಜನೆಯು ಮೂತ್ರಪಿಂಡ, ಯಕೃತ್ತು ಮತ್ತು ಹೃದಯ ಕಸಿ ಕಾರ್ಯವಿಧಾನಗಳನ್ನು ಒಳಗೊಂಡಿದೆ ಮತ್ತು 2018-19 ನೇ ಸಾಲಿನಲ್ಲಿ ರೂ.30.00 ಕೋಟಿಗಳ ಅನುದಾನವನ್ನು ಮೀಸಲಿಡಲಾಗಿದೆ.
ಸರ್ಕಾರದ ಆದೇಶಗಳಲ್ಲಿ ಹೃದಯ ಮತ್ತು ಶ್ವಾಸಕೋಶದ ಕಸಿ ಪ್ರಕ್ರಿಯೆಯ ದರವನ್ನು ಮತ್ತು ಅಲೋಜೆನಿಕ್ ಮೂಳೆ ಮಜ್ಜೆಯ ಕಸಿ (BMT) ದರವನ್ನು ನಿಗದಿಪಡಿಸಲಾಗಿದೆ. ಮೇಲೆ ಓದಲಾದ ಉಲ್ಲೇಖಿತ (4) ಮತ್ತು (5) ರ ಏಕ ಕಡತಗಳಲ್ಲಿ ಪ್ರಸ್ತುತ ಪ್ರಸ್ತಾವನೆಯು ಶ್ವಾಸಕೋಶ, ಹೃದಯ ಮತ್ತು ಶ್ವಾಸಕೋಶ ಮತ್ತು ಮೂಳೆ ಮಜ್ಜೆಯ ಕಸಿ (BMT) ಯನ್ನು ಸೇರಿಸಲು ಅಸ್ತಿತ್ವದಲ್ಲಿರುವ ಅಂಗ ಕಸಿ ಯೋಜನೆಯ ವಿಸ್ತರಣೆಗೆ ಸಂಬಂಧಿಸಿದಂತೆ ಪ್ರಸ್ತಾಪಿಸಲಾಗಿರುತ್ತದೆ.
ಶ್ವಾಸಕೋಶ ಮತ್ತು ಹೃದಯ ಹಾಗೂ ಶ್ವಾಸಕೋಶ ಕಸಿ ರೋಗಿಗಳಿಗೆ ಇಮ್ಯುನೊಸಪ್ರೆಶನ್ (immunosuppression) ಔಷಧಿಗಳ ಅಗತ್ಯವಿರುತ್ತದೆ. ಈ ಔಷಧಿಗಳ ಬೆಲೆಯನ್ನು ಉಲ್ಲೇಖಿತ (1)ರ ಸರ್ಕಾರದ ಆದೇಶದಲ್ಲಿ ವ್ಯಾಖ್ಯಾನಿಸಲಾಗಿರುತ್ತದೆ.
ಆಟೋಲೋಗಸ್ ಮೂಳೆ ಮಜ್ಜೆಯ ಕಸಿ (BMT) ಚಿಕಿತ್ಸಾ ವಿಧಾನವು HBP 2022 ರಲ್ಲಿ ಲಭ್ಯವಿರುತ್ತದೆ. ಆದರೆ, HBP 2022 ರಲ್ಲಿ ಅಲೋಜೆನಿಕ್ BMT ಲಭ್ಯವಿರುವುದಿಲ್ಲ, ಆದ್ದರಿಂದ ಅಂಗಾಂಗ ಕಸಿ ಯೋಜನೆಯಡಿಯಲ್ಲಿ ಅಲೋಜೆನಿಕ್ ಮೂಳೆ ಮಜ್ಜೆಯ ಕಸಿ (BMT) ಅನ್ನು ಮಾತ್ರ ಪ್ರಸ್ತಾಪಿಸಲಾಗಿರುತ್ತದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ, ಸರ್ಕಾರದ ಆದೇಶ ಸಂಖ್ಯೆ: ಹೆಚ್ 64 ಎಫ್ಪಿಇ 2018, ದಿನಾಂಕ: 03-12-2018ರಲ್ಲಿ ವಿಧಿಸಿರುವ ಷರತ್ತಿಗೊಳಪಟ್ಟು Priority House Hold (ಆದ್ಯತಾ ಮನೆ) ಕಾರ್ಡ್ ಹೊಂದಿರುವವರಿಗೆ ಅಸ್ತಿತ್ವದಲ್ಲಿರುವ ಅಂಗಾಂಗ ಕಸಿ (ಜೀವಸಾರ್ಥಕಥೆ) ಯೋಜನೆಯಲ್ಲಿ ಶ್ವಾಸಕೋಶ, ಹೃದಯ ಮತ್ತು ಶ್ವಾಸಕೋಶ ಹಾಗೂ ಮೂಳೆ ಮಜ್ಜೆಯ ಕಸಿ (BMT) ಪ್ರಕ್ರಿಯೆಯನ್ನು ಸೇರ್ಪಡೆಗೊಳಿಸಿ ವಿಸ್ತರಿಸಲು ಆದೇಶಿಸಲಾಗಿದೆ.
ಸರ್ಕಾರದ ಆದೇಶ ಸಂಖ್ಯೆ ಡಿಪಿಎಆರ್ 52 ಎಸ್ಎಮ್ಆರ್ 2022, ದಿನಾಂಕ: 11-07-2022 ರಲ್ಲಿ ವ್ಯಾಖ್ಯಾನಿಸಲಾದ ಶ್ವಾಸಕೋಶ, ಹೃದಯ ಮತ್ತು ಶ್ವಾಸಕೋಶದ ಕಸಿ ವಿಧಾನದ ದರಗಳಂತೆ ಸರ್ಕಾರಿ ಆದೇಶ ಸಂಖ್ಯೆ: ಹೆಚ್ಎಫ್ಡಬ್ಲ್ಯೂ 64 ಎಫ್ಪಿಇ 2018, ದಿನಾಂಕ: 03-12-2018ರಲ್ಲಿ ಶ್ವಾಸಕೋಶ ಹಾಗೂ ಹೃದಯ ಮತ್ತು ಶ್ವಾಸಕೋಶದ ಕಸಿ ರೋಗಿಗಳಿಗೆ ಇಮ್ಯುನೊಸಪ್ರೆಶನ್ ಔಷಧಿಗಳ ದರಗಳಂತೆ ಹಾಗೂ ಸರ್ಕಾರದ ಆದೇಶ ಸಂಖ್ಯೆ: ಹೆಚ್ಎಫ್ಡಬ್ಲ್ಯೂ 332 ಸಿಜಿಇ 2023, ದಿನಾಂಕ: 01-07-2024 ರಲ್ಲಿ ಅತಿ ವಿರಳ ಮತ್ತು ದುಬಾರಿ ವೆಚ್ಚದ ಚಿಕಿತ್ಸಾ ವಿಧಾನಗಳ ಯೋಜನೆಯಲ್ಲಿ ವ್ಯಾಖ್ಯಾನಿಸಲಾದ ಮೂಳೆ ಮಜ್ಜೆಯ ಕಸಿ (BMT) ದರಗಳಂತೆ ಈ ಹಚ್ಚಿನ ಪ್ರಕ್ರಿಯೆಗಳ ಪಾವತಿ ಮಾಡಲು ಆದೇಶಿಸಿದೆ.
ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: FD/132/EXP-5/2022, ದಿನಾಂಕ: 05-12-2024ರಲ್ಲಿನ ಸಹಮತಿಯನ್ವಯ ಹಾಗೂ ಸಚಿವ ಸಂಪುಟದ ಪ್ರಕರಣ ಸಂಖ್ಯೆ:ಸಿ/28/2025, ದಿನಾಂಕ: 16-01-2025ರಲ್ಲಿ ನೀಡಲಾದ ಅನುಮೋದನೆಯಂತೆ ಹೊರಡಿಸಿದೆ.
ಇದು ಭಾರತೀಯ ಆಹಾರ ಪದ್ಧತಿಗಳಲ್ಲಿ ‘ವೀಳ್ಯದೆಲೆ’ಯ ಆರೋಗ್ಯಕರ ಲಾಭ | Betel Leaf Benefits
ದೆಹಲಿಯಲ್ಲಿ ಎಎಪಿ-ಕಾಂಗ್ರೆಸ್ ಚುನಾವಣೋತ್ತರ ಮೈತ್ರಿ ಸಾಧ್ಯತೆ : ಮೋದಿ ಎಚ್ಚರಿಕೆ