ಬೆಂಗಳೂರು: ಜಮೀನಿನ ಅಳತೆ, ಸರ್ವೇ, ಪೋಡಿ, ಹದ್ದುಬಸ್ತು ಸೇವಾ ಶುಲ್ಕವನ್ನು ಇಳಿಕೆ ಮಾಡಲಾಗಿದೆ. ಸ್ವಾವಲಂಬಿ ಯೋಜನೆ ಅಡಿ ಜಮೀನು ನಕ್ಷೆಗಾಗಿ (ಸ್ಕೆಚ್) ಸಲ್ಲಿಸುವ ಪ್ರತಿ ಅರ್ಜಿಗೆ ನಿಗದಿ ಪಡಿಸಿದ ಪರಿಷ್ಕೃತ ಶುಲ್ಕ ಈ ಕೆಳಗಿನಂತಿದೆ.
11-ಇ ನಕ್ಷೆ, ತತ್ಕಾಲ್ ಪೋಡಿ, ಭೂ ಪರಿವರ್ತನೆ ಪೂರ್ವನಕ್ಷೆ
2 ಎಕರೆವರೆಗೆ 2,500 ರೂ. (ನಗರ), 1,500 ರೂ. (ಗ್ರಾಮೀಣ)
2 ಎಕರೆ ನಂತರ ಪ್ರತಿ ಎಕರೆಗೆ 1,000 ರೂ. (ನಗರ), 400 ರೂ. (ಗ್ರಾಮೀಣ)
ಜಮೀನು ಹದ್ದುಬಸ್ತು
2 ಎಕರೆವರೆಗೆ ₹ 2,000 (ನಗರ), ₹ 500 (ಗ್ರಾಮೀಣ)
2 ಎಕರೆ ನಂತರ ಪ್ರತಿ ಎಕರೆಗೆ 400 ರೂ. (ನಗರ), 300 ರೂ. (ಗ್ರಾಮೀಣ)