ಬೆಂಗಳೂರು: ರಾಜ್ಯದ ಅನ್ನಭಾಗ್ಯ ಫಲಾನುಭವಿಗಳಿಗೆ ಹೆಚ್ಚುವರಿ ಅಕ್ಕಿಯ ಬದಲಾಗಿ ಹಣವನ್ನು ಸರ್ಕಾರ ಡಿಬಿಟಿ ಮೂಲಕ ಖಾತೆಗೆ ಜಮಾ ಮಾಡಲಾಗುತ್ತಿದೆ. ಇದೀಗ ಬಾಕಿ ಇರುವಂತ ಮೂರು ತಿಂಗಳ ಹಣವನ್ನು ಶೀಘ್ರವೇ ಡಿಬಿಟಿ ಮೂಲಕ ವರ್ಗಾವಣೆ ಮಾಡುವುದಾಗಿ ಆಹಾರ ಸಚಿವ ವಿ.ಮುನಿಯಪ್ಪ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ಎಪಿಎಲ್, ಬಿಪಿಎಲ್ ಕಾರ್ಡ್ ಗೊಂದಲದ ಕಾರಣ ಅನ್ನಭಾಗ್ಯ ಯೋಜನೆಯ ಹೆಚ್ಚುವರಿ ಅಕ್ಕಿ ಹಣ ಫಲಾನುಭವಿಗಳ ಖಾತೆಗೆ ಜಮಾ ಮಾಡುವುದು ತಡವಾಗಿದೆ. ಈ ಹಣವನ್ನು ಶೀಘ್ರವೇ ಖಾತೆಗೆ ಡಿಬಿಟಿ ಮೂಲಕ ಜಮಾ ಮಾಡುವುದಾಗಿ ತಿಳಿಸಿದರು.
ನವೆಂಬರ್, ಡಿಸೆಂಬರ್ ಹಾಗೂ ಜನವರಿಯ ಮೂರು ತಿಂಗಳ ಹಣವನ್ನು ಅನ್ನಭಾಗ್ಯ ಯೋಜನೆಯ ಫಲಾನುಭವಿಗಳ ಖಾತೆಗೆ ಶೀಘ್ರವೇ ಡಿಬಿಟಿ ಮೂಲಕ ಸಂದಾಯ ಮಾಡಲಾಗುತ್ತದೆ. ಈ ಸಂಬಂಧ ಆಹಾರ ಇಲಾಖೆಯಿಂದಲೂ ಪತ್ರಿಕಾ ಪ್ರಕಟಣೆಯನ್ನು ಹೊರಡಿ ಫಲಾನುಭವಿಗಳಿಗೆ ಮಾಹಿತಿ ನೀಡುವುದಾಗಿ ಹೇಳಿದರು.
ಅಂದಹಾಗೇ ಫೆಬ್ರವರಿಯಿಂದ ರಾಜ್ಯ ಸರ್ಕಾರ ಅನ್ನಭಾಗ್ಯ ಫಲಾನುಭವಿಗಳಿಗೆ 10 ಕೆಜಿ ಜೊತೆಗೆ ಹೆಚ್ಚುವರಿ 5 ಕೆಜಿ ಅಕ್ಕಿಗೆ ನೀಡಲಾಗುತ್ತಿದ್ದಂತ ಹಣವನ್ನು ನಿಲ್ಲಿಸೋ ಸಾಧ್ಯತೆ ಇದೆ. ಇದರ ಬದಲಾಗಿ ರಾಜ್ಯ ಸರ್ಕಾರದಿಂದ ಫಲಾನುಭವಿಗಳಿಗೆ ಅಕ್ಕಿಯನ್ನೇ ವಿತರಣೆ ಮಾಡಲಾಗುತ್ತಿದೆ ಎಂಬುದಾಗಿ ತಿಳಿದು ಬಂದಿದೆ.
BIG NEWS: ರಾಜ್ಯ ಸರ್ಕಾರದ ಆದೇಶಕ್ಕೂ ಕ್ಯಾರೆ ಎನ್ನದ ವೈದ್ಯರು: ಮಾತೃ ಇಲಾಖೆಗೆ ತೆರಳಲು ಮೀನಾಮೇಷ
BREAKING:ಪರ್ವೇಶ್ ವರ್ಮಾ ದೆಹಲಿ ಸಿಎಂ ಆಗ್ತಾರಾ? ಬಿಜೆಪಿ ಅಭ್ಯರ್ಥಿ ಯಾರು | Delhi CM Announcement