ಬೆಂಗಳೂರು: ನಾಲ್ಕು ತಿಂಗಳ ಗೌರವಧನ ಅಂಗನವಾಡಿ ಕಾರ್ಯಕರ್ತೆಯರಿಗೆ ಪಾವತಿ ಆಗಿರಲಿಲ್ಲ. ಹೀಗಾಗಿ ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು ಸಂಕಷ್ಟಕ್ಕೆ ಸಿಲುಕಿದ್ದರು. ಶೀಘ್ರವೇ ಅಂಗನವಾಡಿ ಶಿಕ್ಷಕಿಯರಿಗೆ ವೇತನ ಪಾವತಿ ಮಾಡಲಾಗುತ್ತದೆ ಎಂಬುದಾಗಿ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಈ ಮೂಲಕ ಅಂಗನವಾಡಿ ಕಾರ್ಯಕರ್ತೆಯರಿಗೆ ಗುಡ್ ನ್ಯೂಸ್ ನೀಡಿದ್ದಾರೆ.
ರಾಜ್ಯದ ಅಂಗನವಾಡಿ ಶಿಕ್ಷಕಿಯರಿಗೆ ಬಾಕಿ ಉಳಿದಿರುವ ವೇತನವನ್ನು ಶೀಘ್ರವೇ ಬಿಡುಗಡೆಗೊಳಿಸಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಎಲ್ಲಾ ವಿಚಾರವೂ ಅಂಗನವಾಡಿ ಶಿಕ್ಷಕಿಯರಿಗೆ ಗೊತ್ತಿದೆ. ರಾಜ್ಯ ಸರ್ಕಾರದಿಂದ 7 ಸಾವಿರ ರೂ, ಕೇಂದ್ರದಿಂದ 4 ಸಾವಿರ ರೂ ನೀಡಲಾಗುತ್ತಿದೆ. ಈಗಾಗಲೇ ಕೇಂದ್ರ ಸಚಿವರ ಜೊತೆ ಮಾತಾಡಿದ್ದೇನೆ. ಈ ಹಿಂದೆಯೂ ಹಲವು ಬಾರಿ ವೇತನ ವಿಳಂಬ ಆಗಿತ್ತು. ಗೌರಿ ಗಣೇಶ ಹಬ್ಬದೊಳಗೆ ಹಣ ಬಿಡುಗಡೆಗೆ ಪ್ರಯತ್ನ ಮಾಡುತ್ತೇವೆ ಎಂದುಸಚಿವೆ ಲಕ್ಷ್ಮೀ ಹೆಬ್ಳಾಳ್ಕರ್ ಹೇಳಿದ್ದಾರೆ.
ಕೂಡಲೇ ‘ಅಂಗನವಾಡಿ ಕಾರ್ಯಕರ್ತೆ’ರಿಗೆ ಗೌರವಧನ ಪಾವತಿಸಿ: ‘MLC ಛಲವಾದಿ ನಾರಾಯಣಸ್ವಾಮಿ’ ಆಗ್ರಹ
ಭಾಗ್ಯಲಕ್ಷ್ಮಿ ಯೋಜನೆಯ ‘ಸೀರೆ ವಿತರಣೆ’ಯಲ್ಲಿ ಅಕ್ರಮ: ‘SIT ತನಿಕೆ’ಗೆ ಕೋರಿ ಸಿಎಂಗೆ ‘ರಮೇಶ್ ಬಾಬು’ ಪತ್ರ