ಬೆಂಗಳೂರು : ಈ ಹಿಂದೆ ಬಿಜೆಪಿ ಸರ್ಕಾರ 700 ಕೋಟಿ ರೂಪಾಯಿ ರೈತರ ಹಾಲಿನ ಪ್ರೋತ್ಸಾಹ ಧನ ಬಾಕಿ ಉಳಿಸಿಕೊಂಡಿತ್ತು. ಅದನ್ನು ನಾವು ಬಿಡುಗಡೆ ಮಾಡಿದ್ದೇವೆ. ಈಗ ಏನೋ 600 ಕೋಟಿ ರೂಪಾಯಿ ಬಾಕಿ ಇದೆ ಅಂತ ಕೇಳಿದ್ದೇನೆ. ಆದಷ್ಟು ಬೇಗ ಬಾಕಿ ಹಣ ಬಿಡುಗಡೆ ಮಾಡುತ್ತೇವೆ ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ತಿಳಿಸಿದರು.
ಬೆಂಗಳೂರಿನ ವಿಕಾಸಸೌಧದಲ್ಲಿ ಮಾತನಾಡಿದ ಅವರು, ರೈತರಿಗೆ ಸರ್ಕಾರದಿಂದ ಹಾಲಿನ ಪ್ರೋತ್ಸಾಹ ಧನ ನೀಡುವ ವಿಚಾರವಾಗಿ ಸಹಕಾರ ಇಲಾಖೆಯ ಸಚಿವ ಕೆ ರಾಜಣ್ಣ ಕೂಡಾ ಉತ್ತರ ನೀಡಿದ್ದಾರೆ ಪ್ರತಿ ಬಾರಿ ಪ್ರೋತ್ಸಾಹ ದರ ನೀಡಲು ಪ್ರಿಂಟಿಂಗ್ ಮಷೀನ್ ಏನಾದರೂ ಇದೆಯಾ? ಸರ್ಕಾರದ ಬಳಿ ಹಣ ಪ್ರಿಂಟ್ ಮಾಡುವ ಮಷೀನ್ ಇದೆಯಾ? ಎಂದು ಉಡಾಫೆಯ ಉತ್ತರ ನೀಡಿದರು.
ಪ್ರೋತ್ಸಾಹ ಧನ ಹೆಚ್ಚಳ ಮಾಡಿದರೆ ನಿಮ್ಮ ತೆರಿಗೆ ಹಣವೇ ಹೋಗುತ್ತದೆ. ಬಿಜೆಪಿ ಸರ್ಕಾರ 700 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿತ್ತು. ಅದನ್ನು ನಾವು ಬಿಡುಗಡೆ ಮಾಡಿದ್ದೇವೆ. ಈಗ ಏನೋ 600 ಕೋಟಿ ರೂಪಾಯಿ ಬಾಕಿ ಇದೆ ಅಂತ ಕೇಳಿದ್ದೇನೆ. ಆದಷ್ಟು ಬೇಗ ಬಾಕಿ ಹಣ ಬಿಡುಗಡೆ ಮಾಡುತ್ತೇವೆ ಎಂದು ವಿಕಾಸಸೌಧದಲ್ಲಿ ಸಹಕಾರ ಇಲಾಖೆ ಸಚಿವ ಕೆ.ಎನ್ ರಾಜಣ್ಣ ಹೇಳಿಕೆ ನೀಡಿದರು.