ನವದೆಹಲಿ: ಭಾರತದಲ್ಲಿ ಕೊರೊನಾ ಸಾಂಕ್ರಾಮಿಕ ರೋಗದ ಸಮಯದಲ್ಲಿ ಮೊದಲ ಬಾರಿಗೆ ಭಾರತೀಯರಿಗೆ ಕರೋನಾ ಲಸಿಕೆಗಳನ್ನು ತಯಾರಿಸಿದ ಅದಾರ್ ಪೂನಾವಾಲಾ ಅವರ ಫಾರ್ಮಾಸ್ಯುಟಿಕಲ್ ಕಂಪನಿ, ಮುಂದಿನ ವರ್ಷ ಗರ್ಭಕಂಠದ ಕ್ಯಾನ್ಸರ್ ಅನ್ನು ತಡೆಗಟ್ಟಲು ಲಸಿಕೆಯನ್ನು ಪ್ರಾರಂಭಿಸಲಿದೆ ಎನ್ನಲಾಗಿದೆ.
ಈ ಬಗ್ಗೆ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ಮುಖ್ಯಸ್ಥ ಆದರ್ ಪೂನಾವಾಲಾ ಅವರು ಶುಕ್ರವಾರ ಈ ಘೋಷಣೆ ಮಾಡಿದ್ದಾರೆ.
ಗುರುವಾರ ಸಂಜೆ ಪುಣೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅದಾರ್ ಪೂನಾವಾಲಾ, ಕಂಪನಿಯು 15 ಕೋಟಿಗೂ ಹೆಚ್ಚು ಲಸಿಕೆಗಳ ಗುರಿಯನ್ನು ನಿಗದಿಪಡಿಸಿದೆ ಎಂದು ಹೇಳಿದರು. ಆದಾಗ್ಯೂ, ಲಸಿಕೆಗಳ ರಫ್ತು 2024 ರವರೆಗೆ ಕಾಯಬೇಕಾಗುತ್ತದೆ. ತಮ್ಮ ಫಾರ್ಮಾಸ್ಯುಟಿಕಲ್ ಕಂಪನಿಯಲ್ಲಿ ತಯಾರಿಸಲಾದ ಈ ಎಚ್ ಪಿವಿ ಲಸಿಕೆಗಳು ಅನೇಕ ರೀತಿಯ ಗರ್ಭಕಂಠದ ಕ್ಯಾನ್ಸರ್ ನಿಂದ ರಕ್ಷಿಸುತ್ತವೆ ಎಂದು ಅವರು ಹೇಳಿದರು.
ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ2023 ರ ಆರಂಭದಲ್ಲಿ ಭಾರತ ಸರ್ಕಾರಕ್ಕೆ ಸಣ್ಣ ಪ್ರಮಾಣದ ಡೋಸ್ಗಳನ್ನು ಪೂರೈಸಲು ಪ್ರಾರಂಭಿಸುತ್ತದೆ ಎಂದು ಕಂಪನಿಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಲಸಿಕೆಯನ್ನು ಮುಂದಿನ ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತ ಸರ್ಕಾರದೊಂದಿಗೆ ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದ್ದಾರೆ.