ಬೆಂಗಳೂರು : ರಾಜ್ಯ ಸರ್ಕಾರಿ ನೌಕರರರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ರಾಜ್ಯದ ನೌಕರರು ಕುಟುಂಬದ ಸದಸ್ಯರಿಗೆ ಜನವರಿಯಿಂದ ಕ್ಯಾಶ್ ಲೆಸ್ ಚಿಕಿತ್ಸೆ ಯೋಜನೆ ಜಾರಿಯಾಗಲಿದೆ.
ನೌಕರರಿಗೆ ಹಾಗೂ ಅವರ ಕುಟುಂಬದವರಿಗೆ ಇನ್ನೂ ಮುಂದೆ ರಾಜ್ಯದ ಆಸ್ಪತ್ರೆಗಳಲ್ಲಿ ನಗದು ರಹಿತ ವೈದ್ಯಕೀಯ ಸೇವೆ ಸಿಗಲಿದೆ. ಮಾರಣಾಂತಿಕ ಕಾಯಿಲೆಗಳು ಸೇರಿ 1,226 ಆರೋಗ್ಯ ಸಮಸ್ಯೆಗಳಿಗೆ ಮಲ್ಪಿ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ಒಳಗೊಂಡಂತೆ ಸಂಪೂರ್ಣ ನಗದು ರಹಿತ ಚಿಕಿತ್ಸೆ ಸಿಗುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಉಚಿತ ಆರೋಗ್ಯ ಯೋಜನೆಗೆ ಸರ್ಕಾರ ಅಂಗೀಕಾರ ನೀಡಿದೆ. ಈ ಯೋಜನೆ ಹೊಸ ವರ್ಷದಿಂದ ಜಾರಿಗೆ ಬರಲಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್ ಷಡಾಕ್ಷರಿ ಹೇಳಿದರು.
ಮಾರಣಾಂತಿಕ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಮಾಡಿದ ವೆಚ್ಚ ಮರುಪಾವತಿ ಪಡೆಯಲು ಹರ ಸಾಹಸ ಪಡಬೇಕಿತ್ತು, ಹಾಗೂ ಚಿಕಿತ್ಸೆಗೆ ನಿಗದಿಪಡಿಸಿರುವ ಮೊತ್ತವೂ ಕಡಿಮೆಯಿತ್ತು, ಇದನ್ನು ನಿವಾರಿಸಿ ನಗದು ರಹಿತವಾಗಿ ಚಿಕಿತ್ಸೆ ವ್ಯವಸ್ಥೆಗಾಗಿ ಸಂಘ ನಡೆಸಿದ ಹೋರಾಟಕ್ಕೆ ಫಲ ಸಿಕ್ಕಿದೆ ಎಂದಿದ್ದಾರೆ.
BREAKING NEWS: ಮೇಘಾಲಯದ ತುರಾ ಬಳಿ 3.4 ತೀವ್ರತೆಯ ಭೂಕಂಪ | Earthquake in Meghalaya