ನವದೆಹಲಿ : ವಾಟ್ಸಾಪ್ ತನ್ನ ಬಳಕೆದಾರರಿಗೆ ಸಿಹಿ ಸುದ್ದಿ ನೀಡಿದ್ದು, ದೀರ್ಘ ಕಾಲದಿಂದ ಕಾಯುತ್ತಿದ್ದ ವೈಶಿಷ್ಟ್ಯ ‘UNDO’ ವೈಶಿಷ್ಟ್ಯ ಬಿಡುಗಡೆ ಮಾಡಿದೆ.
ಸಾಮಾನ್ಯ ಬಹುತೇಕರು ಕೂಡ ತಪ್ಪು ವ್ಯಕ್ತಿ ಅಥ್ವಾ ಗುಂಪಿಗೆ ಸಂದೇಶ ಕಳುಹಿಸುತ್ತೀರಿ ಮತ್ತು ನೀವು ಅದನ್ನ ಅಳಿಸಲು ಪ್ರಯತ್ನಿಸಿದಾಗ, ಅವಸರದಲ್ಲಿ ನೀವು ಆಕಸ್ಮಿಕವಾಗಿ ಕ್ಲಿಕ್ ಮಾಡಿ, ‘Delete for everyone’ ಬದಲಿಗೆ ‘Delete for Me’ ಕ್ಲಿಕ್ ಮಾಡಿ, ಮುಜುಗರಕ್ಕೆ ಒಳಗಾಗ್ತಾರೆ. ಆದ್ರೆ, ಈಗ ವಾಟ್ಸಾಪ್ ಹೊಸ ವೈಶಿಷ್ಟ್ಯವನ್ನ ಹೊರತಂದಿದೆ. ಅಂತಹ ಪರಿಸ್ಥಿತಿಯಲ್ಲಿ, ಬಳಕೆದಾರನು ಕೆಲವು ಸೆಕೆಂಡುಗಳನ್ನ ಪಡೆಯಲಿದ್ದು, ಮತ್ತೆ ಆ ಸಂದೇಶವನ್ನ ‘UNDO’ ಮಾಡಬೋದು.
ಅಂದ್ರೆ, ವಾಟ್ಸಾಪ್ ಬಳಕೆದಾರರಿಗೆ 5 ಸೆಕೆಂಡುಗಳ ಕಾಲಾವಕಾಶ ನೀಡಲಿದ್ದು, ಬಳಕೆದಾರರು ಸಂದೇಶವನ್ನ ‘Delete for Me’ ಒತ್ತಿ ಮತ್ತೆ ಸಂದೇಶವನ್ನ ‘UNDO’ ಮಾಡಬೋದು. ನಂತ್ರ ಅದನ್ನ ‘Delete for everyone’ ಅಂದ್ರೆ ಎಲ್ಲರಿಗೂ ಅಳಿಸಬೋದು.
ಈ ಹೊಸ ವೈಶಿಷ್ಟ್ಯವು ಐಫೋನ್ ಮತ್ತು ಆಂಡ್ರಾಯ್ಡ್ ಸಾಧನಗಳಲ್ಲಿ ಲಭ್ಯವಿರುತ್ತದೆ. ಯುಎಸ್ ಮೂಲದ ಟೆಕ್ ಪೋರ್ಟಲ್ ಟೆಕ್ ಕ್ರಂಚ್ ವರದಿಯ ಪ್ರಕಾರ, ಈ ವೈಶಿಷ್ಟ್ಯವು ವೈಯಕ್ತಿಕ ಮತ್ತು ಗುಂಪು ಚಾಟ್ ಗಳಲ್ಲಿ ಕಾರ್ಯನಿರ್ವಹಿಸುತ್ತದೆ.
ಅಂದ್ಹಾಗೆ, 2017ರಲ್ಲಿ, ಮೆಸೇಜಿಂಗ್ ಪ್ಲಾಟ್ಫಾರ್ಮ್ Delete for everyone ಆಯ್ಕೆಯನ್ನು ಪರಿಚಯಿಸಿತು, ಇದರಿಂದಾಗಿ ಬಳಕೆದಾರರು ಸಂಭಾಷಣೆಯ ಎಲ್ಲಾ ಭಾಗಿಗಳಿಂದ ಸಂದೇಶವನ್ನ ತಪ್ಪಾಗಿ ಕಳುಹಿಸಿದರೆ ಅದನ್ನ ಹಿಂಪಡೆಯಬಹುದು. ಆರಂಭದಲ್ಲಿ ರೋಲ್ ಔಟ್’ನ್ನ ಕೇವಲ 7 ನಿಮಿಷಗಳಿಗೆ ಸೀಮಿತಗೊಳಿಸಲಾಗಿತ್ತು, ಈ ವರ್ಷದ ಆಗಸ್ಟ್’ನಲ್ಲಿ ಅದನ್ನು 60 ಗಂಟೆಗಳಿಗೆ ಹೆಚ್ಚಿಸಲಾಯಿತು.
"Delete for Me" 🤦🤦🤦
We've all been there, but now you can UNDO when you accidentally delete a message for you that you meant to delete for everyone! pic.twitter.com/wWgJ3JRc2r
— WhatsApp (@WhatsApp) December 19, 2022
BIGG NEWS : ಸೊರಬ ದೇವಸ್ಥಾನ ರಸ್ತೆಯಲ್ಲಿರುವ ಮದ್ಯದ ಅಂಗಡಿ ಅಮಾನತು : ಸಚಿವ.ಕೆ.ಗೋಪಾಲಯ್ಯ
BREAKING NEWS : ಬೆಳಗಾವಿ ವಿಧಾನಸಭೆ ಅಧಿವೇಶನದಲ್ಲಿ `SC-ST’ ಮೀಸಲಾತಿ ಹೆಚ್ಚಳ ಸೇರಿದಂತೆ ನಾಲ್ಕು ವಿಧೇಯಕ ಮಂಡನೆ