Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಈ ರಾಜ್ಯದಲ್ಲಿ ಹೆಣ್ಣುಮಕ್ಕಳಿಗೆ ಹೆಸರಿಟ್ಟ ಹಿಂದಿದೆ ಇಂಟ್ರೆಸ್ಟಿಂಗ್ ಸೀಕ್ರೇಟ್! ಎಲ್ಲಿ? ಏನದು ಗೊತ್ತಾ? ಈ ಸುದ್ದಿ ಓದಿ

09/02/2026 2:40 PM

ಫೆ.10ರ ನಾಳೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಕರೆಂಟ್ ಇರಲ್ಲ | Power Cut

09/02/2026 2:24 PM

ಕೋಳಿ -ಕುರಿ ಮಾಂಸಕ್ಕಿಂತ ಶಕ್ತಿಶಾಲಿ : ಮೀನಿನ ಈ ಭಾಗ ತಿನ್ನುವುದರಿಂದ ಸಿಗಲಿವೆ ಹಲವು ಪ್ರಯೋಜನಗಳು.!

09/02/2026 2:24 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » GOOD NEWS : ‘ವಿದ್ಯಾಸಿರಿ’ ಯೋಜನೆಯಡಿ ನೀಡುವ ಮೊತ್ತ ಮುಂದಿನ ವರ್ಷದಿಂದ 2 ಸಾವಿರಕ್ಕೆ ಏರಿಕೆ : ಸಿಎಂ ಸಿದ್ದರಾಮಯ್ಯ ಘೋಷಣೆ
KARNATAKA

GOOD NEWS : ‘ವಿದ್ಯಾಸಿರಿ’ ಯೋಜನೆಯಡಿ ನೀಡುವ ಮೊತ್ತ ಮುಂದಿನ ವರ್ಷದಿಂದ 2 ಸಾವಿರಕ್ಕೆ ಏರಿಕೆ : ಸಿಎಂ ಸಿದ್ದರಾಮಯ್ಯ ಘೋಷಣೆ

By kannadanewsnow0523/11/2024 5:14 AM

ಮೈಸೂರು : ವಿದ್ಯಾಸಿರಿ ಯೋಜನೆಯಡಿ ಒದಗಿಸುವ ವಿದ್ಯಾರ್ಥಿವೇತನವನ್ನು 1500 ರೂ.ಗಳನ್ನು ಮುಂದಿನ ವರ್ಷದಿಂದ ಎರಡು ಸಾವಿರಕ್ಕೆ ಏರಿಸಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.ಅವರು ಇಂದು ಸಂತ ಶ್ರೀ ಕನಕದಾಸರ ಜಯಂತ್ಯುತ್ಸವ ಸಮಿತಿ, ಸಿದ್ದಾರ್ಥನಗರ, ಮೈಸೂರು ಇವರ ವತಿಯಿಂದ ಸಿದ್ದಾರ್ಥನಗರದ ಕನಕಭವನದಲ್ಲಿ ಆಯೋಜಿಸಿದ್ದ ‘ಶ್ರೀ ಭಕ್ತ ಕನಕದಾಸರ 537ನೇ ಜಯಂತ್ಯುತ್ಸವ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಈ ಕಾರ್ಯಕ್ರಮಗಳು ಜೀವನದ ಅನುಭವದಿಂದ ಮೂಡಿಬಂದಿದ್ದು ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಪ್ರೌಢಶಾಲೆಗೆ ಬರುವವರೆಗೂ ತಾವು ಚಪ್ಪಲಿಯನ್ನು ಹಾಕಿಕೊಳ್ಳುತ್ತಿರಲಿಲ್ಲ ಎಂದು ತಿಳಿಸಿದ ಮುಖ್ಯಮಂತ್ರಿಗಳು ಎಲ್ಲಾ ಶಾಲಾ ಮಕ್ಕಳು ಶೂ ಹಾಕಬೇಕೆಂದು ಶೂಭಾಗ್ಯ ಯೋಜನೆಯನ್ನು ಜಾರಿಗೆ ತರಲಾಯಿತು.ರಾಜ್ಯದಲ್ಲಿ ಹೆಚ್ಚುವರಿ ಹಾಲು ಉತ್ಪಾದನೆಯಾದ ಸಂದರ್ಭದಲ್ಲಿ ಶಾಲೆ ಮಕ್ಕಳಿಗೆ ಹಾಲು ಕೊಡಲಾಯಿತು. ಪ್ರಸ್ತುತ ವಾರದಲ್ಲಿ ಆರು ದಿನಗಳು ಶಾಲಾ ಮಕ್ಕಳಿಗೆ ಮೊಟ್ಟೆ ಕೊಡಲಾಗುತ್ತಿದೆ ಎಂದರು.

ಬಡವರಿಗೆ ಆರ್ಥಿಕವಾಗಿ ಸಾಮಾಜಿಕವಾಗಿ ಶಕ್ತಿ ತುಂಬಲು ಗ್ಯಾರಂಟಿ ಯೋಜನೆಗಳು ಜಾರಿ ಮಾಡಲಾಗಿದೆ. ಶಕ್ತಿ ಯೋಜನೆಯಡಿ ಎಲ್ಲಾ ಮಹಿಳೆಯರೂ ಉಚಿತವಾಗಿ ಬಸ್ಸುಗಳಲ್ಲಿ ಓಡಾಡುತ್ತಾರೆ. ಗೃಹ ಲಕ್ಷ್ಮೀ ಯೋಜನೆಯಡಿ 1.ಕೋಟಿ 22 ಲಕ್ಷ ಕುಟುಂಬಗಳ ಮನೆ ಯಜಮಾನಿಗೆ ತಿಂಗಳಿಗೆ ಎರಡು ಸಾವಿರ ರೂಪಾಯಿಗಳನ್ನು ನೀಡಲಾಗುತ್ತಿದೆ. ವರ್ಷಕ್ಕೆ 32 ಸಾವಿರ ಕೋಟಿ ಒದಗಿಸಲಾಗುತ್ತಿದೆ ಎಂದರು.

ಗೃಹಜ್ಯೋತಿ ಯೋಜನೆಯಡಿ 200 ಯುನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಬಡವರಿಗೆ ಆರ್ಥಿಕವಾಗಿ ಸಾಮಾಜಿಕವಾಗಿ ಶಕ್ತಿ ತುಂಬಲು ಈ ಯೋಜನೆಗಳು ಜಾರಿಯಾಗಿವೆ. ವರ್ಷಕ್ಕೆ 50-60 ಸಾವಿರ, ತಿಂಗಳಿಗೆ 4-5 ಸಾವಿರ ರೂಪಾಯಿಗಳನ್ನು ನೀಡಲಾಗುತ್ತಿದೆ. ನಾನು ಹಳ್ಳಿಯಿಂದ ಬಂದು ನನ್ನ ಹಾಗೆ ಕಷ್ಟ ಪಡಬಾರದೆಂದು ಈ ಎಲ್ಲಾ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಕನಕದಾಸರ ಪ್ರತಿಮೆಯನ್ನು ಮೈಸೂರು ನಗರದಲ್ಲಿ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಶಿಕ್ಷಣ ಹಾಗೂ ಪ್ರತಿಭೆ ಯಾರ ಅಥವಾ ಯಾವ ಜಾತಿ ಸ್ವತ್ತು ಅಲ್ಲ

ಶೇಕಡ 90 ಅಂಕಗಳನ್ನು ಪಡೆಯುವುದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾತ್ರ ಸಾಧ್ಯ. ಅದಕ್ಕಾಗಿ ಅವರು ಸಾಕಷ್ಟು ಶ್ರಮವಹಿಸಿರುತ್ತಾರೆ. ನಾನು ಕೂಡಾ ಹತ್ತನೇ ತರಗತಿವರೆಗೆ ವಿದ್ಯಾವರ್ಧಕ ಶಾಲೆಯಲ್ಲಿ ಮೊದಲಿಗನಾಗಿದ್ದೆ. ನಂತರ ಪಿಯುಸಿ ತರಗತಿಗಳಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಆಯ್ದುಕೊಂಡಿದ್ದರಿಂದ ಸ್ವಲ್ಪ ಶ್ರಮ ವಹಿಸಬೇಕಾಯಿತು. ಪಿಯುಸಿ ಹಾಗೂ ಬಿ ಎಸ್ ಸಿ ಮತ್ತು ಲಾ ವ್ಯಾಸಂಗವನ್ನು ಸೆಕೆಂಡ್ ಕ್ಲಾಸಿನಲ್ಲಿ ಪಾಸ್ ಮಾಡಿದೆ.ಆದರೆ ವಿದ್ಯಾರ್ಥಿ ಜೀವನದಲ್ಲಿ ಒಮ್ಮೆಯೂ ಫೇಲ್ ಆಗಲಿಲ್ಲ ಎಂದು ಮುಖ್ಯಮಂತ್ರಿಗಳು ಸ್ಮರಿಸಿದರು

ಪ್ರತಿದಿನ ಅಭ್ಯಾಸ ಮಾಡಲು ಸಲಹೆ

ಆದ್ದರಿಂದ ಶಿಕ್ಷಕರು ಮಾಡುವ ಪಾಠವನ್ನು ಆಯಾಯ ದಿನದಂದೇ ಅಭ್ಯಾಸ ಮಾಡಲು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಪ್ರತಿದಿನ ಐದಾರು ಗಂಟೆಗಳ ಕಾಲ ಅಭ್ಯಾಸ ಮಾಡಲು ಹೇಳಿದರು. ಶಿಕ್ಷಣ ಹಾಗೂ ಪ್ರತಿಭೆ ಯಾರ ಅಥವಾ ಯಾವ ಜಾತಿ ಸ್ವತ್ತು ಅಲ್ಲ . ವಿವೇಕಾನಂದರು ಹೇಳಿದಂತೆ ಸುಪ್ತವಾದ ಪ್ರತಿಭೆಯನ್ನು ವಿಕಸನಗೊಳಿಸುವುದೇ ಶಿಕ್ಷಣ ಎಂದರು.

ನೀತಿ ಮತ್ತು ಶಿಸ್ತು ರೂಢಿಸಿಕೊಳ್ಳುವುದೇ ನಿಜವಾದ ಶಿಕ್ಷಣ

ಹಿಂದುಳಿದ ವರ್ಗಗಳು 2ಎ ಕೆಟಗರಿಗೆ ಸೇರುತ್ತವೆ ಆದರೆ ಇದನ್ನು ಮೀರಿ ಮೆರಿಟ್ ನಲ್ಲಿ ಅಂಕ ಗಳಿಸಿ ಸೀಟ್ ಪಡೆಯಲು ಪ್ರಯತ್ನಿಸಬೇಕು ಅದಕ್ಕಾಗಿ ಶ್ರಮವಹಿಸಬೇಕು. ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದಲ್ಲಿ ಅವರು ಹೆಚ್ಚು ಅಂಕಗಳನ್ನು ತೆಗೆಯಲು ಸಹಕಾರಿಯಾಗುತ್ತದೆ. ಜೀವನದಲ್ಲಿ ಮೇಲೆ ಬಂದ ಮೇಲೆ ನಡೆದು ಬಂದ ಹಾದಿಯನ್ನು ಮರೆಯಬಾರದು ಸಮಾಜದಲ್ಲಿ ತುಳಿತಕ್ಕೊಳಗಾದವರ ಅವಕಾಶ ವಂಚಿತರ ಸೇವೆ ಮಾಡಬೇಕು. ಹುಟ್ಟು ಆಕಸ್ಮಿಕ ಸಾವು ನಿಶ್ಚಿತ ಇವೆರಡರ ನಡುವಿನ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದರು.

ವಿಶ್ವಮಾನವರಾಗಲು ಪ್ರಯತ್ನಿಸೋಣ

ಕುವೆಂಪು ಹೇಳುತ್ತಾರೆ ‘ಹುಟ್ಟುವಾಗ ಎಲ್ಲರೂ ವಿಶ್ವಮಾನವರು ಬೆಳೆಯುತ್ತಾ ಬೆಳೆಯುತ್ತಾ ಜಾತಿ ಇತ್ಯಾದಿಗಳನ್ನು ರೂಢಿಸಿ ಕೊಂಡು ಅಲ್ಪಮಾನವರಾಗಿ ಬಿಡುತ್ತಾರೆ ನಾವು ವಿಶ್ವಮಾನವರಾಗಲು ಪ್ರಯತ್ನಿಸೋಣ. ಅಲ್ಪ ಮಾನವರಾಗುವುದು ಬೇಡ. ಸಮಾಜವನ್ನು ಸರ್ವಜನಾಂಗದ ಶಾಂತಿಯ ತೋಟ ಮಾಡೋಣ ಶಿಕ್ಷಣದ ಮೂಲ ಧ್ಯೇಯವು ಅದೇ ಎಂದರು.

1988ರಲ್ಲಿ 37 ವರ್ಷಗಳ ಹಿಂದೆ ನಾನು ಸಾರಿಗೆ ಮಂತ್ರಿಯಾಗಿದ್ದಾಗ ಕನಕದಾಸ ಜಯಂತಿಯ 500ನೇ ವರ್ಷಾಚರಣೆಯನ್ನು ಆಚರಿಸಲಾಯಿತು ಎಂದು ಸ್ಮರಿಸಿದ ಮುಖ್ಯಮಂತ್ರಿಗಳು, ಕನಕದಾಸರ ಒಬ್ಬ ಕವಿ, ಸಂತ, ದಾರ್ಶನಿಕ ಎಂದು ಜೀವನವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು.ಕನಕದಾಸರು ಹಿಂದುಳಿದ ಜಾತಿಗೆ ಸೇರಿದ್ದರಿಂದ ಅನೇಕ ಅಪಮಾನಗಳನ್ನು ಎದುರಿಸಬೇಕಾಯಿತು. ಅದನ್ನೆಲ್ಲಾ ಮೀರಿ ಅವರು ಸಂತರಾದ ಬಗೆಯನ್ನು ವಿದ್ಯಾರ್ಥಿಗಳಿಗೆ ಕತೆಗಳ ಮೂಲಕ ವಿವರಿಸಿದರು.

ರಾಮಧಾನ್ಯ ಚರಿತೆ

ಅಕ್ಕಿಗೂ ರಾಗಿಗೂ ಒಮ್ಮೆ ಯಾರು ಶ್ರೇಷ್ಠ ಎನ್ನುವ ಪೈಪೋಟಿ ಶುರುವಾಯಿತು. ಎರಡೂ ಶ್ರೀರಾಮನ ಬಳಿ ಹೋದವು. ಆಗ ಒಂದು ಹಗೆಯಲ್ಲಿ ರಾಗಿ ಮತ್ತೊಂದರಲ್ಲಿ ಭತ್ತ ಹಾಕಲಾಯಿತು ಮತ್ತು ಅದನ್ನು ಆರು ತಿಂಗಳ ನಂತರ ಪರೀಕ್ಷಿಸಲು ತೀರ್ಮಾನಿಸಲಾಯಿತು. ಆರು ತಿಂಗಳ ನಂತರ ಪರೀಕ್ಷಿಸಲಾಗಿ ಭತ್ತವು ಬೂದಿ ಹಿಡಿದು ಹಾಳಾಗಿತ್ತು , ಅದೇ ರಾಗಿ ಘಮಘಮಿಸುತ್ತಿತ್ತು.

ಇದರಿಂದ ಬಡವರ ಆಹಾರವಾದ ರಾಗಿಯು ಸರ್ವಶ್ರೇಷ್ಠ ಎಂದು ಸಾಬೀತಾಯಿತ್ತು. ಮಾತ್ರವಲ್ಲ ಸತ್ವವುಳ್ಳ ಆಹಾರ ಎಂದು ಸಾಬೀತಾಯಿತು . ಇದರಿಂದ ರಾಗಿ ಕಳಪೆಯಲ್ಲ ಅಕ್ಕಿಯನ್ನು ಶ್ರೀಮಂತರು ಉಪಯೋಗಿಸುತ್ತಾರೆ ಎಂದು ಅದು ಮೇಲಲ್ಲ ಎಂದು ಮಕ್ಕಳಿಗೆ ರಾಮಧಾನ್ಯ ಚರಿತೆ ಕತೆ ಹೇಳಿದರು.ಸಮಾಜದಲ್ಲಿ ಕಟ್ಟಕಡೆಯ ವ್ಯಕ್ತಿಗೂ ಅನ್ನಭಾಗ್ಯ ಸಿಗಲಿ ಎನ್ನುವ ಉದ್ದೇಶದಿಂದಲೇ ಆ ಯೋಜನೆ ಶುರು ಮಾಡಿದ್ದಾಗಿ ಹೇಳಿದರು.

ವಿದ್ಯಾಸಿರಿ ಯೋಜನೆಯಡಿ ಒದಗಿಸುವ ವಿದ್ಯಾರ್ಥಿವೇತನ 1,500 ರೂ.ಗಳಿಂದ ಮುಂದಿನ ವರ್ಷದಿಂದ ಎರಡು ಸಾವಿರಕ್ಕೆ ಏರಿಸಲಾಗುವುದು.

ಪ್ರೌಢಶಾಲೆಗೆ ಬರುವವರೆಗೂ ನಾನು ಚಪ್ಪಲಿಯನ್ನು ಹಾಕಿಕೊಳ್ಳುತ್ತಿರಲಿಲ್ಲ. ಎಲ್ಲಾ ಶಾಲಾ ಮಕ್ಕಳು ಶೂ ಹಾಕಬೇಕೆಂದು ಶೂಭಾಗ್ಯ ಯೋಜನೆಯನ್ನು ಜಾರಿಗೆ ತರಲಾಯಿತು.

ರಾಜ್ಯದಲ್ಲಿ ಹೆಚ್ಚುವರಿ ಹಾಲು ಉತ್ಪಾದನೆಯಾದ… pic.twitter.com/eaA38p3G5z

— Siddaramaiah (@siddaramaiah) November 22, 2024

Share. Facebook Twitter LinkedIn WhatsApp Email

Related Posts

ಫೆ.10ರ ನಾಳೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಕರೆಂಟ್ ಇರಲ್ಲ | Power Cut

09/02/2026 2:24 PM2 Mins Read

ಕೋಳಿ -ಕುರಿ ಮಾಂಸಕ್ಕಿಂತ ಶಕ್ತಿಶಾಲಿ : ಮೀನಿನ ಈ ಭಾಗ ತಿನ್ನುವುದರಿಂದ ಸಿಗಲಿವೆ ಹಲವು ಪ್ರಯೋಜನಗಳು.!

09/02/2026 2:24 PM1 Min Read

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವಗೆ ಈ ಪ್ರಶ್ನೆ ಹಾಕಿದ MLC ರಮೇಶ್ ಬಾಬು, ಉತ್ತರಿಸ್ತಾರಾ?

09/02/2026 2:21 PM2 Mins Read
Recent News

ಈ ರಾಜ್ಯದಲ್ಲಿ ಹೆಣ್ಣುಮಕ್ಕಳಿಗೆ ಹೆಸರಿಟ್ಟ ಹಿಂದಿದೆ ಇಂಟ್ರೆಸ್ಟಿಂಗ್ ಸೀಕ್ರೇಟ್! ಎಲ್ಲಿ? ಏನದು ಗೊತ್ತಾ? ಈ ಸುದ್ದಿ ಓದಿ

09/02/2026 2:40 PM

ಫೆ.10ರ ನಾಳೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಕರೆಂಟ್ ಇರಲ್ಲ | Power Cut

09/02/2026 2:24 PM

ಕೋಳಿ -ಕುರಿ ಮಾಂಸಕ್ಕಿಂತ ಶಕ್ತಿಶಾಲಿ : ಮೀನಿನ ಈ ಭಾಗ ತಿನ್ನುವುದರಿಂದ ಸಿಗಲಿವೆ ಹಲವು ಪ್ರಯೋಜನಗಳು.!

09/02/2026 2:24 PM

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವಗೆ ಈ ಪ್ರಶ್ನೆ ಹಾಕಿದ MLC ರಮೇಶ್ ಬಾಬು, ಉತ್ತರಿಸ್ತಾರಾ?

09/02/2026 2:21 PM
State News
KARNATAKA

ಫೆ.10ರ ನಾಳೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಕರೆಂಟ್ ಇರಲ್ಲ | Power Cut

By kannadanewsnow0909/02/2026 2:24 PM KARNATAKA 2 Mins Read

ಬೆಂಗಳೂರು: ಕೆಪಿಟಿಸಿಎಲ್ ನಿಂದ ಜಾಲಹಳ್ಳಿ ವಿಭಾಗದ 66/11ಕೆವಿ ಎ೦.ಇ.ಐ ಸಬ್‌ಸ್ಟೇಷನ್ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾರ್ಯ ನಡೆಯುವುದರಿಂದ 10.02.2026 ರಂದು…

ಕೋಳಿ -ಕುರಿ ಮಾಂಸಕ್ಕಿಂತ ಶಕ್ತಿಶಾಲಿ : ಮೀನಿನ ಈ ಭಾಗ ತಿನ್ನುವುದರಿಂದ ಸಿಗಲಿವೆ ಹಲವು ಪ್ರಯೋಜನಗಳು.!

09/02/2026 2:24 PM

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವಗೆ ಈ ಪ್ರಶ್ನೆ ಹಾಕಿದ MLC ರಮೇಶ್ ಬಾಬು, ಉತ್ತರಿಸ್ತಾರಾ?

09/02/2026 2:21 PM

ರೈಲ್ವೆ ಪ್ರಯಾಣಿಕರ ಗಮನಕ್ಕೆ: ಮೈಸೂರು ವಿಭಾಗದ ಈ ರೈಲುಗಳ ಸಂಚಾರ ರದ್ದು, ಮಾರ್ಗ ಬದಲಾವಣೆ

09/02/2026 2:15 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.