ನವದೆಹಲಿ : ಹೆಚ್ಚಿನ ಜನರು ಜೀವ ವಿಮೆ, ಔಷಧಿ, ಕೃಷಿ ಅಥವಾ ಇನ್ನಾವುದೇ ಆಗಿರಲಿ ವಿಮೆಯನ್ನ ಹೊಂದಿರುತ್ತಾರೆ. ವಿಮಾ ಏಜೆಂಟರು ಇದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಯಾಕಂದ್ರೆ ಅವ್ರು ಮನೆಮನೆಗೆ ಹೋಗಿ ವಿಮೆಯನ್ನ ತೆಗೆದುಕೊಳ್ಳುವಂತೆ ಜನರನ್ನ ಮನವೊಲಿಸುತ್ತಾರೆ. ಆದ್ರೆ, ಸ್ವಲ್ಪ ಸಮಯದ ನಂತ್ರ ಅವರ ಸೇವೆಯು ಮೊದಲಿನಂತೆ ಉತ್ತಮವಾಗಿರೋದಿಲ್ಲ. ಅಲ್ದೇ ಅನೇಕ ಚಂದಾದಾರರು ಏಜೆಂಟರ ನಡವಳಿಕೆಯಿಂದ ಅಸಮಾಧಾನಗೊಳ್ಳುತ್ತಾರೆ. ಈ ಹಿಂದೆ, ವಿಮಾ ಅವಧಿಯ ಮಧ್ಯದಲ್ಲಿ ಗ್ರಾಹಕರಿಗೆ ಚಂದಾದಾರರನ್ನ ಬದಲಾಯಿಸುವ ಆಯ್ಕೆ ಇರಲಿಲ್ಲ. ಆದ್ರೆ ಈಗ ನಿಯಮ ಬದಲಾಗಿದೆ.
ಹೊಸ ನಿಯಮದಂತೆ, ಚಂದಾದಾರರು ಶೀಘ್ರದಲ್ಲೇ ಏಜೆಂಟ್ ಪೋರ್ಟಬಿಲಿಟಿಯ ಆಯ್ಕೆಯನ್ನ ಹೊಂದಿರುತ್ತಾರೆ. ನಿಮ್ಮ ವಿಮಾ ಏಜೆಂಟ್ʼನ ಸೇವೆಯಿಂದ ನೀವು ಸಂತೋಷವಾಗಿಲ್ಲದಿದ್ದರೆ, ಈಗ ಅಸ್ತಿತ್ವದಲ್ಲಿರುವ ಪಾಲಿಸಿಯಲ್ಲಿಯೇ ನಿಮ್ಮ ಏಜೆಂಟ್ʼನ್ನ ಬದಲಾಯಿಸುವ ಆಯ್ಕೆಯನ್ನ ನೀವು ಪಡೆಯುತ್ತೀರಿ.
ಚಂದಾದಾರರು ಉತ್ತಮ ಅನುಕೂಲವನ್ನ ಒದಗಿಸಲು, ವಿಮಾ ನಿಯಂತ್ರಕ ಐಆರ್ಡಿಐ ಶೀಘ್ರದಲ್ಲೇ ಪಾಲಿಸಿದಾರರಿಗೆ ಏಜೆಂಟ್ ಪೋರ್ಟಬಿಲಿಟಿಯ ಆಯ್ಕೆಯನ್ನ ನೀಡಲಿದೆ. ವರದಿಯ ಪ್ರಕಾರ, ಏಜೆಂಟ್ ಪೋರ್ಟಬಿಲಿಟಿ ಸಾಮಾನ್ಯ ವಿಮೆಯಲ್ಲಿ ಲಭ್ಯವಿರುವುದಿಲ್ಲ. 20 ವರ್ಷಗಳವರೆಗೆ ಅವಧಿಯ ಮತ್ತು ಆರಂಭಿಕ ಪ್ರೀಮಿಯಂನೊಂದಿಗೆ ಜೀವ ವಿಮಾ ಪಾಲಿಸಿಗಳ ನಂತ್ರ ಪಾಲಿಸಿದಾರನು ಏಜೆಂಟ್ʼನ್ನ ಬದಲಾಯಿಸಬಹುದು. ಪಾಲಿಸಿದಾರರು ವಿಮಾ ವಿನಿಮಯದ ಮೂಲಕ ಬದಲಾಗಬಹುದು.