ಬೆಂಗಳೂರು : ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 422 ಸೀಟ್ ಗಳನ್ನು ಹೆಚ್ಚಳ ಮಾಡಲಾಗಿದೆ. ಪ್ರಸಕ್ತ ವರ್ಷದ ಸರ್ಕಾರಿ ಕೋಟದಲ್ಲಿ 422 ಸೀಟ್ ಹೆಚ್ಚಳ ಮಾಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾಕ್ಟರ್ ಶರಣ ಪ್ರಕಾಶ್ ಪಾಟೀಲ್ ಹೇಳಿಕೆ ನೀಡಿದರು.
ಪ್ರಸಕ್ತ ವರ್ಷದಲ್ಲಿ ಕೆಇಎ ಸೀಟ್ ಗೆ ಅಳವಡಿಸಿಕೊಳ್ಳಲು ಸೂಚನೆ ನೀಡಲಾಗಿದೆ. 1,100 ಖಾಸಗಿ ಮೆಡಿಕಲ್ ಸೀಟ್ ಹೆಚ್ಚಳ ಮಾಡಲಾಗಿದೆ. ಕಳೆದ ವರ್ಷ 12395 ಸರ್ಕಾರಿ ಕೋಟ ಇತ್ತು.ಈ ಮೂಲಕ ಒಟ್ಟು 13945 ಸರ್ಕಾರಿ ಕೋಟ ಏರಿಕೆಯಾಗಿದೆ. ಈ ವರ್ಷದಲ್ಲಿ ಮೆಡಿಕಲ್ ಸೀಟ್ ಗಳಿಗೆ ತುಂಬಾ ಬೇಡಿಕೆ ಇತ್ತು. ಸರ್ಕಾರಿ ಕೋಟಾದ ಅಡಿ ಹೆಚ್ಚುವರಿಯಾಗಿ 572 ಪಿಜಿ ಸೀಟ್ ಕೇಳಿದ್ವಿ. ಈ ಬಾರಿ 422 ಪಿಡಿ ಸೀಟ್ ಸಿಕ್ಕಿರುವ ಮಾಹಿತಿ ಇದೆ ಎಂದು ಬೆಂಗಳೂರಿನಲ್ಲಿ ಸಚಿವ ಶರಣಪ್ರಕಾಶ್ ಪಾಟೀಲ್ ಹೇಳಿಕೆ ನೀಡಿದರು.