ಹುಬ್ಬಳ್ಳಿ : ರಾಜ್ಯದ ಬಿಪಿಎಲ್ ಪಡಿತರಿಗೆ ಈಗಾಗಲೇ ಸರ್ಕಾರ 10 ಕೆಜಿ ಅಕ್ಕಿ ವಿತರಿಸುತ್ತಿದೆ. ಅದರ ಜೊತೆಗೆ ಇನ್ನು ಮುಂದೆ ಬೇಳೆ ಎಣ್ಣೆ ಸಹ ಕೊಡುವ ಚಿಂತನೆ ನಡೆಯುತ್ತಿದೆ ಎಂದು ಆಹಾರ ಇಲಾಖೆಯ ಸಚಿವ ಕೆಎಚ್ ಮುನಿಯಪ್ಪ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಪಿಎಲ್ ಕಾರ್ಡ್ಗಳನ್ನು ಪರಿಷ್ಕಣೆ ಮಾಡಬೇಕಾಗಿದೆ. ಕೇಂದ್ರ ಸರ್ಕಾರ ಲಿಮಿಟ್ ಹೇರಿದೆ. ರಾಜ್ಯದಲ್ಲಿ 17 ಲಕ್ಷ ಹೆಚ್ಚುವರಿ ಕಾರ್ಡಿಗೆ ಪಡಿತರ ನೀಡಲಾಗುತ್ತಿದೆ. ಅದನ್ನು ಹೆಚ್ಚು ಮಾಡಬೇಕು ಎಂದು ಮನವಿ ಮಾಡಿದ್ದೇವೆ. ಜೋಳ ಖರೀದಿಸಿ ಮೂರು ತಿಂಗಳು ಬಿಟ್ಟರೆ ಹುಳಾ ಆಗುತ್ತಿವೆ. ಹೀಗಾಗಿ ಖರೀದಿಸಿದ ತಕ್ಷಣ ಹಂಚಿಕೆ ಮಾಡಲು ಹೇಳಿದ್ದೇನೆ ಎಂದರು.
ಪಡಿತರರಿಗೆ ಇನ್ನುಮುಂದೆ ಅಕ್ಕಿ ಜೊತೆಗೆ ಬೇಳೆ, ಎಣ್ಣೆ ಕೊಡುವ ಬಗ್ಗೆಯೂ ಚಿಂತನೆ ನಡೆದಿದೆ. ಕಾಳಸಂತೆಯಲ್ಲಿ ಪಡಿತರ ವಿಚಾರವಾಗಿ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದೇವೆ. ಸಚಿವ ಕೆ.ಎನ್ ರಾಜಣ್ಣ ಸೆಪ್ಟೆಂಬರ್ ನಲ್ಲಿ ರಾಜ್ಯದಲ್ಲಿ ಕ್ರಾಂತಿ ಅಗಲಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಯಾವುದೇ ಕ್ರಾಂತಿ ಆಗಲ್ಲ ಎಂದರು. ಸಿದ್ದರಾಮಯ್ಯ ವಿವಿಧ ಅಭಿವೃದ್ಧಿ ಕೆಲಸವನ್ನ ಒಡೆಯರಿಗೆ ಹೋಲಿಸಿದ ವಿಚಾರವಾಗಿ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದು ಸಚಿವ ಕೆ.ಎಚ್ ಮುನಿಯಪ್ಪ ತಿಳಿಸಿದರು.