ದಕ್ಷಿಣ ಕನ್ನಡ: ಜಿಲ್ಲೆಯ ಉಜಿರೆಯಲ್ಲಿರುವಂತ ರುಡ್ ಸೆಟ್ ಸಂಸ್ಥೆಯಿಂದ ದ್ವಿಚಕ್ರ ವಾಹನ ದುರಸ್ತಿ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಈ ತರಬೇತಿ ಉಚಿತವಾಗಿ ನೀಡುವುದಲ್ಲದೇ, ತರಬೇತಿ ಅವಧಿಯಲ್ಲಿ ಊಟ, ವಸತಿಯೂ ಉಚಿತವಾಗಿದೆ.
ಈ ಬಗ್ಗೆ ರುಡ್ ಸೆಟ್ ನಿರ್ದೇಶಕರಾದಂತ ಸುರೇಶ್ ಎಂ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಪ್ರತಿಷ್ಠಾನ ಮತ್ತು ಕೆನರಾ ಬ್ಯಾಂಕ್ ಜೊತೆ ಯಾಗಿ 40 ವರ್ಷಗಳಿಂದ ಮುನ್ನಡೆಸುತ್ತಿರುವ ಉಜಿರೆಯ ರುಡ್ ಸೆಟ್ ಸಂಸ್ಥೆ ಯಲ್ಲಿ ದ್ವಿಚಕ್ರ ವಾಹನ ದುರಸ್ತಿ ಉಚಿತ ತರಬೇತಿಯನ್ನು ದಿನಾಂಕ 03-01-2023 ರಿಂದ 01-02-2023 ರವರೆಗೆ
( 30 ದಿನಗಳು ) ನೀಡಲಾಗುವುದು ಎಂದಿದ್ದಾರೆ.
ಅರ್ಹತೆ ಮತ್ತು ದಾಖಲಾತಿಗಳು
1) ಗ್ರಾಮೀಣ BPL ಕಾರ್ಡ್ ಹೊಂದಿರಬೇಕು -ಜೆರಾಕ್ಸ್ ಪ್ರತಿ ಅಥವಾ APL ಕಾರ್ಡ್ ದಾರರು ಉದ್ಯೋಗ ಖಾತ್ರಿ (ಜಾಬ್ ಕಾರ್ಡ) ಹೊಂದಿದ್ದರೆ – ಜೆರಾಕ್ಸ ಪ್ರತಿ
2) 6 ಪೋಟೊ
3) ಆಧಾರ ಕಾರ್ಡ್- ಜೆರಾಕ್ಸ ಪ್ರತಿ 2
ವಯೋಮಿತಿ:– 18 ರಿಂದ 45ವರ್ಷಗಳು
ತರಬೇತಿಯ ಅವಧಿಯಲ್ಲಿ ಊಟ ಮತ್ತು ವಸತಿ ಸಂಪೂರ್ಣವಾಗಿ ಉಚಿತವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಅಂಚೆ ವಿಳಾಸ RUDSET Institute, Ujire-574240. ದೂರವಾಣಿ ಸಂಖ್ಯೆ: 08256 236404, 9902594791, 9591044014, 9980885900, 9448484237 (ಪೋನ್ ಮಾಡುವ ಸಮಯ ಬೆಳ್ಳಗ್ಗೆ 09:30 ರಿಂದ ಸಂಜೆ 06:00 ಗಂಟೆ ಒಳಗಡೆ ಮಾಡಬೇಕಾಗಿ ವಿನಂತಿ). ಆನ್ ಲೈನ್ ಅರ್ಜಿಯನ್ನು www.rudsetitraining.org ಜಾಲತಾಣದ ಮೂಲಕ ಸಲ್ಲಿಸಬಹುದಾಗಿದೆ.
ನಡು ರಸ್ತೆಯಲ್ಲೇ ರೋಮಿಯೋಗಳ ‘ರೊಮ್ಯಾನ್ಸ್’ : ಬೈಕ್ ಓಡಿಸುತ್ತಿದ್ದ ಪ್ರಿಯತಮೆಗೆ ಮುತ್ತಿನ ಸುರಿಮಳೆ..!
ಶಿವಮೊಗ್ಗ: ಜ.6ರಂದು ನಗರದ ಈ ಪ್ರದೇಶಗಲ್ಲಿ ವಿದ್ಯುತ್ ವ್ಯತ್ಯಯ | Power Cut