ಬೆಂಗಳೂರು : ರಾಜ್ಯ ಸರ್ಕಾರದಿಂದ ರೈತರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಕೃಷಿ ಪಂಡಿತ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅದ್ರಂತೆ, ಕೃಷಿ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ರೈತರಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಈ ಸ್ಪರ್ಧೆ ಏರ್ಪಡಿಸಲಾಗಿದ್ದು, ವಿಜೇತರಿಗೆ ಬರೋಬ್ಬರಿ ₹1,25,000 ಬಹುಮಾನ ನೀಡಿ ಗೌರವಿಸಲಿದೆ. ಅದ್ರಂತೆ ಅಸಕ್ತ ಮತ್ತು ಅರ್ಹ ರೈತರು, ಇದೇ ತಿಂಗಳು 20ರೊಳಗೆ ಅರ್ಜಿಯನ್ನ ತಾಲ್ಲೂಕು ಮಟ್ಟದ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಸಲ್ಲಿಸಬೋದು.
ಯಾರ್ಯಾರು ಈ ಸ್ಪರ್ಧೆಗೆ ಸ್ಪರ್ಧಿಸಬೋದು..?
* ರಾಜ್ಯ ಕೃಷಿ ಕ್ಷೇತ್ರದಲ್ಲಿ ವಿನೂತನ/ಹೊಸ ಅನ್ವೇಷಣೆ ಮತ್ತು ಸೃಜನಾತ್ಮಕ ಕಾರ್ಯಗಳಿಂದ ಗಮನಾರ್ಹ ಸಾಧನೆ ಮಾಡಿರವರು.
* ಕೃಷಿ ವಲಯಕ್ಕೆ ಅನ್ವಯಿಸುವಂತೆ ಗಮನಾರ್ಹ/ ವಿಭಿನ್ನವಾದ ಮೂಲ ರೂಪದ ಸಾಧನೆ (Innovation) ಮಾಡಿರವರು.
* ಈ ಹಿಂದೆ ಯಾವುದೇ ಕೃಷಿ ಪಂಡಿತ ಪ್ರಶಸ್ತಿ ಪಡೆಯದವರು.
* ಕೇಂದ್ರ ಅಥವಾ ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ಸದಸ್ಯರು ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ.
ಅರ್ಹತೆಯೇನು..?
* ಕ್ರಿಯಾಶೀಲ ಕೃಷಿಕನಾಗಿರಬೇಕು.
* ಸ್ವಂತ ಜಮೀನು ಇರದಿದ್ರು, ಬೇಸಾಯದಲ್ಲಿ ತೊಡಗಿರುವ ಕೃಷಿಕನು ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ಕೃಷಿ ಪಂಡಿತ ಪ್ರಶಸ್ತಿ ಬಹುಮಾನದ ಮೊತ್ತ..!
* ಪ್ರಥಮ – 1,25,000
* ದ್ವೀತಿಯ – 1,00,000
* ತೃತೀಯ – 75,000
* ಉದಯೋನ್ಮುಖ – ತಲಾ 50,000.