ಬೆಂಗಳೂರು : ದುಬೈನಿಂದ ಅಕ್ರಮ ಚಿನ್ನ ಸಾಗಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ 64ನೇ ಸಿಸಿಎಚ್ ನ್ಯಾಯಾಲಯದಲ್ಲಿ ಆರೋಪಿ ನಟಿ ರನ್ಯಾರಾವ್ ಅವರು ಸಲ್ಲಿಸಿದ ಜಾಮೀನು ಅರ್ಜಿ ಕುರಿತು ಇಂದು ವಿಚಾರಣೆ ನಡೆಯಿತು.ವಿಚಾರಣೆ ಬಳಿಕ ಜಡ್ಜ್ ಜಾಮೀನು ಅರ್ಜಿಯ ಆದೇಶವನ್ನು ಕಾಯ್ದಿರಿಸಿ, ಮಾರ್ಚ್ 27 ರಂದು ತೀರ್ಪು ಪ್ರಕಟಿಸಲಾಗುತ್ತೆ ಎಂದು ತಿಳಿಸಿದರು.
ವಿಚಾರಣೆ ಆರಂಭದಲ್ಲಿ DRI ಪರ ವಕೀಲ ಮಧು ರಾವ್ ಅವರು ವಾದ ಆರಂಭಿಸಿದರು. ಯಾವುದು ಕಾಗ್ನಿಸಬಲ್ ಯಾವುದು ನಾನ್ ಕಾಗ್ನಿಸಬಲ್ ಎಂದು ಕಸ್ಟಮ್ಸ್ ಕಾಯ್ದೆ 135 ರಲ್ಲಿ ಬಹಳ ಸ್ಪಷ್ಟವಾಗಿ ವಿವರಿಸಲಾಗಿದೆ. ಇದು ಕಾಗ್ನಿಸಬಲ್ ಅಪರಾಧವಾಗಿದೆ ಹಾಗೂ ಜಾಮೀನು ರಹಿತವಾಗಿದೆ. ನಟಿ ರನ್ಯಾ ಚಿನ್ನದ ಜೊತೆಗೆ ದುಬೈನಿಂದ ಆಗಮಿಸಿದ್ದಾರೆ.ಬೆಂಗಳೂರು ಏರ್ಪೋರ್ಟ್ಗೆ ಸಂಜೆ 6:30ಕ್ಕೆ ಲ್ಯಾಂಡ್ ಆಗಿದ್ದಾರೆ. ಈ ವೇಳೆ ಪ್ರೋಟೋಕಾಲ್ ಅಧಿಕಾರಿ ಅಲ್ಲಿಗೆ ಹೋಗಿದ್ದಾರೆ. ಅಂದರೆ ರಮ್ಯಾ ರಾನ್ ಗ್ರೀನ್ ಚಾನಲ್ ಮೂಲಕ ಬರುತ್ತಿದ್ದಾರೆ ಎಂದು ಅರ್ಥ ಎಂದು ವಾದಿಸಿದರು.
ಕಸ್ಟಮ್ಸ್ ಏರಿಯಾ, ಇಮ್ಮಿಗ್ರೇಶನ್ ಏರಿಯಾ ಎಲ್ಲಾ ಆದಮೇಲೆ DRI ಅಧಿಕಾರಿಗಳು ನಟಿ ರನ್ಯಾ ರಾವ್ ಳನ್ನು ಮಾತನಾಡಿಸಿದ್ದಾರೆ. ಮೊದಲು ಬ್ಯಾಗ್ ಪರಿಶೀಲಿಸಲಾಗಿದೆ ಅಲ್ಲಿ ಏನು ಪತ್ತೆಯಾಗಿರಲಿಲ್ಲ. ಬಳಿಕ ಆಕೆಯನ್ನು ತಪಾಸಣೆಗೆ ಒಳಪಡಿಸಲಾಗಿದೆ. ಕಸ್ಟಮ್ಸ್ ಕಾಯ್ದೆ 102ರ ಅಡಿಯಲ್ಲಿ ಕೂಡಲೇ ನೋಟಿಸ್ ನೀಡಲಾಗಿದೆ. ಇದನ್ನು ಕೊಡಲೇಬೇಕು ಎಂದಿಲ್ಲ ವಸ್ತು ಪತ್ತೆಯಾದಾಗ ಆರೋಪಿಯ ಸ್ವಾತಂತ್ರ್ಯ ಸಂವಿಧಾನದ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಕಷ್ಟಮ್ಸ್ ಕಾಯ್ದೆ 102ರ ಅಡಿಯಲ್ಲಿ ನೋಟಿಸ್ ನೀಡಿದ್ದೇವೆ ಎಂದು ಮಧು ರಾವ್ ವಾದ ಮಂಡಿಸಿದರು.
ಬಳಿಕ ರನ್ಯಾ ರಾವ್ ಪರ ಹಿರಿಯ ವಕೀಲ ಕಿರಣ್ ಜವಳಿ ಪ್ರತಿವಾದ ಆರಂಭಿಸಿದರು ನೋಟಿಸ್ ನೀಡಿದ್ದೇವೆ ಅಂತಾರೆ ಪಂಚನಾಮೆ ಮಾಡಿದ್ದೇವೆ ಅಂತಾರೆ ಆದರೆ ಆರೋಪಿಯಿಂದ ಒಪ್ಪಿಗೆ ಎಲ್ಲಿ ಪಡೆದಿದ್ದಾರೆ? ಎಂದು ಪ್ರಶ್ನಿಸಿದರು. ಬಳಿಕ ನ್ಯಾಯಾಧೀಶರು ರನ್ಯಾ ರಾವ್ ಜಾಮೀನು ಅರ್ಜಿ ಆದೇಶವನ್ನು ಕಾಯ್ದಿರಿಸಿ ಮಾರ್ಚ್ 27 ರಂದು ಪ್ರಕರಣದ ಕುರಿತು ತೀರ್ಪು ಪ್ರಕಟಿಸಲಿದೆ.