ಬೆಂಗಳೂರು : ದುಬೈ ನಿಂದ ಅಕ್ರಮವಾಗಿ ಚಿನ್ನ ಸಾಗಾಟ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟಿ ರನ್ಯಾ ರಾವ್ ಅವರು ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಈ ಹಿನ್ನೆಲೆ ಇಂದು ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದಲ್ಲಿ ಈ ಒಂದು ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು, ಜಾಮೀನು ಅರ್ಜಿಯ ಆದೇಶವನ್ನು ಕಾಯ್ದಿರಿಸಿ ಪ್ರಕರಣದ ಕುರಿತು ಮಾರ್ಚ್ 14ರಂದು ಆದೇಶ ಪ್ರಕಟಿಸಲಿದ್ದಾರೆ.
ಇಂದು ಆರ್ಥಿಕ ವಿಶೇಷ ನ್ಯಾಯಾಲಯದಲ್ಲಿ ನಟಿ ರನ್ಯಾ ರಾವ್ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದ್ದು, DRI ಪರವಾಗಿ ವಕೀಲ ಮಧು ರಾವ್ ವಾದ ಮಂಡನೆ ಮಾಡಿದರು. 135 (1) A & B ಅಡಿ ಕೇಸ್ ದಾಖಲಿಸಿದ್ದಾರೆ. 50 ಲಕ್ಷ ರೂಪಾಯಿಗಿಂತ ಹೆಚ್ಚಿನ ಅಕ್ರಮ ಸಾಗಾಣೆ ನಿಷಿದ್ಧವಾಗಿದೆ. ಕಸ್ಟಂ ಕಾಯ್ದೆ 104ರ ಅಡಿ ಬಂಧನದ ಅಧಿಕಾರವಿದೆ. ಬಂಧನದ ನಂತರ ಅದಕ್ಕೆ ಕಾರಣಗಳನ್ನು ನೀಡಬೇಕು.
ದುಬೈ ನಿಂದ ವಿಮಾನ ಬಂದು ಏರ್ಪೋರ್ಟ್ ನಲ್ಲಿ ನಿಂತಿತ್ತು. ರಾಜ್ಯದ ಪ್ರೊಟೊಕಾಲ್ ಆಫೀಸರ್ ನೆರವು ಪಡೆದಿದ್ದರು. ಎಲ್ಲವನ್ನು ದಾಟಿ ಕಸ್ಟಮ್ಸ್ ನಂತರ ಗ್ರೀನ್ ಏರಿಯ ದಾಟಿದ ಬಳಿಕ ಶೋಧನೆ ಮಾಡಲಾಗಿದೆ. ಗ್ರೀನ್ ಏರಿಯಾ ದಾಟಿದ ಮೇಲೆ ಅವರನ್ನು ವಶಕ್ಕೆ ಪಡೆಯಲಾಗಿದೆ. ಗ್ರೀನ್ ಚಾನೆಲ್ ಅಂಡಾಟದ ಬಳಿಕ ಅವರನ್ನು ವಶಕ್ಕೆ ಪಡೆಯಲಾಗಿದೆ. ಗ್ರೀನ್ ಚಾನೆಲ್ ದಾಟುವ ಮುನ್ನ ನಾವು ವಶಕ್ಕೆ ಪಡೆದಿಲ್ಲ. ಚಿನ್ನ ಘೋಷಿಸುವ ಉದ್ದೇಶ ಇರಲಿಲ್ಲ.
ಸ್ಟೇಟ್ ಪೊಲೀಸ್ ಪ್ರೋಟೋಕಾಲ್ ಅಧಿಕಾರಿ ಹಾಜರಿದ್ದರು. ಘೋಷಿಸಬೇಕಾದ ವಸ್ತು ನಿಮ್ಮ ಬಳಿ ಇದೆಯೇ ಎಂದು ಪ್ರಶ್ನಿಸಿದಾಗ ರನ್ಯಾ ಅವರು ಇಲ್ಲ ಎಂದು ಉತ್ತರಿಸಿದ್ದರು. ಬ್ಯಾಗ ಶೋಧಿಸಿದಾಗ ಏನು ಸಿಗಲಿಲ್ಲ. ಆ ಬಳಿಕ ಆಕೆಯ ವಯಕ್ತಿಕ ಶೋಧನೆ ನಟಿಸಲಾಗಿದೆ ಸೆಕ್ಷನ್ 102ರ ಅಡಿಯಲ್ಲಿ ಶೋಧನೆಗೆ ಒಳಪಡಿಸಲಾಗಿದೆ. ಇದಕ್ಕೆ ಆಕೆ ಬರವಣಿಗೆ ಮೂಲಕ ಒಪ್ಪಿಗೆ ನೀಡಿದ್ದಾರೆ ನಿಮ್ಮ ಹಾಗೂ ನಿಮ್ಮ ಬ್ಯಾಗ್ ತಪಾಸಣೆ ನಡೆಸಬೇಕೆಂದು ತಿಳಿಸಲಾಯಿತು.ಸೆಕ್ಷನ್ 102ರ ಅಡಿಯ ನಿಯಮದ ಕಟ್ಟು ನಿಟ್ಟಾಗಿ ಪಾಲನೆಯಾಗಿದ್ದು ಬಳಿಕವೇ ವೈಯಕ್ತಿಕ ಶೋಧನೆ ನಡೆಸಲಾಯಿತು.
ವೈಯಕ್ತಿಕಕ್ಕೆ ಏನಾದರೂ ಸಂಬಂಧೀತ ವಸ್ತುಗಳಿವೆ ಎಂದು ಕೇಳಲಾಯಿತು. ಅದಕ್ಕೆ ಅವರು ಚಿನ್ನದ ಬಾರ್ ಗಳಿರಿವುದನ್ನು ಒಪ್ಪಿಕೊಂಡಿದ್ದಾರೆ l ನಟಿ ರನ್ಯಾ ರಾವ್ ಅವರನ್ನು ವಶಕ್ಕೆ ಪಡೆದುಕೊಂಡ ಬಳಿಕ, ತನಿಖೆಗೆ ಅಗತ್ಯವಾದ ಮಾಹಿತಿಗಳನ್ನು ಕೇಳಲಾಗಿತ್ತು.ನಾನು ಟ್ರಾವೆಲ್ ಮಾಡಿ ಸುಸ್ತಾಗಿದ್ದೇನೆ ನಾಳೆ ತನಿಖೆ ಮಾಡಿ ಎಂದು ನಟಿ ರನ್ಯಾ ರಾವ್ ಕೇಳಿಕೊಂಡರು. ಮಹಿಳೆ ಎಂಬ ಕಾರಣಕ್ಕೆ ಮಾನವೀಯತೆಯಿಂದ ಅವಕಾಶ ಕೊಟ್ಟರು. ಹೀಗಾಗಿ ನಿದ್ದೆಗೆ ಅವಕಾಶ ಕೊಟ್ಟಿಲ್ಲವೆಂಬುವುದು ಸುಳ್ಳು.
ರಾತ್ರಿ ವಿಶ್ರಮಿಸಲು ರನ್ಯಾಗೆ ಅವಕಾಶ ನೀಡಲಾಗಿತ್ತು. ರನ್ಯಾ ಆರೋಪಗಳನ್ನು ಡಿ ಆರ್ ಐ ಪರ ವಕೀಲರು ನಿರಾಕರಿಸಿದ್ದಾರೆ.ರಾತ್ರಿ ಸಮನ್ಸ್ ಜಾರಿ ಬಗ್ಗೆ ರನ್ಯಾ ಪರ ವಕೀಲರು ಪ್ರಶ್ನಿಸಿದ್ದಾರೆ. ಆರಂಭದಲ್ಲೇ ವಿಚಾರಣೆಗೊಳಪಡಿಸಲು ಸಮನ್ಸ್ ನೀಡಲೇಬೇಕು. ಪ್ರಕ್ರಿಯೆ ಪಾಲಿಸಿಯೇ ಸಮನ್ಸ್ ನೀಡಲಾಗಿದೆ. ಸ್ಪಾಟ್ ಸಮನ್ಸ್ ನೀಡಿ ಹೇಳಿಕೆಗಳನ್ನು ದಾಖಲಿಸಲಾಗಿದೆ. ಯಾವುದೇ ನಿಯಮ ಉಲ್ಲಂಘನೆ ಆಗಿಲ್ಲ ಮಾರ್ಚ್ 3ರಂದು ಪ್ರಕ್ರಿಯೆ ಆರಂಭವಾಗಿ 4ರಂದು ಪ್ರಕ್ರಿಯೆ ಮುಗಿದಿದೆ. ಹೀಗಾಗಿ ನಾಲ್ಕನೇ ತಾರೀಖಿನಂದು ಆಕೆಯ ಸಹಿ ಪಡೆಯಲಾಗಿದೆ ಎಂದು ವಾದಿಸಿದರು.
ಪೋಲಿಸ್ ಅಧಿಕಾರಿಗಳ ಕುಟುಂಬಕ್ಕೆ ಸಹಾಯ ಮಾಡಲು ಹೇಳಿದ್ದರು. ಪ್ರೋಟೋಕಾಲ್ ಸರ್ವಿಸ್ ವಿರುದ್ಧ ಡಿ ಆರ್ ಐ ನೆರವಾದ ಆರೋಪ ಮಾಡಿದ್ದು, ಪೊಲೀಸ್ ಪ್ರೊಟೋಕಾಲ್ ಸರ್ವಿಸ್ ಸಹಾಯದಿಂದಲೇ ಸ್ಮಗ್ಲಿಂಗ್ ನಡೆದಿದೆ. ಸ್ಟೇಟ್ ಪೊಲೀಸ್ ಪ್ರೋಟೋಕಾಲ್ ಆಫೀಸರ್ ಗೂ ಕೂಡ ಸಮನ್ಸ್ ನೀಡಲಾಗಿದೆ. ಆ ಅಧಿಕಾರಿಯ ಹೇಳಿಕೆಯನ್ನು ದಾಖಲಿಸಲಾಗಿದೆ ಇದು ನಮ್ಮ ಆರೋಪವಾಗಿದೆ ಎಂದು ಡಿಆರ್‌ಐ ಪರ ವಕೀಲ ಮಧು ರಾವ್ ವಾದಿಸಿದರು.
ಪೊಲೀಸ್ ಪ್ರೋಟೋಕಾಲ್ ಪಡೆದುಕೊಂಡು ಗೋಲ್ಡ್ ಸ್ಮಲಿಂಗ್ ಮಾಡಲಾಗಿದೆ. ಹೀಗಾಗಿ ಇದೊಂದು ಗಂಭೀರವಾದ ಅಪರಾಧವಾಗಿದೆ. ಅಲ್ಲದೆ ಆಕೆಗೆ ದುಬೈ ಐಡೆಂಟಿಟಿ ಕಾರ್ಡ್ ಕೂಡ ಇದೆ. ಹೀಗಾಗಿ ಆಕೆ ದೇಶ ಬಿಟ್ಟು ಪರಾರಿ ಆಗುವ ಸಾಧ್ಯತೆ ಇದ್ದು ಚಿನ್ನ ಕಳ್ಳ ಸಾಗಾಣಿಯ ಪ್ರಮಾಣವನ್ನು ಕೂಡ ಗಮನಿಸಬೇಕಾಗಿದೆ. ಹವಾಲ ಮೂಲಕ ಚಿನ್ನದ ಬದಲು ನಗದು ವರ್ಗಾವಣೆ ಆಗಿದೆ. ಹೀಗಾಗಿ ಈ ಹವಾಲಾ ಬಗ್ಗೆಯೂ ತನಿಖೆ ನಡೆಸಬೇಕಿದೆ.
ಇಷ್ಟು ಚಿನ್ನ ಖರೀದಿಸಲು ಹಣ ಎಲ್ಲಿಂದ ಬಂತು? ಹಣ ಹೇಗೆ ವರ್ಗಾಯಿಸಲಾಯಿತು ಎಂಬುದರ ಬಗ್ಗೆ ತನಿಖೆ ಅಗತ್ಯವಾಗಿದೆ. ಸಿಂಡಿಕೇಟ್ ಇದರಲ್ಲಿ ಭಾಗಿಯಾಗಿರುವ ಬಗ್ಗೆ ತನಿಖೆ ಆಗಬೇಕಿದೆ. ಈಕೆಗೆ ಇರುವ ಅಂತರಾಷ್ಟ್ರೀಯ ಲಿಂಕ್ ಬಗ್ಗೆಯೂ ತನಿಖೆ ಆಗಬೇಕು. ಹವಾಲ ಬಗ್ಗೆಯೂ ತನಿಖೆ ಆಗುತ್ತಿದೆ. ರಾಷ್ಟ್ರೀಯ ಭದ್ರತೆ ವಿಷಯವು ಇರುವುದರಿಂದ ಈಕೆಗೆ ಜಾಮೀನು ನೀಡಬಾರದು. ಎಂದು ಡಿಆರ್‌ಐ ಪರ ವಕೀಲರು ವಾದ ಮಂಡಿಸಿದರು.
ಮಹಿಳೆಯಾಗಿದ್ದರು ಆಕೆಯ ಕೃತ್ಯವನ್ನು ಪರಿಗಣಿಸಬೇಕು. ಕೃತ್ಯವನ್ನು ಪರಿಗಣಿಸಿ ಜಾಮೀನು ನಿರಾಕರಿಸಬೇಕು ರಾಧಿಕಾ ಅಗರ್ವಾಲ್ ಕೇಸಿನ ಸುಪ್ರೀಂ ತೀರ್ಪು ಪರಿಗಣಿಸಬೇಕು. ಅಲ್ಲದೇ 2ನೇ ಆರೋಪಿಯನ್ನು ಕೂಡ ಬಂಧಿಸಿ ವಿಚಾರಣೆ ಮಾಡಲಾಗಿದೆ ಆಕೆಯ ಅಪರಾಧದ ಮನಸ್ಥಿತಿ ಪರಿಗಣಿಸಿದರೆ ಆಕೆ ಜೈಲಿನಲ್ಲಿ ಇರುವುದೇ ಸೂಕ್ತ. ಜಾಮೀನು ನೀಡಿದರೆ ಸಮಸ್ಯೆ ಆಗಲಿದೆ ದೊಡ್ಡ ಮಟ್ಟದ ಸ್ಮಗ್ಲಿಂಗ್ ಆಗಿರುವುದನ್ನು ಪರಿಗಣಿಸಬೇಕು ದೇಶ ತೊರೆಯುವ ಸಾಧ್ಯತೆ ಹಾಗೂ ಸಾಕ್ಷಿ ನಾಶ ಸಾಧ್ಯತೆ ಇದ್ದು, ಹಾಗಾಗಿ ಸಾಧ್ಯತೆಯನ್ನು ಪರಿಗಣಿಸಿ ಜಾಮೀನು ನಿರಾಕರಿಸಬಹುದು ಎಂದು ಮಧು ರಾವ್ ವಾದಿಸಿದರು.