ಬೆಂಗಳೂರು : ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಾಟ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸದ್ಯಕ್ಕೆ ನಟಿ ರನ್ಯಾರಾವ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಈ ಪ್ರಕರಣದಲ್ಲಿ ಜಾಮೀನು ಕೋರಿ ರನ್ಯಾ ಅರ್ಜಿ ಸಲ್ಲಿಸಿದ್ದು ಇಂದು ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದಲ್ಲಿ ಇವರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿತು. ವಿಚಾರಣೆಯ ಬಳಿಕ ಡಿಆರ್‌ಐ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದ್ದರಿಂದ ನ್ಯಾಯಾಲಯವು ಮಾರ್ಚ್ 21ರಂದು ವಿಚಾರಣೆ ಮುಂದೂಡಿತು.
ಇಂದು ನಟಿ ರನ್ಯಾ ರಾವ್ ಅವರ ಜಾಮೀನಿಗೆ ಆಕ್ಷೇಪಣೆ ಸಲ್ಲಿಸಲು DRI ಕಾಲಾವಕಾಶ ಕೋರಿ ಮನವಿ ಮಾಡಿತು. ಈ ವೇಳೆ ಕೋರ್ಟ್ ಆಕ್ಷೇಪಣೆ ಸಲ್ಲಿಸಲು DRI ಗೆ ಅನುಮತಿ ನೀಡಿತು. ಡಿ ಆರ್ ಐ ಪರವಾಗಿಲ ಮಧು ಎನ್ ರಾವ್ ಅವರಿಂದ ಕಾಲಾವಕಾಶಕ್ಕಾಗಿ ಕೋರಿಕೆ ಮಾಡಲಾಯಿತು. ಬಳಿಕ ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ವಿಚಾರಣೆ ಮಾರ್ಚ್ 21ಕ್ಕೆ ಮುಂದೂಡಿತು.