ಬೆಂಗಳೂರು: ಪ್ರತಿನಿತ್ಯ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಳತವಾಗುತ್ತಿದೆ. ನೀವೆನಾದರೂ ದಸರಾ ಬಂತು ಅಂತಾ ಶಾಂಪಿಗ್ ಹೋಗುವ ಪ್ಲಾನ್ ಇದೆ ಚಿನ್ನಾಭರಣದ ಮಳಿಗೆಗೂ ಭೇಟಿ ನೀಡಿ ಚಿನ್ನ ಖರೀದಿಸುವ ಯೋಚನೆ ಮಾಡಿದ್ದಿರಾ ಇಂದು ಚಿನ್ನ, ಬೆಳ್ಳಿ ದರದಲ್ಲಿ ಏರಿಕೆಯಾಗಿದೆ. ಇವತ್ತಿನ ಚಿನ್ನಾಭರಣದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
BIGG NEWS: ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಸಚಿವ ಸುಧಾಕರ್ ಭೇಟಿ; ಕರೆಂಟ್ ಸಮಸ್ಯೆಯಿಂದ ಸಾವಾಗಿಲ್ಲ; ಶ್ರೀರಾಮುಲು
ದೇಶದಲ್ಲಿ ಇವತ್ತು ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 170 ರೂಪಾಯಿ ಏರಿಕೆ ನಂತರ 50,130 ರೂಪಾಯಿ ಹಾಗೂ 22 ಕ್ಯಾರೆಟ್ 10 ಗ್ರಾಂ ಚಿನ್ನದ ಮೇಲೆ 150 ರೂಪಾಯಿ ಏರಿಕೆ ನಂತರ 45,950 ರೂಪಾಯಿ ಇದೆ. 1 ಕೆಜಿ ಬೆಳ್ಳಿ ಬೆಲೆಯಲ್ಲಿ 300 ರೂಪಾಯಿ ಏರಿಕೆ ನಂತರ 56,700 ರೂಪಾಯಿಗೆ ತಲುಪಿದೆ.
ಇನ್ನೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 160 ರೂಪಾಯಿ ಏರಿಕೆ ನಂತರ 50,180 ರೂಪಾಯಿ ಇದೆ.
BIGG NEWS: ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಸಚಿವ ಸುಧಾಕರ್ ಭೇಟಿ; ಕರೆಂಟ್ ಸಮಸ್ಯೆಯಿಂದ ಸಾವಾಗಿಲ್ಲ; ಶ್ರೀರಾಮುಲು
ನಿನ್ನೆ 51,020 ರೂಪಾಯಿ ಇತ್ತು. ಅದೇ ರೀತಿಯಾಗಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 150 ರೂಪಾಯಿ ಹೆಚ್ಚಾಗಿದ್ದು, 46,000 ರೂಪಾಯಿ ಇದೆ. ನಿನ್ನೆ 45,850 ರೂಪಾಯಿಗೆ ತಲುಪಿತ್ತು. ಒಂದು ಕೆಜಿ ಬೆಳ್ಳಿ ಬೆಲೆ ಇಂದು 62,000 ರೂಪಾಯಿ ಇದೆ. ಬೆಳ್ಳಿ ಬೆಲೆಯ ಮೇಲೆ 400 ರೂಪಾಯಿ ಏರಿಕೆಯಾಗಿದೆ. ನಿನ್ನೆ 61,600 ರೂಪಾಯಿಗೆ ಬಂದು ನಿಂತಿತ್ತು. ರಾಜ್ಯದ ಇತರೆ ಪ್ರಮುಖ ನಗರಗಳಾದ ಮೈಸೂರು, ದಾವಣಗೆರೆ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಬಹುತೇಕ ಎಲ್ಲಾ ಕಡೆ ಇಂದು ಇದೇ ಚಿನ್ನಾಭರಣಗಳ ದರಗಳು ಇವೆ.