ರಾಯಚೂರು : ಕಣ್ಣಿಗೆ ಖಾರದಪುಡಿ ಎರಚಿ ಜ್ಯುವೆಲ್ಲರ್ ಶಾಪ್ ಗೆ ಕಳ್ಳರು ಕನ್ನ ಹಾಕಿದ ಘಟನೆ ಮುದಗಲ್ ರಾಮಲಿಂಗೇಶ್ವರ ಕಾಲೋನಿಯಲ್ಲಿ ನಡೆದಿದೆ.
ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕಿನ ಮುದಗಲ್ ನಲ್ಲಿ ಘಟನೆ ನಡೆದಿದ್ದು, ಅಂಗಡಿ ಮಾಲೀಕ ಶ್ರವಣ್ ಅವರ ಕಣ್ಣಿಗೆ ಖಾರದಪುಡಿ ಎರಚಿದ ಖದೀಮರು 20 ಲಕ್ಷ ರೂ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಮುದಗಲ್ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BIGG NEWS : ಅ.28 ರಂದು ರಾಜ್ಯದ ಶಾಲೆಗಳಲ್ಲಿ ‘ಕೋಟಿ ಕಂಠ ಗಾಯನ’ : ಮೊಳಗಲಿದೆ ‘ಬಾರಿಸು ಕನ್ನಡ ಡಿಂಡಿಮವ’