ಬೆಂಗಳೂರು : ಐಶ್ವರ್ಯ ಗೌಡ ನಿವಾಸದಲ್ಲಿ 2.25 ಕೋಟಿ ನಗದು ಪತ್ತೆಯಾಗಿದೆ ಎಂದು ಇಡಿ ಅಧಿಕಾರಿಗಳು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಐಶ್ವರ್ಯ ಗೌಡ, ಮಾಜಿ ಸಚಿವ ವಿನಯ್ ಕುಲಕರ್ಣಿ, ಹಾಗೂ ಶಿಲ್ಪಾಗೌಡ ನಿವಾಸ ಸೇರಿದಂತೆ 14 ಕಡೆ ಇತ್ತೀಚಿಗೆ ಇಡಿ ಅಧಿಕಾರಿಗಳು ದಾಳಿ ನಡೆಸಿದರು. ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ವಂಚಿಸಿದ್ದ ಐಶ್ವರ್ಯ ಗೌಡ. PMLA ಕಾಯ್ದೆಯ ಅಡಿ ಇಡಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದರು.
ಹಣ ವರ್ಗಾವಣೆ ಅಪರಾಧದಲ್ಲಿ ಭಾಗಿಯಾಗಿರುವುದು ಕಂಡುಬಂದ ಕಾರಣ ಬೆಂಗಳೂರಿನ ಇಡಿ, ಐಶ್ವರ್ಯ ಗೌಡ ಅವರನ್ನು 24.04.2025 ರಂದು ಪಿಎಂಎಲ್‌ಎ, 2002 ರ ಅಡಿಯಲ್ಲಿ ಬಂಧಿಸಿದೆ. ಬಂಧನದ ನಂತರ, ಅವರನ್ನು ಗೌರವಾನ್ವಿತ ವಿಶೇಷ ನ್ಯಾಯಾಲಯದ (ಪಿಎಂಎಲ್‌ಎ) ಮುಂದೆ ಹಾಜರುಪಡಿಸಲಾಯಿತು. ಮತ್ತು ಗೌರವಾನ್ವಿತ ನ್ಯಾಯಾಲಯವು ಆರೋಪಿಯ ಇಡಿ ಕಸ್ಟಡಿಗೆ ನೀಡಲು ಅದೇಶಿಸಿತು.
ಪಿಎಂಎಲ್‌ಎ, 2002 ರ ನಿಬಂಧನೆಗಳ ಅಡಿಯಲ್ಲಿ ಐಶ್ವರ್ಯ ಗೌಡ ಮತ್ತು ಅವರ ಸಹಚರರಿಗೆ ಸಂಬಂಧಿಸಿದ 14 ಸ್ಥಳಗಳಲ್ಲಿ ಇಡಿ 24.04.2025 ಮತ್ತು 25.04.2025 ರಂದು ಶೋಧ ಕಾರ್ಯಾಚರಣೆಗಳನ್ನು ನಡೆಸಿತು. ಶೋಧ ಕಾರ್ಯಾಚರಣೆಗಳ ಸಮಯದಲ್ಲಿ, ವಿವಿಧ ಅಪರಾಧ ದಾಖಲೆಗಳು, ಡಿಜಿಟಲ್ ಸಾಧನಗಳು ಮತ್ತು ರೂ. 2.25 ಕೋಟಿ (ಅಂದಾಜು) ವರೆಗಿನ ನಗದು ಪತ್ತೆಯಾಗಿ ವಶಪಡಿಸಿಕೊಳ್ಳಲಾಗಿದೆ ಎಂದು ಇಡೀ ತನ್ನ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ED, Bengaluru has arrested Ms Aishwarya Gowda, under PMLA, 2002 on 24.04.2025 for being found involved in the offense of money laundering. After the arrest, she was produced before the Hon’ble Special Court (PMLA) and the Hon’ble Court was pleased to grant ED custody of the…
— ED (@dir_ed) April 26, 2025