ಬೆಂಗಳೂರು:ಸೌದಿ ಅರೇಬಿಯಾದಿಂದ 1.29 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ಕಳ್ಳಸಾಗಣೆ ಮಾಡುವ ಯತ್ನವನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಕಸ್ಟಮ್ಸ್ ಅಧಿಕಾರಿಗಳು ವಿಫಲಗೊಳಿಸಿದ್ದು, 11 ಮಹಿಳೆಯರು ಸೇರಿದಂತೆ 12 ಜನರನ್ನು ಬಂಧಿಸಿದ್ದಾರೆ.
ಬೆಂಗಳೂರು ಕಸ್ಟಮ್ಸ್‌ನಿಂದ ಎಕ್ಸ್‌ನಲ್ಲಿ (ಹಿಂದಿನ ಟ್ವಿಟರ್) ಹೇಳಿಕೆಯ ಪ್ರಕಾರ ಎಲ್ಲಾ ಪ್ರಯಾಣಿಕರು ಮದೀನಾದಿಂದ ಮಸ್ಕತ್ ಮೂಲಕ ಆಗಮಿಸಿದರು ಮತ್ತು ಏರ್ ಕಸ್ಟಮ್ಸ್ ಅಧಿಕಾರಿಗಳು ಅವರನ್ನು ತಡೆದರು ಎಂದು ಮಾಹಿತಿ ಹಂಚಿಕೊಂಡಿದೆ.
ಎಕ್ಸ್ ನಲ್ಲಿ ಹಂಚಿಕೊಂಡಿರುವ ಛಾಯಾಚಿತ್ರದಲ್ಲಿ ಬಂಧಿತ ಪ್ರಯಾಣಿಕರಿಂದ ವಶಪಡಿಸಿಕೊಳ್ಳಲಾದ ಸರಗಳು ಮತ್ತು ಬಳೆಗಳು ಸೇರಿದಂತೆ ಎರಡು ಕಿಲೋ ಚಿನ್ನಾಭರಣಗಳನ್ನು ತೋರಿಸಲಾಗಿದೆ.
ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಟಿಪ್ಪಣಿಯಲ್ಲಿ ತಿಳಿಸಲಾಗಿದೆ.