ಬೆಂಗಳೂರು : ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ಕನ್ನಡದ ಪ್ರಸಿದ್ದ ಸಿನಿಮಾಟೋಗ್ರಾಫರ್ ಅಶೋಕ್ ಕಶ್ಯಪ್ (Ashok Kashyap) ಅವರನ್ನು ನೇಮಕ ಮಾಡಿ, ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಸುನೀಲ್ ಪುರಾಣಿಕ್ ಅವರಿಂದ ತೆರವಾಗಿದ್ದ ಕರ್ನಾಟಕ ಚಲನಚಿತ್ರ ಅಕಾಡಮಿ ಅಧ್ಯಕ್ಷ ಸ್ಥಾನವನ್ನು ಸರ್ಕಾರ ಭರ್ತಿ ಮಾಡಿದ್ದು, ಅಶೋಕ್ ಕಶ್ಯಪ್ (Ashok Kashyap) ಅವರನ್ನು ನೇಮಕ ಮಾಡಿ, ರಾಜ್ಯ ಸರಕಾರ ಆದೇಶ ಹೊರಡಿಸಿದೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವ್ಯಾಪ್ತಿಯ ಕರ್ನಾಟಕ ಚಲನಚಿತತ್ರ ಅಕಾಡಮಿ ಬೆಂಗಳೂರು ಇದರ ಅಧ್ಯಕ್ಷರ ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಮೂರು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ನೇಮಿಸಿ ಕನ್ನಡ, ಸಂಸ್ಕೃತಿ ಹಾಗೂ ವಾರ್ತಾ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ.
ಸ್ಯಾಂಡಲ್ ವುಡ್ ನ ಹಲವು ಸಿನಿಮಾಗಳಿಗೆ ಅಶೋಕ್ ಕಶ್ಯಪ್ ಸಿನಿಮಾಟೋಗ್ರಾಫರ್ ಆಗಿ ಕೆಲಸ ಮಾಡಿದ್ದು, ಈ ಹಿಂದೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ.
BIGG NEWS : ಬೆಂಗಳೂರಿಗರೇ ಗಮನಿಸಿ : ನಾಳೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ |Power Cut
BREAKING NEWS: ಕರ್ನಾಟಕದಲ್ಲಿ ಜಾನುವಾರು ಸಾಗಣೆಗೆ ಆನ್ಲೈನ್ ಪಾಸ್ ಪರ್ಮಿಟ್ ಕಡ್ಡಾಯ, ನವೆಂಬರ್ 17ರಿಂದ ಜಾರಿಗೆ