ಕುಣಿಗಲ್ (ತುಮಕೂರು) : ಮದುವೆಯಾಗಿ ಗಂಡನ ಮನೆಗೆ ಹೋಗದೇ ತವರು ಮನೆಯಲ್ಲೇ ಇದ್ದ ಮಗಳಿಗೆ ಗಂಡನ ಮನೆಗೆ ಹೋಗು ಅಂತ ಹೆತ್ತವರು ಬುದ್ದಿ ಹೇಳಿದಕ್ಕೆ ಮಗಳು ಮನೆಯಲ್ಲೇ ನೇಣಿಗೆ ಶರಣಾಗಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ಪಟ್ಟಣದ ಉಪ್ಪಾರಬೀದಿ (ಮಾವಿನತೋಪು)ಯಲ್ಲಿ ನಡೆದಿದೆ. ಐಶ್ವರ್ಯಾ(20) ಆತ್ಮಹತ್ಯೆ ಮಾಡಿಕೊಂಡಿರುವ ಯುವತಿಯಾಗಿದ್ದಾರೆ.
2021ರಲ್ಲಿ ಆಕೆಯ ಮೈದುನ ಹಾಗೂ ನಾದಿನಿಗೆ ಕರೊನಾ ಸೋಂಕು ತಗುಲಿತ್ತು ಈ ವೇಳೇ ಐಶ್ವರ್ಯ ಗರ್ಭಿಣಿಯಾಗಿದ್ದಳು. ಆದರಿಂದ ಮೃತ ಐಶ್ವರ್ಯಾಳನ್ನು ಅಗ ಗಂಡ ಅನಿಲ್ ಮುಂಜಾಗ್ರತ ಕ್ರಮವಾಗಿ ತವರು ಮನೆಗೆ ಬಿಟ್ಟು ಹೋಗಿದ್ದ ಎನ್ನಲಾಗಿದೆ. ಈ ನಡುವೆ ಮಗು ಆಗಿ ಬಾಣಂತನ ಮುಗಿದ ನಂತರ ಗಂಡನ ಮನೆಗೆ ಹೋಗುವಂತೆ ಮಗಳಿಗೆ ತಾಯಿ ಬುದ್ಧಿವಾದ ಹೇಳುತ್ತಿದ್ದರು ಎನ್ನಲಾಗಿದೆ. ಈ ನಡುವೆ ಇದರಿಂದ ಬೇಸತ್ತ ಐಶ್ವರ್ಯ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಪ್ರಕರಣ ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BIGG NEWS: ಯಾವುದೇ ಮುನ್ಸೂಚನೆಯಿಲ್ಲದೆ ‘ಟ್ವಿಟರ್’ ನ 5500 ಗುತ್ತಿಗೆ ನೌಕರರನ್ನು ವಜಾಗೊಳಿಸಿದ ಎಲೋನ್ ಮಸ್ಕ್
BIGG NEWS: ಶಿರಾಡಿ ಘಾಟ್ ಹೆದ್ದಾರಿ ದುರಸ್ತಿಗೊಳಿಸುವಂತೆ ರಾಜ್ಯಸಭಾ ಸದಸ್ಯ ವಿರೇಂದ್ರ ಹೆಗ್ಗಡೆಗೆ ಮನವಿ