ಬೆಂಗಳೂರು : ಕರ್ನಾಟಕದ ನಾವೀನ್ಯತಾ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಮಹತ್ವದ ಹೆಜ್ಜೆಯಾಗಿ ಹಾಗೂ ಸ್ಟಾರ್ಟ್‌ಅಪ್‌ಗಳ ಸಂಶೋಧನೆಗಳಿಗೆ ಜಾಗತಿಕ ಮಾನ್ಯತೆ ಒದಗಿಸುವ ಉದ್ದೇಶದಿಂದ ಬೆಂಗಳೂರು ಬಯೋ-ಇನ್ನೋವೇಷನ್ ಸೆಂಟರ್ (𝗕𝗕𝗖) ಮತ್ತು ರಾಷ್ಟ್ರೀಯ ಪರೀಕ್ಷೆ ಮತ್ತು ಮಾಪನಾಂಕ ನಿರ್ಣಯ ಪ್ರಯೋಗಾಲಯಗಳ ಮಾನ್ಯತಾ ಮಂಡಳಿ NABL (QCI) ಜತೆಗೆ ಒಪ್ಪಂದ ಮಾಡಿಕೊಂಡಿದೆ.
ಈ ಒಪ್ಪಂದಕ್ಕೆ ರಾಜ್ಯ ಸರ್ಕಾರದ (ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಇಲಾಖೆ) ಕಾರ್ಯದರ್ಶಿ ಹಾಗೂ 𝗕𝗕𝗖 ಅಧ್ಯಕ್ಷೆ ಡಾ. ಎನ್. ಮಂಜುಳಾ ಅವರ ಸಮ್ಮುಖದಲ್ಲಿ, 𝗕𝗕𝗖 ಯ ವ್ಯವಸ್ಥಾಪಕ ನಿರ್ದೇಶಕ ಡಾ. ಮೊಹಮ್ಮದ್ ಆದಿಲ್ ಎ.ಎ. ಮತ್ತು 𝗡𝗔𝗕𝗟 (ಕ್ವಾಲಿಟಿ ಕಂಟ್ರೋಲ್ ಆಫ್ ಇಂಡಿಯಾ) ಸಿಇಒ ಡಾ. ರಮಾನಂದ್ ಶುಕ್ಲಾ ಅವರು ಸಹಿ ಹಾಕಿದರು.
ಬಳಿಕ ಮಾತನಾಡಿದ ಸರ್ಕಾರದ ಕಾರ್ಯದರ್ಶಿ ಡಾ. ಎನ್. ಮಂಜುಳಾ, “ಜೀವ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕವನ್ನು ಜಾಗತಿಕ ಹಬ್ ಆಗಿ ಗುರುತಿಸಿಕೊಳ್ಳುವುದಕ್ಕೆ ಈ ಒಪ್ಪಂದ ಬಹಳ ಸಹಕಾರಿಯಾಗಲಿದೆ. ನಾವು ಈಗಾಗಲೇ 512 ಕ್ಕೂ ಹೆಚ್ಚಿನ ನಾವೀನ್ಯತಾ ಪ್ರಾಜೆಕ್ಟ್‌ಗಳಿಗೆ ಬೆಂಬಲ ನೀಡಿದ್ದೇವೆ. ಇದರಲ್ಲಿ 24 ಜಾಗತಿಕ ಸ್ಟಾರ್ಟ್‌ಅಪ್‌ಗಳು ಮತ್ತು 74 ಪೇಟೆಂಟ್‌ಗಳು ಸೇರಿವೆ. ಜೈವಿಕ ತಂತ್ರಜ್ಞಾನದಲ್ಲಿ (ಬಯೋ ಟೆಕ್ನಾಲಜಿ) ಬೆಂಗಳೂರು ಬಯೋ-ಇನ್ನೋವೇಷನ್ ಸೆಂಟರ್ ಅನ್ನು ಜಾಗತಿಕ ನಾವೀನ್ಯತಾ ಕೇಂದ್ರವಾಗಿ ಬಲಪಡಿಸಲು ಈ ಒಪ್ಪಂದ ಹೆಚ್ಚು ಅನುಕೂಲಕರವಾಗಿದೆ” ಎಂದರು.
“ಈ ಒಪ್ಪಂದದ ಅನ್ವಯ, 𝗕𝗕𝗖 ಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಟಾರ್ಟ್‌ಅಪ್‌ಗಳು 𝗡𝗔𝗕𝗟 ನ ಕಟ್ಟುನಿಟ್ಟಿನ ಮಾನ್ಯತಾ ಪ್ರಕ್ರಿಯೆಗಳನ್ನು ಅತ್ಯಂತ ಸರಳವಾಗಿ ಮತ್ತು ತ್ವರಿತವಾಗಿ ಪಡೆಯಲು ಸಾಧ್ಯವಾಗುತ್ತದೆ. ಇದರಿಂದಾಗಿ ಹೊಸ ಸಂಶೋಧನೆಗಳು ಹಾಗೂ ಉತ್ಪನ್ನಗಳ ದೃಢೀಕರಣಕ್ಕೆ ತಗಲುವ ಸಮಯ ಹಾಗೂ ಸಂಕೀರ್ಣತೆ ಗಣನೀಯವಾಗಿ ಕಡಿಮೆಯಾಗಲಿದೆ” ಎಂದು ಡಾ. ಮಂಜುಳಾ ತಿಳಿಸಿದರು. ಜೊತೆಗೆ, ನಮ್ಮ ಜೈವಿಕ ನಾವೀನ್ಯತೆಗಳನ್ನು ಜಾಗತಿಕ ಮಾರುಕಟ್ಟೆಗೆ ಕೊಂಡೊಯ್ಯಲು ಮತ್ತು ಕ್ಲಿನಿಕಲ್ ಪ್ರಯೋಗಗಳನ್ನು ಬೆಂಬಲಿಸಲು ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿರುವ 𝗟𝗮 𝗧𝗿𝗼𝗯𝗲 𝗨𝗻𝗶𝘃𝗲𝗿𝘀𝗶𝘁𝘆 ಯಲ್ಲಿ 𝗕𝗕𝗖 ಕಚೇರಿಯನ್ನು ತೆರೆಯುವ ಮೂಲಕ ಶ್ಲಾಘನೀಯ ಸಾಧನೆ ಮಾಡಲಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
NABL (QCI) ನ ಸಿಇಒ ಡಾ. ರಮಾನಂದ್ ಎನ್. ಶುಕ್ಲಾ ಮಾತನಾಡಿ , “ಜಾಗತಿಕ ಮಾರುಕಟ್ಟೆ ಮತ್ತು ಹೂಡಿಕೆಗೆ ಮುಕ್ತ ಅವಕಾಶ ಕಲ್ಪಿಸುವುದಕ್ಕೆ ಈ ರೀತಿಯ ಒಪ್ಪಂದದ ಅವಶ್ಯಕತೆ ಇತ್ತು. ಇದು ಜಾಗತಿಕ ಮಾರುಕಟ್ಟೆ ಪ್ರವೇಶಿಸಲು ಮತ್ತು ಗ್ರಾಹಕರಲ್ಲಿ ನಂಬಿಕೆ ಸೃಷ್ಟಿಸಲು ಸಹಕಾರಿಯಾಗಲಿದೆ. ಪ್ರಾಯೋಗಾಲಯಗಳನ್ನು ಮತ್ತಷ್ಟು ಉನ್ನತ ದರ್ಜೆಗೆ ಏರಿಸುವುದು, ತರಬೇತಿ ಮತ್ತು ಮಾನ್ಯತಾ ಚೌಕಟ್ಟುಗಳಿಗೆ ಈ ಒಪ್ಪಂದ ಬೆಂಬಲ ನೀಡಲಿದೆ” ಎಂದರು. 𝗗𝗲𝗲𝗽-𝘁𝗲𝗰𝗵 ಸಂಶೋಧನೆ, ನಾವೀನ್ಯತೆ ಮತ್ತು ಜೈವಿಕ ತಂತ್ರಜ್ಞಾನದ ಉದ್ಯಮಶೀಲತೆಗೆ ಕರ್ನಾಟಕವನ್ನು ನೆಚ್ಚಿನ ತಾಣವನ್ನಾಗಿ ರೂಪಿಸುವಲ್ಲಿ ಈ ಉಪಕ್ರಮವು ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಅವರು ವಿವರಿಸಿದರು.
𝗕𝗕𝗖 ಯ ವ್ಯವಸ್ಥಾಪಕ ನಿರ್ದೇಶಕ ಡಾ. ಮೊಹಮ್ಮದ್ ಆದಿಲ್ ಮಾತನಾಡಿ, “ಈ ಒಪ್ಪಂದವು ಶಿಕ್ಷಣ ತಜ್ಞರು, ಸ್ಟಾರ್ಟ್‌ಅಪ್‌ಗಳು, 𝗠𝗦𝗠𝗘 ಗಳು ಹಾಗೂ ಕಾರ್ಪೊರೇಟ್ ಸಂಸ್ಥೆಗಳಿಗೆ ಅಂತರಾಷ್ಟ್ರೀಯ ಗುಣಮಟ್ಟದ ಮಾನದಂಡಗಳನ್ನು ಸುಲಭವಾಗಿ ಪಡೆಯಲು ದಾರಿಮಾಡಿಕೊಡಲಿದೆ. 𝗜𝗦𝗢/𝗜𝗘𝗖 𝟭𝟳𝟬𝟮𝟱, ಪ್ರಯೋಗಾಲಯದ ಗುಣಮಟ್ಟದ ವ್ಯವಸ್ಥೆಗಳು, ಲೆಕ್ಕಪರಿಶೋಧನಾ ಅಭ್ಯಾಸಗಳು, ಮೌಲ್ಯಮಾಪನ ಮತ್ತು ಮಾಪನ ಮಾನದಂಡಗಳ ಬಗ್ಗೆ ವ್ಯವಸ್ಥಿತ ತರಬೇತಿ ಕಾರ್ಯಕ್ರಮಗಳು ಮತ್ತು ತಾಂತ್ರಿಕ ಮಾರ್ಗದರ್ಶನವನ್ನು ಈ ಒಪ್ಪಂದ ತರಲಿದೆ. ಇದು ವಿಶ್ವಾಸಾರ್ಹ, ಮೌಲ್ಯೀಕರಿಸಿದ ಮತ್ತು ವಿಸ್ತರಿಸಬಹುದಾದ ಸ್ಟಾರ್ಟ್‌ಅಪ್‌ಗಳನ್ನು ರೂಪಿಸಲು ನೆರವಾಗಲಿದೆ. ಆವಿಷ್ಕಾರಗಳಿಗೆ ತ್ವರಿತವಾಗಿ ಮಾನ್ಯತೆ ಪಡೆದುಕೊಳ್ಳಲು ಇದು ನೆರವಾಗಲಿದೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿ (𝗢𝗳𝗳𝗶𝗰𝗲 𝗼𝗳 𝘁𝗵𝗲 𝗣𝗿𝗶𝗻𝗰𝗶𝗽𝗮𝗹 𝗦𝗰𝗶𝗲𝗻𝘁𝗶𝗳𝗶𝗰 𝗔𝗱𝘃𝗶𝘀𝗼𝗿) ಮತ್ತು ಶಿಕ್ಷಣ ಸಚಿವಾಲಯದ (𝗠𝗶𝗻𝗶𝘀𝘁𝗿𝘆 𝗼𝗳 𝗘𝗱𝘂𝗰𝗮𝘁𝗶𝗼𝗻) ಪ್ರತಿನಿಧಿಗಳು ಉಪಸ್ಥಿತರಿದ್ದರು.
ತಮಿಳುನಾಡು ರಾಜಕೀಯದಲ್ಲಿ ‘ದಳಪತಿ’ ವಿಜಯ್ ಯುಗಾರಂಭ: ಮೇ 7ಕ್ಕೆ ಪ್ರಮಾಣವಚನ? | Thalapathy Vijay
ತಮಿಳುನಾಡು ರಾಜಕೀಯದಲ್ಲಿ ಹೊಸ ಇತಿಹಾಸ: ವಿಜಯ್ ಅವರ TVK ಭರ್ಜರಿ ಗೆಲುವು, ಅರವಿಂದ್ ಕೇಜ್ರಿವಾಲ್ ಜೊತೆ ಹೋಲಿಕೆ!








