ಬಾಗಲಕೋಟೆ : ಸದ್ಯ ರಾಜ್ಯದಲ್ಲಿ ವರುಣಾರ್ಭಟ ಜೋರಾಗಿದ್ದು, ನದಿ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಅಲ್ಲದೆ ನದಿ ಪಾತ್ರದಲ್ಲಿರುವ ಜನರಿಗೂ ಕೂಡ ಈಗಾಗಲೇ ಅಲ್ಲಿಂದ ಸುರಕ್ಷಿತ ಪ್ರದೇಶಕ್ಕೆ ತೆರಳಲು ಎಚ್ಚರಿಕೆ ನೀಡಿದ್ದು, ಹಲವು ಕಡೆ ಪ್ರವಾಹದಿಂದ ಅನೇಕ ಅವಾಂತರ ಸೃಷ್ಟಿಯಾಗಿವೆ.ಈ ಮಧ್ಯ ಅನಗತ್ಯವಾಗಿ ನದಿಗೆ ಇಳಿಯುವವರಿಗೆ ಲಾಠಿ ರುಚಿ ತೋರಿಸಿ ಎಂದು ಸಚಿವ ಕೃಷ್ಣ ಭೈರೇಗೌಡ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು
ಬಾಗಲಕೋಟೆ ಜಿಲ್ಲೆಯ ಭೂಗೋಳ ತಾಲೂಕಿನಲ್ಲಿ ಇಂದು ಅವರು ಮಾತನಾಡಿ, ಅನಗತ್ಯವಾಗಿ ನದಿಗೆ ಇಳಿಯುವವರಿಗೆ ಲಾಠಿ ರುಚಿ ತೋರಿಸಿ. ರಾಜ್ಯದ ಜನತೆ ನಮ್ಮ ಬಗ್ಗೆ ತಪ್ಪು ತಿಳಿದುಕೊಂಡರು ಪರವಾಗಿಲ್ಲಾ. ಅಧಿಕಾರಿಗಳ ಮಾತು ಕೇಳದೆ ನದಿಗೆ ಹೇಳಿದರೆ ಲಾಠಿ ಪ್ರಯೋಗಿಸಿ ಎಂದು ಖಡಕ್ ಸೂಚನೆ ನೀಡಿದರು.
ಮೀನು ಹಿಡಿಯುವುದು, ಕೃಷಿ ಚಟುವಟಿಕೆ ಎಂದು ಇಳಿಯುವುದು, ಸೆಲ್ಫಿಗಾಗಿ ನದಿ ಒಳಗೆ ಇಳಿಯುವವರಿಗೆ ಲಾಠಿ ರುಚಿ ತೋರಿಸಿ. ನಮ್ಮ ರಾಜ್ಯದಲ್ಲಿ ಪ್ರಾಣ ಹಾನಿಯಾಗುವುದಕ್ಕೆ ನಾವು ಬಿಡುವುದಿಲ್ಲ. ಒಳ್ಳೆ ಮಾತಿಗೆ ಗೌರವ ಕೊಡಲಿಲ್ಲ ಅಂದರೆ ಲಾಠಿ ಏಟು ನಿಶ್ಚಿತ ಎಂದು ಸಚಿವ ಕೃಷ್ಣ ಭೈರೇಗೌಡ ಖಡಕ್ ಸೂಚನೆ ನೀಡಿದರು.
ಇನ್ನೂ ಮಳೆಯಿಂದ ಹಾನಿಗೋಳಗದ ಕುರಿತು ಮಾತನಾಡಿ, 2019-20 ರಲ್ಲಿ ಮಳೆಗಾಲದಲ್ಲಿ 252 ಜನ ಮೃತಪಟ್ಟಿದ್ದರು. 2022 ರಲ್ಲಿ ಮಳೆಗಾಲದಲ್ಲಿ 249 ಜನ ಮೃತಪಟ್ಟಿದ್ದರು.ಅದೇ ರೀತಿಯಾಗಿ 2023ರಲ್ಲಿ 243 ಜನ ಮೃತ ಪಟ್ಟಿದ್ದರು. 2019 ರಲ್ಲಿ 9.70 ಲಕ್ಷ ಹೆಕ್ಟರ್ ನಷ್ಟು ಬೆಳೆ ಹಾನಿಯಾಗಿತ್ತು. ಅದೇ ರೀತಿಯಾಗಿ 2022 ರಲ್ಲಿ 12.40 ಲಕ್ಷ ಹೆಕ್ಟರ್ ಪ್ರವೇಶ ಬೆಳೆ ನಾಶವಾಗಿತ್ತು. ಇದೀಗ 44 ಹೆಕ್ಟರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದರು.
ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಪರಿಸ್ಥಿತಿ ನಿಭಾಯಿಸುವ ಕೆಲಸ ಮಾಡುತ್ತದೆ. ಜಿಲ್ಲಾಡಳಿತ, ಉಸ್ತುವಾರಿ ಸಚಿವರು ಜನರ ಸಂಪರ್ಕದಲ್ಲಿದ್ದಾರೆ. ಪ್ರಕೃತಿ ವಿಕೋಪ ನಿಭಾಯಿಸುತ್ತೇವೆ ಅಂದರೆ ಉಡಾಫೆ ಮಾತಾಗುತ್ತದೆ. ನಾವು ಎಲ್ಲವನ್ನು ನಿಭಾಯಿಸುತ್ತೇವೆ ಅಂದರೆ ಉಡಾಫೆ ಮಾತಾಗುತ್ತದೆ. ಇರುವ ಪರಿಸ್ಥಿತಿಯಲ್ಲಿ ಜನರ ಜೊತೆ ನಿಂತು ಕಷ್ಟ ಪರಿಹರಿಸಲು ಯತ್ನಿಸುತ್ತೇವೆ ಎಂದು ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.