ಬೆಂಗಳೂರು : ಹೆಣ್ಣುಮಕ್ಕಳು ಒಂದಲ್ಲ ಒಂದು ಕಾರಣಕ್ಕೆ ಟ್ರೋಲ್ ಆಗ್ತಾರೆ ಎಂದು ನಟಿ ಮೋಹಕ ತಾರೆ ರಮ್ಯಾ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.
ಈ ಬಗ್ಗೆ ಟ್ವಿಟರ್ ನಲ್ಲಿ ಕಿಡಿಕಾರಿದ ರಮ್ಯಾ ಸ್ವಾತಂತ್ರ್ಯವು ನಮ್ಮ ಮೂಲಭೂತ ಹಕ್ಕು ಎಂದು ಟ್ವೀಟ್ ಮಾಡಿದ್ದಾರೆ.
ಸಮಂತಾ ತನ್ನ ವಿಚ್ಛೇದನಕ್ಕಾಗಿ ಟ್ರೋಲ್ ಆದರೆ, ಸಾಯಿ ಪಲ್ಲವಿ ಅವರ ಅಭಿಪ್ರಾಯಕ್ಕಾಗಿ ಟ್ರೋಲ್ ಆಗಿದ್ದಾರೆ. ಅದೇ ರೀತಿ ರಶ್ಮಿಕಾ ಅವರ ಪ್ರತ್ಯೇಕತೆಗಾಗಿ ಟ್ರೋಲ್ ಆಗಿದ್ದಾರೆ. ದೀಪಿಕಾ ಅವರ ಬಟ್ಟೆಗಳಿಗಾಗಿ ಟ್ರೋಲ್ ಆಗಿದ್ದಾರೆ ಎಂದು ಕಿಡಿಕಾರಿದರು.
ಇದಲ್ಲದೇ ಹಲವು ಅನೇಕ ಮಹಿಳೆಯರು ಒಂದಲ್ಲ ಒಂದು ಕಾರಣಕ್ಕೆ ಟ್ರೋಲ್ ಆಗ್ತಾರೆ, ಆಯ್ಕೆಯ ಸ್ವಾತಂತ್ರ್ಯವು ನಮ್ಮ ಮೂಲಭೂತ ಹಕ್ಕು. ಮಹಿಳೆಯರು ದುರ್ಗಾ ಮಾತೆಯ ಪ್ರತಿರೂಪ, ನಾವು ಸ್ತ್ರೀದ್ವೇಷದ ವಿರುದ್ಧ ದಿಟ್ಟತನದಿಂದ ಹೋರಾಡಬೇಕು ಎಂದು ಟ್ವೀಟ್ ಮಾಡಿದ್ದಾರೆ.
Samantha trolled for her divorce, Sai Pallavi for her opinion,Rashmika for her separation, Deepika for her clothes and many, many other women for pretty much EVERYTHING. Freedom of choice is our basic right. Women are the embodiment of Maa Durga- misogyny is an evil we must fight
— Ramya/Divya Spandana (@divyaspandana) December 16, 2022
ಮಂಡ್ಯದಲ್ಲಿ ಬಿಜೆಪಿ ಅಲೆ ಎದ್ದಿದೆ, 5 ಸ್ಥಾನ ಗೆಲ್ಲುವುದು ನಿಶ್ಚಿತ – ಸಿಎಂ ಬಸವರಾಜ ಬೊಮ್ಮಾಯಿ
BIG BREAKING NEWS: ‘ರಾಜ್ಯ ಚುನಾವಣಾ ಆಯೋಗ’ದಿಂದ ‘ಖಾಸಗಿ ಸರ್ವೆ’ ವೇಳೆ ‘ಮತದಾರರ ಮಾಹಿತಿ ಸಂಗ್ರಹ’ಕ್ಕೆ ನಿರ್ಬಂಧ