ಮುಂಬೈ (ಮಹಾರಾಷ್ಟ್ರ) : ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ನೈಗಾಂವ್ ರೈಲ್ವೆ ನಿಲ್ದಾಣದ ಬಳಿಯ ರಸ್ತೆಯ ಬದಿಯಲ್ಲಿ ಸಿಕ್ಕ ಟ್ರಾವೆಲ್ ಬ್ಯಾಗ್ನಲ್ಲಿ 15 ವರ್ಷದ ಬಾಲಕಿಯ ಶವ ಪತ್ತೆಯಾಗಿರುವ ಘಟನೆ ಶುಕ್ರವಾರ ಪತ್ತೆಯಾಗಿದೆ.
ನೈಗಾಂವ್ ರೈಲ್ವೆ ನಿಲ್ದಾಣದ ಬಳಿ 15 ವರ್ಷದ ಬಾಲಕಿಯ ಶವವನ್ನು ಕಂಬಳಿಯಲ್ಲಿ ಸುತ್ತಿ ಟ್ರಾವೆಲ್ ಬ್ಯಾಗ್ನಲ್ಲಿ ತುಂಬಿದ ಸ್ಥಿತಿಯಲ್ಲಿ ಶುಕ್ರವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಪತ್ತೆಯಾಗಿದೆ ಎಂದು ವಲೀವ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರಾಹುಲ್ಕುಮಾರ್ ಪಾಟೀಲ್ ತಿಳಿಸಿದ್ದಾರೆ.
ದಾರಿಹೋಕರೊಬ್ಬರು ಬ್ಯಾಗ್ ಅನ್ನು ಗಮನಿಸಿ ವಾಲಿವ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಬ್ಯಾಗನ್ನು ಓಪನ್ ಮಾಡಿದ್ದಾರೆ. ಅದರೊಳಗೆ ಬಾಲಕಿಯ ಶವವನ್ನು ಕಂಬಳಿಯಲ್ಲಿ ಸುತ್ತಿ ತುಂಬಿಟ್ಟಿರುವುದು ಪತ್ತೆಯಾಗಿದೆ.
ಬಾಲಕಿಯ ದೇಹಕ್ಕೆ ಹಲವು ಬಾರಿ ಚೂರಿಯಿಂದ ಇರಿದಿರುವುದು ಕಂಡುಬಂದಿದ್ದು, ಮರಣೋತ್ತರ ಪರೀಕ್ಷೆಗಾಗಿ ಬಾಲಕಿಯ ಶವವನ್ನು ವಸೈನಲ್ಲಿರುವ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಮೃತ ಬಾಲಕಿಯನ್ನು ವಂಶಿತಾ ಕನೈಯಾಲಾಲ್ ರಾಥೋಡ್ ಎಂದು ಗುರುತಿಸಲಾಗಿದ್ದು, ಮುಂಬೈನ ಅಂಧೇರಿ ಪ್ರದೇಶದ ನಿವಾಸಿಯಾಗಿದ್ದಾಳೆ. ಈಕೆ ಗುರುವಾರ ಬೆಳಗ್ಗೆ ಶಾಲೆಗೆಂದು ಹೋಗಿದ್ದಳು. ಆದ್ರೆ, ಸಂಜೆಯಾದ್ರೂ ಮನೆಗೆ ಬಾರದ ಕಾರಣ ಪೋಷಕರು ಅಂಧೇರಿ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಬಾಲಕಿಯ ಹುಡುಕಾಟ ಆರಂಭಿಸಿದ್ದರು.
ಆದ್ರೆ, ಶುಕ್ರವಾರ ಮಧ್ಯಾಹ್ನ ಬಾಲಕಿಯ ಶವ ರಸ್ತೆ ಬದಿ ಸಿಕ್ಕ ಬ್ಯಾಗ್ನಲ್ಲಿ ಪತ್ತೆಯಾಗಿದೆ. ಈ ಸಂಬಂಧ ವಲೀವ್ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗಾಗಿ ಸುತ್ತಮುತ್ತಲಿನ ಸಿಸಿಟಿವಿಯನ್ನು ಪರಿಶೀಲಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Big news: ಸೆ. 12 ರಿಂದ ವಿಧಾನಸಭೆಯ ಮುಂಗಾರು ಅಧಿವೇಶನ ಆರಂಭ | Monsoon session begin on Sep.12
Big news: ಉದ್ಯೋಗ ಪಡೆಯಲು 10 ಲಕ್ಷ ವಿದ್ಯಾರ್ಥಿಗಳಿಗೆ ಕೌಶಲ್ಯ ಆಧಾರಿತ ತರಬೇತಿ: ಸಚಿವ ಅಶ್ವಥ್ ನಾರಾಯಣ್