ಬೆಂಗಳೂರು : ಕಳೆದ ಜುಲೈ ಮೂರರಂದು ಬೆಂಗಳೂರಿನ ಮೆಜೆಸ್ಟಿಕ್ ರೈಲು ನಿಲ್ದಾಣದ ಬಳಿ ಬಾಲಕಿಯ ಶವ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸ್ಪೋಟಕ ಟ್ವಿಸ್ಟ್ ಸಿಕ್ಕಿದ್ದು, ಈ ಒಂದು ಪ್ರಕರಣದಲ್ಲಿ ಮೃತ ಬಾಲಕಿಯ ತಾಯಿಯು ಅನೈತಿಕ ಸಂಬಂಧ ಹೊಂದಿದ್ದಾಳೆಂದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ತನ್ನ ಅನೈತಿಕ ಸಂಬಂಧಕ್ಕೆ ಪುತ್ರಿ ಅಡ್ಡಿ ಆಗುತ್ತಾಳೆ ಎಂದು ತಾಯಿಯೇ ಪುತ್ರಿಯ ಕೊಲೆ ಮಾಡಿರುವ ಶಂಕೆ ಇದೀಗ ವ್ಯಕ್ತವಾಗಿದೆ.
ಹೌದು ಕಳೆದ ಜುಲೈ 3 ರಂದು 5 ವರ್ಷದ ಮರಿಯಂ ಎನ್ನುವ ಮೃತದೇಹ ಪತ್ತೆಯಾಗಿತ್ತು. ರೈಲು ನಿಲ್ದಾಣದ ಟ್ಯಾಕ್ಸಿ ಪಾರ್ಕಿಂಗ್ ಬಳಿ ಮರಿಯಮ್ ಮೃತ ದೇಹ ಪತ್ತೆಯಾಗಿತ್ತು. ಬಾಲಕಿಯ ಕೊಲೆಯ ಸುತ್ತ ಸಾಕಷ್ಟು ಅನುಮಾನ ವ್ಯಕ್ತವಾಗಿತ್ತು. ಇದೀಗ ಬಾಲಕಿ ಪೋಷಕರು ಯಾರೆಂಬುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಕೊಲೆಯಾದ ಮರಿಯಮ್ ಶಿವು ಹಾಗೂ ಹೀನಾ ದಂಪತಿಯ ಪುತ್ರಿ ಎಂದು ತಿಳಿದು ಬಂದಿದೆ. ತಾಯಿಯ ಅನೈತಿಕ ಸಂಬಂಧಕ್ಕೆ ಮಗಳು ಇದೀಗ ಬಲಿಯಾಗಿದ್ದಾಳಾ ಎಂದು ಅನುಮಾನ ಹುಟ್ಟಿಕೊಂಡಿದೆ. ರಾಜು ಎಂಬಾತನ ಜೊತೆ ತಾಯಿ ಹೀನ ಅನೈತಿಕ ಸಂಬಂಧ ಹೊಂದಿದಳು ಎನ್ನಲಾಗಿದೆ.
ಪತಿ ಶಿವು ನನ್ನ ಬಿಟ್ಟು ರಾಜು ಜೊತೆ ಹೀನಾ ಭಿಕ್ಷಾಟನೆ ಮಾಡುತ್ತಿದ್ದಳು. ಇವರಿಬ್ಬರ ಜೊತೆ ಕೊಲೆಯಾದ ಬಾಲಕಿ ಮರಿಯಮ್ ಇರುತ್ತಿದ್ದಳು. ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತಾಳೆ ಎಂದು ಕೊಲೆ ಮಾಡಿರುವ ಶಂಕೆ ಇದೀಗ ವ್ಯಕ್ತವಾಗುತ್ತಿದೆ. ಪ್ರಿಯಕರ ರಾಜು ಜೊತೆ ಸೇರಿಕೊಂಡು ಮಗಳನ್ನು ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ.
ಶವ ಪತ್ತೆಯಾದ ದಿನದಿಂದಲೂ ಹೀನಾ ಮತ್ತು ರಾಜು ನಾಪತ್ತೆಯಾಗಿದ್ದಾರೆ. ಹೀಗಾಗಿ ಪೊಲೀಸರಿಗೆ ಹೀನಾ ಹಾಗೂ ರಾಜು ಮೇಲೆ ಸಾಕಷ್ಟು ಅನುಮಾನ ಹುಟ್ಟಿಕೊಂಡಿದೆ ಎನ್ನಲಾಗುತ್ತಿದೆ ಈಗ ರೇಲ್ವೆ ಪೊಲೀಸರು ಹೀನಾ ಹಾಗೂ ರಾಜುಗಾಗಿ ಸಾಕಷ್ಟು ಹುಡುಕಾಟ ನಡೆಸುತ್ತಿದ್ದಾರೆ.