ಕೆಎನ್ಎನ್ ಡಿಜಿಟಲ್ ಡೆಸ್ಕ್ : ಕೆಲವು ಅಂಧ ಜನರು ಮಾಟ-ಮಂತ್ರಗಳನ್ನು ನಂಬುತ್ತಾರೆ. ಿದರ ಮೊರೆ ಹೋಗಿ ಸಾಕಷ್ಟು ಹಣವನ್ನು ಕಳೆದುಕೊಳ್ಳುತ್ತಾರೆ. ಅಂತಹದ್ದೆ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಯುವತಿಯೋರ್ವಳು ತನ್ನ ಗೆಳೆಯನ್ನು ಪಡೆಯಬೇಕೆಂದು ಮಂತ್ರವಾದಿಯ ಬಳಿ ಹೋಗಿದ್ದಳು. ಇದನ್ನೆ ಲಾಭವಾಗಿ ಬಳಸಿಕೊಂಡು ಮಂತ್ರವಾದಿ, ಯುವತಿಯಿಂದ ಲಕ್ಷಾಂತರ ಹಣವನ್ನು ಪಡೆದು ಪರಾರಿಯಾಗಿರುವ ಘಟನೆ ಚೀನಾದಲ್ಲಿ ನಡೆದಿದೆ.
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ, ಯುವತಿಯೋರ್ವಳು ತನ್ನ ಗೆಳೆಯನೊಂದಿಗೆ ಬಹಳ ಸಮಯದಿಂದ ಜಗಳವಾಡುತ್ತಿದ್ದಳು. ಅವನನ್ನು ಪಡೆಯಲು ಹೆಣಗಾಡುತ್ತಿದ್ದಳು. ನಂತರ ಒಂದು ದಿನ ಇದ್ದಕ್ಕಿದ್ದಂತೆ ಅವಳು ಮಂತ್ರವಾದಿಯನ್ನು ಭೇಟಿ ಮಾಡಿದ್ದಳು. ಆಗ ಮಂತ್ರವಾದಿ ಅವಳ ಬಾಯ್ ಫ್ರೆಂಡ್ ಅನ್ನು ಮರಳಿ ಪಡೆಯುವುದಾಗಿ ಭರವಸೆ ನೀಡಿದ್ದನು.
ವರದಿಯ ಪ್ರಕಾರ, ಮಂತ್ರವಾದಿ ಯುವತಿಗೆ ಪೂಜೆಗೆ ಬೇಕಾದ ವಸ್ತುಗಳನ್ನು ತರಿಸಿಕೊಂಡಿದ್ದನು. ಇದರ ಜೊತೆಗೆ ಯುವತಿಯಿಂದ ಒಂದೂವರೆ ಲಕ್ಷ ಹಣವನ್ನು ತೆಗೆದುಕೊಂಡು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾನೆ ಎನ್ನಲಾಗುತ್ತಿದೆ.
ಇತ್ತ ನಡೆದ ಘಟನೆಯನ್ನು ಯುವತಿ ತನ್ನ ಸ್ನೇಹಿತರ ಬಳಿ ಹೇಳಿಕೊಂಡಿದ್ದಳು. ಆಗ ತಾನು ಮೋಸ ಹೋಗಿರುವ ಬಗ್ಗೆ ಯುವತಿಗೆ ತಿಳಿದುಬಂದಿದೆ.
BIG NEWS: ನಾಳೆ ಬೀದರ್ ಜಿಲ್ಲೆಯಿಂದ 2ನೇ ಹಂತದ ಪಂಚರತ್ನ ರಥಯಾತ್ರೆ ಆರಂಭ
ಬೆಂಗಳೂರಿನಲ್ಲಿ ‘ಟ್ರಾಫಿಕ್ ರೂಲ್ಸ್’ ಬ್ರೇಕ್ : 1 ಕೋಟಿ 4 ಲಕ್ಷ ಕೇಸ್ ದಾಖಲು, 179 ಕೋಟಿ ದಂಡ ವಸೂಲಿ
ಸಿದ್ದರಾಮಯ್ಯ ಬಳಸಿದ ಭಾಷೆ, ಅವರ ಘನತೆಗೆ ತಕ್ಕುದಲ್ಲ : ಗೃಹ ಸಚಿವ ಆರಗ ಜ್ಞಾನೇಂದ್ರ