ಬೆಂಗಳೂರು : ಬೆಂಗಳೂರಿನ ಕೋಗಿಲು ಲೇಔಟ್ ನಲ್ಲಿ ಮನೆಗಳನ್ನು ತೇರು ಮಾಡಿದ ವಿಚಾರಕ್ಕೆ ಸಂಬಂಧಪಟ್ಟಂತೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅತಿವೃಷ್ಟಿಯಿಂದ ರೈತರು ಬೆಳೆ ಕಳೆದುಕೊಂಡು ಕಂಗಾಗಿದ್ದಾರೆ. ಅವರಿಗೆ ಪರಿಹಾರ ನೀಡುವುದನ್ನು ಬಿಟ್ಟು, ಕೋಗಿಲೆ ಲೇಔಟ್ ನಲ್ಲಿರುವ ನಿರಾಶ್ರಿತರಿಗೆ ಮನೆ ಕಟ್ಟಿಕೊಡಲು ಹೊರಟಿದ್ದೀರಿ.ರಾಜ್ಯದ ಜನತೆಗೆ ಸುಣ್ಣ, ಹೊರ ರಾಜ್ಯದವರಿಗೆ ಬೆಣ್ಣೆ ಇದು ಕಾಂಗ್ರೆಸ್ ಸರ್ಕಾರದ ಹೊಸ ವರ್ಷದ ಗ್ಯಾರಂಟಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಟ್ವೀಟ್ ನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಉತ್ತರ ಕರ್ನಾಟಕದ ಕಲಬುರಗಿ, ಬೀದರ್, ವಿಜಯಪುರ, ಯಾದಗಿರಿ ಮೊದಲಾದ ಜಿಲ್ಲೆಗಳಲ್ಲಿ 117 ಕ್ಕೂ ಅಧಿಕ ಹಳ್ಳಿಗಳು ಜಲಾವೃತವಾಗಿ, 20,000 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. 14.58 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆ ಹಾನಿಯಾದ ಸಂದರ್ಭದಲ್ಲಿ ರೈತರು ಹಾಗೂ ನಿರಾಶ್ರಿತರ ಕಣ್ಣೀರು ಒರೆಸಲು ಹೋಗದ ಸರ್ಕಾರ, ಇಂದು ಬೆಂಗಳೂರಿನ ಕೋಗಿಲು ಬಡಾವಣೆಯ ನಿರಾಶ್ರಿತರ ಕಣ್ಣೀರು ಒರೆಸುತ್ತಿರುವುದು ಯಾವ ಕಾರಣಕ್ಕೆ?
ಕೆ.ಜಿ ಹಳ್ಳಿಯಲ್ಲಿ 29 ದಲಿತರ ಮನೆಗಳನ್ನು ತೆರವು ಮಾಡಿದಾಗ ಈ ಸರ್ಕಾರಕ್ಕೆ ಕಣ್ಣು, ಕಿವಿ ಇರಲಿಲ್ಲವೇ? ಕೋಗಿಲೆ ಬಡಾವಣೆಯಲ್ಲಿ ಅಕ್ರಮ ಮನೆಗಳನ್ನು ಸರ್ಕಾರವೇ ತೆರವುಗೊಳಿಸಿ, ಸರ್ಕಾರವೇ ಮುಂದೆ ನಿಂತು 11.20 ಲಕ್ಷ ರೂ.ಗಳ ಮನೆಗಳನ್ನು ಹಂಚಿಕೆ ಮಾಡುತ್ತಿರುವುದು ಯಾವ ಪುರುಷಾರ್ಥಕ್ಕೆ ? ಈ ಸಂಪೂರ್ಣ ಘಟನೆಯ ಹಿಂದೆ ಕೇರಳ ಕಾಂಗ್ರೆಸ್ ಹಸ್ತಕ್ಷೇಪ ಇದೆ ಎಂಬುದು ರಾಜ್ಯದ ಜನತೆಯ ಅರಿವಿಗೆ ಬಂದಿದೆ.
ಕೋಗಿಲು ಬಡಾವಣೆಯಲ್ಲಿ ಕಾಂಗ್ರೆಸ್ ನಾಯಕ ವಾಸಿಂ ಎಂಬುವರು ಅಕ್ರಮ ವಲಸಿಗರಿಂದ 4-5 ಲಕ್ಷ ರೂ.ಪಡೆದು ಅಗ್ರಿಮೆಂಟ್ ಮಾಡಿಕೊಂಡ ಬಗ್ಗೆ ಮಾಹಿತಿ ಇದ್ದು, ಈ ಕುರಿತು ಸರ್ಕಾರ ತನಿಖೆ ಮಾಡಬೇಕು. ಈ ಕೂಡಲೇ ರಾಜ್ಯದ ಜನತೆಯ ಆಶೋತ್ತರಗಳಿಗೆ ರಾಜ್ಯ ಸರ್ಕಾರ ಸ್ಪಂದಿಸುವ ಮೂಲಕ ಅತಿವೃಷ್ಟಿಯಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಸೂರು, ರೈತರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಸರ್ಕಾರವನ್ನು ಆಗ್ರಹಿಸುತ್ತೇನೆ.
ರಾಜ್ಯದ ಜನತೆಗೆ ಸುಣ್ಣ, ಹೊರ ರಾಜ್ಯದವರಿಗೆ ಬೆಣ್ಣೆ. ಇದು ಕಾಂಗ್ರೆಸ್ ಸರ್ಕಾರದ ಹೊಸ ವರ್ಷದ ಗ್ಯಾರಂಟಿ!
ಉತ್ತರ ಕರ್ನಾಟಕದ ಕಲಬುರಗಿ, ಬೀದರ್, ವಿಜಯಪುರ, ಯಾದಗಿರಿ ಮೊದಲಾದ ಜಿಲ್ಲೆಗಳಲ್ಲಿ 117 ಕ್ಕೂ ಅಧಿಕ ಹಳ್ಳಿಗಳು ಜಲಾವೃತವಾಗಿ, 20,000 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. 14.58 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆ ಹಾನಿಯಾದ… pic.twitter.com/nJ7VwCxYRj
— Nikhil Kumar (@Nikhil_Kumar_k) December 30, 2025








