ಬೆಂಗಳೂರು: ಇತಿಹಾಸದ ಪುಟಗಳಲ್ಲಿ ಸೇರಿರುವಂತ ಘಜ್ನಿ ಮೊಹಮ್ಮದ್ ಅಂದು ದೇವಸ್ಥಾನಗಳನ್ನು ನಿರಂತರವಾಗಿ ಲೂಟಿ ಮಾಡಿದ್ದರು. ಇದೀಗ ಸಿದ್ಧರಾಮಯ್ಯ ಸರ್ಕಾರ ದೇವಾಲಗಳನ್ನು ಲೂಟಿ ಮಾಡುತ್ತಿದೆ ಎಂಬುದಾಗಿ ಕರ್ನಾಟಕ ಬಿಜೆಪಿ ಕಿಡಿಕಾರಿದೆ.
ಈ ಕುರಿತಂತೆ ಎಕ್ಸ್ ಮಾಡಿರುವಂತ ರಾಜ್ಯ ಬಿಜೆಪಿ ಘಟಕವು, ಅಂದು ಘಜ್ನಿ ದೇವಸ್ಥಾನಗಳನ್ನು ನಿರಂತರವಾಗಿ ಲೂಟಿ ಮಾಡಿದ್ದ. ಇಂದು ಸಿದ್ಧರಾಮಯ್ಯ ಸರ್ಕಾರ ದೇವಾಲಯಗಳ ಲೂಟಿಗಿಳಿದು ತಮ್ಮ ಕುರ್ಚಿಯನ್ನು ಭದ್ರ ಮಾಡಿಕೊಳ್ಳಲು ನೋಡುತ್ತಿದೆ. ಭಕ್ತರ ಕಾಣಿಕೆ ಹುಂಡಿಗೆ ಕನ್ನ ಹಾಕಿದ ಕಾಂಗ್ರೆಸ್ ಸರ್ಕಾರ ಶಾಪಗ್ರಸ್ಥವಾಗುವುದು ನಿಶ್ಚಿತ ಎಂಬುದಾಗಿ ಭವಿಷ್ಯ ನುಡಿದಿದೆ.
ಅಂದು ಘಜ್ನಿ ದೇವಸ್ಥಾನಗಳನ್ನು ನಿರಂತರವಾಗಿ ಲೂಟಿ ಮಾಡಿದ್ದ.
ಇಂದು @siddaramaiah ಸರ್ಕಾರ ದೇವಾಲಯಗಳ ಲೂಟಿಗಿಳಿದು ತಮ್ಮ ಕುರ್ಚಿಯನ್ನು ಭದ್ರ ಮಾಡಿಕೊಳ್ಳಲು ನೋಡುತ್ತಿದೆ.
ಭಕ್ತರ ಕಾಣಿಕೆ ಹುಂಡಿಗೆ ಕನ್ನ ಹಾಕಿದ @INCKarnataka ಸರ್ಕಾರ ಶಾಪಗ್ರಸ್ಥವಾಗುವುದು ನಿಶ್ಚಿತ!#OurTempleOurRight #HinduVirodhiCongress pic.twitter.com/4Jp05S3zxS
— BJP Karnataka (@BJP4Karnataka) February 22, 2024
ರಾಜ್ಯದ ಕಾಂಗ್ರೆಸ್ ಸರ್ಕಾರದ ಎಡವಟ್ಟುಗಳಿಗೆ ಮಿತಿ ಇಲ್ಲ – ಭ್ರಷ್ಟಾಚಾರಕ್ಕೆ ಕೊನೆಯಿಲ್ಲ. ಶಾಲಾ ಮಕ್ಕಳು ಪರೀಕ್ಷಾ ಶುಲ್ಕವೆಂದು ₹50 ನೀಡಿದರೂ, ಪೂರ್ವ ಸಿದ್ಧತಾ ಪರೀಕ್ಷೆಗೆ ಮನೆಯಿಂದಲೇ ಉತ್ತರ ಪತ್ರಿಕೆ ತರಬೇಕು ಎಂದು ಆದೇಶಿಸಿದೆ. ಮಕ್ಕಳಿಗೆ ಉತ್ತರ ಪತ್ರಿಕೆ ನೀಡಲು ಸಹ ಸಾಧ್ಯವಾಗದ ರೀತಿಯಲ್ಲಿ ಕರ್ನಾಟಕವನ್ನು ದಿವಾಳಿ ಮಾಡಿದೆ ಕಾಂಗ್ರೆಸ್. ಸರ್ಕಾರವೊಂದು ಈ ಪರಿ ದಿವಾಳಿಯಾಗಿರುವುದು ಕರ್ನಾಟಕದ ಇತಿಹಾಸದಲ್ಲಿ ಇದೇ ಮೊದಲು. ಸಿಎಂ ಸಿದ್ಧರಾಮಯ್ಯ ಅವರೇ, ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ನೀಡುವ ನಿಮಗೆ, ಮಕ್ಕಳಿಗೆ ಉತ್ತರ ಪತ್ರಿಕೆ ನೀಡಲು ಆಗದಿರುವುದು ದುರಂತವೇ ಸರಿ ಎಂಬುದಾಗಿ ವಾಗ್ಧಾಳಿ ನಡೆಸಿದೆ.
ರಾಜ್ಯದ @INCKarnataka ಸರ್ಕಾರದ ಎಡವಟ್ಟುಗಳಿಗೆ ಮಿತಿ ಇಲ್ಲ – ಭ್ರಷ್ಟಾಚಾರಕ್ಕೆ ಕೊನೆಯಿಲ್ಲ.
ಶಾಲಾ ಮಕ್ಕಳು ಪರೀಕ್ಷಾ ಶುಲ್ಕವೆಂದು ₹50 ನೀಡಿದರೂ, ಪೂರ್ವ ಸಿದ್ಧತಾ ಪರೀಕ್ಷೆಗೆ ಮನೆಯಿಂದಲೇ ಉತ್ತರ ಪತ್ರಿಕೆ ತರಬೇಕು ಎಂದು ಆದೇಶಿಸಿದೆ.
ಮಕ್ಕಳಿಗೆ ಉತ್ತರ ಪತ್ರಿಕೆ ನೀಡಲು ಸಹ ಸಾಧ್ಯವಾಗದ ರೀತಿಯಲ್ಲಿ ಕರ್ನಾಟಕವನ್ನು ದಿವಾಳಿ ಮಾಡಿದೆ… pic.twitter.com/Pg8FsJX7iG
— BJP Karnataka (@BJP4Karnataka) February 22, 2024
BREAKING : ಶಾಲಾ ಮಕ್ಕಳಿಗೆ ‘ರಾಗಿ ಮಾಲ್ಟ್’ ಕುಡಿಸುವ ಮೂಲಕ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ
‘ಐಪಿಎಲ್ 2024’ರ ಪಂದ್ಯಾವಳಿಯಿಂದ ‘ಮೊಹಮ್ಮದ್ ಶಮಿ’ ಔಟ್ – ವರದಿ | Mohammed Shami