ಘಾಜಿಯಾಬಾದ್ (ಉತ್ತರ ಪ್ರದೇಶ): ಗಾಜಿಯಾಬಾದ್ನ ರಾಜನಗರದ ಚಾರ್ಮ್ಸ್ ಕ್ಯಾಸಲ್ ಸೊಸೈಟಿಯ ಲಿಫ್ಟ್ನಲ್ಲಿ ಹೋಗುತ್ತಿದ್ದಾಗ ಪುಟ್ಟ ಬಾಲಕನೊಬ್ಬನಿಗೆ ಸಾಕಿದ ನಾಯಿ ಕಚ್ಚಿತ್ತು. ಈ ಸಂಬಂಧ ಬಾಲಕನ ಪೋಷಕರು ದೂರು ನೀಡಿದ ಹಿನ್ನಲಯಲ್ಲಿ ಸಾಕು ನಾಯಿಯ ಮಾಲೀಕರಾದ ಮಹಿಳೆಗೆ ಗಜಿಯಾಬಾದ್ ಮುನ್ಸಿಪಲ್ ಕಾರ್ಪೊರೇಷನ್ 5,000 ರೂ. ದಂಡ ವಿಧಿಸಿದೆ.
ಘಟನೆಯ ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ, ಲಿಫ್ಟ್ನಲ್ಲಿ ಮಹಿಳೆ ನಾಯಿಯನ್ನು ಕರೆದುಕೊಂಡು ಹೋಗುವಾಗ ಅಲ್ಲಿದ್ದ ಬಾಲಕನ ಮೇಲೆ ನಾಯಿ ಎರಗಿ ಸೊಂಟದ ಬಳಿ ಕಚ್ಚಿದೆ. ಈ ವೇಳೆ ಬಾಲಕ ನೋವಿನಿಂದ ನರಳುತ್ತಿದ್ದರೂ, ಮಹಿಳೆ ತನ್ನ ಪಾಡಿಗೆ ಸುಮ್ಮನಾಗಿದ್ದಾಳೆ. ಸ್ವಲ್ಪ ಸಮಯದ ನಂತರ ಲಿಫ್ಟ್ ಬಾಗಿಲು ತೆರೆದಾಗ, ಅವಳು ಹೊರಬರಲು ಪ್ರಾರಂಭಿಸುತ್ತಾಳೆ. ಈ ಸಮಯದಲ್ಲಿಯೂ ನಾಯಿ ಮಗುವಿನ ಮೇಲೆ ಎರಗಲು ಪ್ರಯತ್ನಿಸುತ್ತದೆ. ಘಟನೆಯ ದೃಶ್ಯಗಳು ಲಿಫ್ಟ್ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಸೆರೆಯಾಗಿದೆ.
Shocking video from Ghaziabad, The dog suddenly bitten the child in ongoing lift but the dog’s owner did nothing. pic.twitter.com/LaLrGlS8Ds
— Nikhil Choudhary (@NikhilCh_) September 6, 2022
Another video from #Ghaziabad The woman whose #dog had bitten the child in the #Lift, the video of the argument between the child’s father and the woman pic.twitter.com/DEZg3xUXZL
— Himanshu dixit 🇮🇳💙 (@HimanshuDixitt) September 6, 2022
ಸೆಪ್ಟೆಂಬರ್ 5ರಂದು ಸಂಜೆ 6 ಗಂಟೆಗೆ ಈ ಘಟನೆ ನಡೆದಿದೆ. ಸಿಸಿಟಿವಿ ದೃಶ್ಯಾವಳಿಯನ್ನಾಧರಿಸಿ ಬಾಲಕನ ಪೋಷಕರು ನಂದಗ್ರಾಮ ಪೊಲೀಸ್ ಠಾಣೆಯ ಮಹಿಳೆ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಈ ಘಟನೆಯ ನಂತರ, ಗಜಿಯಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ಮಹಿಳೆಯ ಮನೆಗೆ ಹೋದಾಗ ಆ ಸಾಕು ನಾಯಿಯನ್ನು ರಿಜಿಸ್ಟರ್ ಮಾಡಿಲ್ಲ ಎಂದು ತಿಳಿದುಬಂದಿದೆ. ಹೀಗಾಗಿ, ಆಕೆಗೆ 5,000 ರೂ. ದಂಡ ವಿಧಿಸಿದ್ದಾರೆ.
BREAKING NEWS: ಕಲ್ಲಿದ್ದಲು ಹಗರಣ ಪ್ರಕರಣ: ಬಂಗಾಳದ ಕಾನೂನು ಸಚಿವ ʻಮೊಲೊಯ್ ಘಾಟಕ್ʼ ನಿವಾಸದ ಮೇಲೆ ಸಿಬಿಐ ದಾಳಿ
BIGG NEWS: ಇಂದು ಸಂಜೆ 5 ಗಂಟೆಗೆ ಉಮೇಶ್ ಕತ್ತಿ ಅಂತ್ಯಕ್ರಿಯೆ; ಅಂತಿಮ ವಿಧಿವಿಧಾನದಲ್ಲಿ ಸಿಎಂ ಬೊಮ್ಮಾಯಿ ಭಾಗಿ