ಗಾಜಿಯಾಬಾದ್: ಪತ್ನಿಯೊಬ್ಬಳು ಆಕೆಯ ಪ್ರೇಮಕ್ಕೆ ಅಡ್ಡಿಯಾಗಿದ್ದ ಪತಿಯನ್ನು ತನ್ನ ಪ್ರಿಯಕರನೊಂದಿಗೆ ಸೇರಿ ಕೊಂದಿದ್ದಾಳೆ. ವಿಷಯ ಯಾರಿಗೂ ತಿಳಿಯಬಾರದು ಎಂದು ಶವವನ್ನು ತುಂಡರಿಸಿ, ಮನೆಯಲ್ಲೇ ಗುಂಡಿ ತೋಡಿ ಹೂತು ಹಾಕಿದ್ದರು. ಇದೀಗ ನಾಲ್ಕು ವರ್ಷಗಳ ಬಳಿಕ ಶವ ಪತ್ತೆಯಾಗಿದೆ.
ಸವಿತಾ ಎಂಬಾಕೆ 2018 ರಲ್ಲಿ ತನ್ನ ಪತಿ ಚಂದ್ರ ವೀರ್ ಬಗ್ಗೆ ಅಪಹರಣದ ಬಗ್ಗೆ ಪ್ರಕರಣ ದಾಖಲಿಸಿದ್ದಳು. ನನ್ನ ಪತಿ ಕಾಣೆಯಾಗಲು ತನ್ನ ಕಿರಿಯ ಸಹೋದರನೇ ಕಾರಣ ಎಂದು ಆರೋಪವನ್ನು ಹೊರಿಸುತ್ತಿದ್ದಳು.
ಇತ್ತೀಚೆಗೆ ಕ್ರೈಮ್ ಬ್ರಾಂಚ್ ಇತ್ತೀಚೆಗೆ ಕೆಲವು ಸುಳಿವುಗಳ ಮೂಲಕ ಆರೋಪಿಗಳನ್ನು ಕೊನೆಗೂ ಪತ್ತೆಹಚ್ಚಿದೆ. ತನಿಖೆಯಲ್ಲಿ ದೂರು ಕೊಟ್ಟ ಮಹಿಳೆ ಹಾಗೂ ಆಕೆಯ ಪ್ರಿಯಕರನೇ ಚಂದ್ರ ವೀರ್ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ತಮ್ಮ ಪ್ರಣಯಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಗುಂಡು ಹಾರಿಸಿ ಸಾಯಿಸಿದ್ದಾರೆ. ನಂತ್ರ, ಶವವನ್ನು ತುಂಡರಿಸಿ, ಮನೆಯಲ್ಲೇ ಆರರಿಂದ ಏಳು ಅಡಿ ಆಳದ ಗುಂಡಿ ತೋಡಿ ಹೂತು ಹಾಕಿದ್ದಾರೆ. ನಂತ್ರ ಯಾರಿಗೂ ಅನುಮಾನ ಬಾರದಂತೆ ಗುಂಡಿ ಮುಚ್ಚಿ, ಅದರ ಮೇಲೆ ಸಿಮೆಂಟ್ ಹಾಕಿ ಅದೇ ಮನೆಯಲ್ಲಿ ವಾಸ ಮುಂದುವರೆಸಿದ್ದಾರೆ.
ಇದೀಗ ಪೊಲೀಸರು ಕೊಳೆತ ದೇಹವನ್ನು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ಸೆರೆಹಿಡಿದಿದ್ದಾರೆ.
BIG NEWS: ʻಭಾರತʼ ಭವಿಷ್ಯದಲ್ಲಿ ಜಗತ್ತನ್ನು ಮುನ್ನಡೆಸುತ್ತದೆ: ಕೇಂದ್ರ ಸಚಿವ ಪಿಯೂಷ್ ಗೋಯಲ್
BIGG NEWS : ರೈತ ಸಮುದಾಯಕ್ಕೆ ಸಿಎಂ ಬೊಮ್ಮಾಯಿ ಗುಡ್ ನ್ಯೂಸ್ : ರೈತರಿಗೆ 24 ಸಾವಿರ ಕೋಟಿ ರೂ. ಸಾಲ ವಿತರಣೆ
BREAKING NEWS: ಮಿಜೋರಾಂನಲ್ಲಿ ಕಲ್ಲು ಕ್ವಾರಿ ಕುಸಿತ: 8 ಮಂದಿ ಕಾರ್ಮಿಕರ ದುರ್ಮರಣ, ನಾಲ್ವರಿಗಾಗಿ ಶೋಧ
BIG NEWS: ʻಭಾರತʼ ಭವಿಷ್ಯದಲ್ಲಿ ಜಗತ್ತನ್ನು ಮುನ್ನಡೆಸುತ್ತದೆ: ಕೇಂದ್ರ ಸಚಿವ ಪಿಯೂಷ್ ಗೋಯಲ್