ನವದೆಹಲಿ: ಉದಯೋನ್ಮುಖ ತಾರೆ ಚಾನ್ಸ್ ಪೆರ್ಡೊಮೊ ಮಾರಣಾಂತಿಕ ಮೋಟಾರ್ ಸೈಕಲ್ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. 27 ವರ್ಷದ ನಟ ಜೆನ್ ವಿ, ಚಿಲ್ಲಿಂಗ್ ಅಡ್ವೆಂಚರ್ಸ್ ಆಫ್ ಸಬ್ರಿನಾ ಮತ್ತು ಟಿವಿ ಸರಣಿ ಆಫ್ಟರ್ ಟ್ರೈಲಜಿಯಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾಗಿದ್ದರು. ಅವರ ಸಾವಿನ ನಿಖರ ಸಮಯ ಮತ್ತು ಸ್ಥಳವನ್ನು ಸದ್ಯಕ್ಕೆ ರಹಸ್ಯವಾಗಿಡಲಾಗಿದೆ.
“ಮೋಟಾರ್ಸೈಕಲ್ ಅಪಘಾತದ ಪರಿಣಾಮವಾಗಿ ಚಾನ್ಸ್ ಪೆರ್ಡೊಮೊ ಅವರ ಅಕಾಲಿಕ ನಿಧನದ ಸುದ್ದಿಯನ್ನು ಭಾರವಾದ ಹೃದಯದಿಂದ ಹಂಚಿಕೊಳ್ಳುತ್ತೇವೆ.” ಪೆರ್ಡೊಮೊ ಅವರ ಪ್ರತಿನಿಧಿ ಬ್ರಿಟಿಷ್ ತಾರೆಯ ಸುದ್ದಿಯನ್ನು ದೃಢೀಕರಿಸುವ ಹೇಳಿಕೆಯನ್ನು ಬಿಡುಗಡೆ ಮಾಡಿದರು. ಹೇಳಿಕೆಯ ಪ್ರಕಾರ, ಅಪಘಾತದಲ್ಲಿ ಬೇರೆ ಯಾರೂ ಭಾಗಿಯಾಗಿಲ್ಲ ಎನ್ನಲಾಗಿದೆ.