ಶಿವಮೊಗ್ಗ : ಈ ಬಾರಿ ಶಿವಮೊಗ್ಗ ಕ್ಷೇತ್ರದಿಂದ ಕಾಂಗ್ರೆಸ್ ಗೀತಾ ಶಿವರಾಜಕುಮಾರ್ ಅವರನ್ನು ಕಣಕ್ಕೆ ಇಳಿಸಿದ್ದು, ಏಪ್ರಿಲ್ 12ಕ್ಕೆ ಅಪಾರ ಬೆಂಬಲಿಗರೊಂದಿಗೆ ಅವರು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಶಿವಣ್ಣ ಪ್ರಚಾರದ ವೇಳೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಶಿವಣ್ಣ ಪ್ರಚಾರದಿಂದ ಅಭ್ಯರ್ಥಿ ಗೀತಾ ಅವರಿಗೆ ಅನುಕೂಲವಾಗಲಿದೆ. ಗೀತಾ ಕೇವಲ ಬಂಗಾರಪ್ಪ ಮಗಳಲ್ಲ ಶಿವಣ್ಣನ ಪತ್ನಿ, ಡಾ.ರಾಜ್ ಕುಮಾರ್ ಸೊಸೆ ಆಗಿದ್ದಾರೆ. ಈ ಬಾರಿ ಗೀತಾ ಗೆಲ್ಲುವುದು ನೂರಕ್ಕೆ ನೂರು ಗ್ಯಾರಂಟಿ. ರಾಘವೇಂದ್ರ ಈ ಬಾರಿ ಸೋಲುತ್ತಾರೆ ಎಂದರು.
BREAKING : ಮೂರು ಕ್ಷೇತ್ರಗಳಿಗೆ ‘ಜೆಡಿಎಸ್’ ಅಭ್ಯರ್ಥಿಗಳ ಪಟ್ಟಿ ಪ್ರಕಟ : ಮಂಡ್ಯದಿಂದ HD ಕುಮಾರಸ್ವಾಮಿ ಸ್ಪರ್ಧೆ
ಇಂದು ಗೀತಾ ಶಿವರಾಜ್ ಕುಮಾರ್ ದಂಪತಿ ಶಿವಮೊಗ್ಗದ ನಗರದ ದೇವತೆ ಮಾರಿಕಾಂಬ ದೇವಾಲಯಕ್ಕೆ ಭೇಟಿ ನೀಡಿ ಗದ್ದುಗೆ ಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಅವರು, ನಾನು ಭದ್ರಾವತಿಯಿಂದ ಪ್ರಚಾರ ಆರಂಭಿಸಿದ್ದೇನೆ. ಇವತ್ತು ಭದ್ರಾವತಿ, ಶಿಕಾರಿಪುರದಲ್ಲಿ ಪ್ರಚಾರ ನಡೆಸಲಿದ್ದೇನೆ. ಹೋದ ಕಡೆ ತೊಂದರೆ ಕಾಣುತ್ತಿಲ್ಲ. ಎಲ್ಲಾ ಕಡೆ ಬೆಂಬಲ ನೀಡುತ್ತಿದ್ದಾರೆ. ನನ್ನ ಗೆಲುವು 100ಕ್ಕೆ ನೂರರಷ್ಟು ನಿಶ್ಚಿತ. ಐದು ಗ್ಯಾರಂಟಿ ಜೊತೆ ಮುಂದೆ ಹಲವು ಯೋಜನೆ ಇದೆ. ಹಾಗಾಗಿ ಮತ ನೀಡಿ ಎಂದು ಕೇಳುತ್ತಿದ್ದೇವೆ ಎಂದರು.
ಏ.12ಕ್ಕೆ 25 ಸಾವಿರ ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ‘ನಾಮಪತ್ರ’ ಸಲ್ಲಿಸುತ್ತೇನೆ : ಈಶ್ವರಪ್ಪ ಘೋಷಣೆ
ಇದೇ ವೇಳೆ ಮಾತನಾಡಿದ ನಟ ಶಿವರಾಜ್ ಕುಮಾರ್ ಚುನಾವಣೆಯಲ್ಲಿ ಗೆಲ್ಲಬೇಕು ಅಂತಾನೇ ನಿಲ್ಲುವುದು ಎಂದು ಹೇಳಿದ್ದಾರೆ. ಚುನಾವಣೆ ಎಂದರೆ ಮುಖದಲ್ಲಿ ಭರವಸೆ ಬರಬೇಕು. ಜನರಿಗೆ ನಂಬಿಕೆ ಬೇಕು. ಭರವಸೆ ಇದ್ದರೆ ಮಾತ್ರ ಚುನಾವಣೆ ನಿಲ್ಲಬೇಕು. ಭರವಸೆ ಇಲ್ಲದಿದ್ದರೆ ಚುನಾವಣೆಗೆ ನಿಲ್ಲಬಾರದು. ಈ ಸಲ ತುಂಬಾ ಚೆನ್ನಾಗಿ ಪಾಸಿಟಿವ್ ಇರುವುದು ನನಗೆ ಖುಷಿ ಕೊಡುತ್ತಿದೆ. ಕ್ಷೇತ್ರದ ಸಮಸ್ಯೆ ಬಗ್ಗೆ ನನಗೆ ಗೊತ್ತಿಲ್ಲ. ಗೀತಾ ಸಮಸ್ಯೆ ಬಗ್ಗೆ ಗಮನಹರಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.