ಬೆಂಗಳೂರು: ನಗರದಲ್ಲಿ ನಿಯಮ ಪಾಲಿಸದ ಪಿಜಿ, ಹೋಟೆಲ್ ಗಳಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಬಿಗ್ ಶಾಕ್ ನೀಡಿದೆ. ಅದೇ ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಪಿ.ಜಿ ಗಳ ಹಾಗೂ ಹೋಟೆಲ್ ಗಳ ಪರಿಶೀಲನೆ ಹಾಗೂ ರೂ.2,57,100/- ದಂಡ ವಸೂಲಿ ಮಾಡಿರುವುದಾಗಿ ಆಯುಕ್ತ ಕೆ ಎನ್ ರಮೇಶ್ ತಿಳಿಸಿದ್ದಾರೆ.
ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ದಿನಾಂಕ : 12-01-2026 ರಿಂದ ದಿನಾಂಕ : 04-02-2026ರ ವರೆಗೆ ಜಯನಗರ, ಬೆಂಗಳೂರು ದಕ್ಷಿಣ, ಬಿಟಿಎಂ ಲೇಔಟ್ ಹಾಗೂ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಪೇಯಿಂಗ್ ಗೆಸ್ಟ್ ವಸತಿ ಗೃಹಗಳಲ್ಲಿ (PG) ಹಾಗೂ ಹೋಟೆಲ್ ಉದ್ದಿಮೆಗಳಲ್ಲಿ ಶುದ್ಧ ಕುಡಿಯುವ ನೀರು, ಶುಚಿತ್ವ, ಅಡುಗೆ ಕೋಣೆ ನೈರ್ಮಲ್ಯ, ಸುರಕ್ಷತೆ, ಉತ್ತಮ ಶೌಚಾಲಯ ವ್ಯವಸ್ಥೆ, ಅಗ್ನಿಶಾಮಕ ಸಾಧನಗಳು ಹಾಗೂ ಸಿ.ಸಿ.ಟಿ.ವಿ ಕ್ಯಾಮರಾ ಅಳವಡಿಕೆ ಮತ್ತು FSSA ನ ಆಹಾರ ಸುರಕ್ಷತಾ ಪ್ರಮಾಣ ಪತ್ರ ಇತ್ಯಾದಿ ಮೂಲಭೂತ ಸೌಕರ್ಯಗಳು ಇರುವ ಬಗ್ಗೆ ಪರಿಶೀಲನೆ ನಡೆಸಲಾಗಿದ್ದು, ನ್ಯೂನತೆಗಳು ಕಂಡುಬಂದಿವೆ ಎಂದಿದ್ದಾರೆ.
ಉದ್ದಿಮೆಗಳಿಗೆ ನೋಟಿಸ್‌ನ್ನು ಜಾರಿ ಮಾಡಿ, ದಿನಾಂಕ 12-01-2026 ರಿಂದ ದಿನಾಂಕ 04-02-2026ರವರೆಗೆ ಒಟ್ಟು ರೂ.2,06,500/- ದಂಡ ವಿಧಿಸಲಾಗಿರುತ್ತದೆ. ಹಾಗೂ 14 ಪಿ.ಜಿ ಗಳ ಅಡುಗೆ ಕೋಣೆಗಳನ್ನು ಮುಚ್ಚಲಾಗಿದೆ. ಇದರ ಜೊತೆಗೆ ಕೋಟ್ಟಾ ಕಾಯ್ದೆ (ಸಾರ್ವಜನಿಕ ಧೂಮಪಾನ ನಿಷೇಧ) ಅಡಿ ನಿಯಮ ಉಲ್ಲಂಘಿಸಿದ ಉದ್ದಿಮೆಗಳಿಗೂ ಸಹ ರೂ.50,600/- ದಂಡ ವಿಧಿಸಲಾಗಿದೆ ಎಂದು ತಿಳಿಸಿದ್ದಾರೆ.
BREAKING: ಮೇಘಾಲಯದಲ್ಲಿ ಕಲ್ಲಿದ್ದಲು ಗಣಿಯಲ್ಲಿ ಭೀಕರ ಸ್ಫೋಟ: 10 ಕಾರ್ಮಿಕರು ದುರ್ಮರಣ








