ಕೊಪ್ಪಳ: ಇದು ಕೇವಲ ಮಠ ಅಲ್ಲ. ಇದೊಂದು ದೊಡ್ಡ ಶಕ್ತಿ ಕೇಂದ್ರ. ಜನರಿಗೆ ಜ್ಞಾನ, ಧರ್ಮದ ಅರಿವು ಮೂಡಿಸುವ ಪುಣ್ಯ ಕ್ಷೇತ್ರ. ನನ್ನ 60 ವರ್ಷಗಳ ಜೀವನದಲ್ಲಿ ಇಷ್ಟು ದೊಡ್ಡ ಮಟ್ಟದ ಜಾತ್ರೆ ನೋಡಿಲ್ಲ. ನಾನಿಂದು ಉಪಮುಖ್ಯಮಂತ್ರಿಯಾಗಿ ಅಲ್ಲ, ಭಕ್ತನಾಗಿ ಇಲ್ಲಿಗೆ ಬಂದಿದ್ದೇನೆ ಎಂಬುದಾಗಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಗವಿ ಸಿದ್ದೇಶ್ವರ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಹಾಗೂ ಮಾಧ್ಯಮಗಳ ಜತೆ ಮಾತನಾಡಿದಂತ ಅವರು, ದೇವರು, ಗವಿ ಸಿದ್ದೇಶ್ವರ, ಅಜ್ಜಯ್ಯನವರು ಸೇರಿ ಇಲ್ಲಿನ ಜನರ ನಂಬಿಕೆಯಾಗಿದ್ದಾರೆ. ಇಲ್ಲಿರುವ ಎಲ್ಲಾ ಭಕ್ತರಿಗೆ ನೆಮ್ಮದಿ, ಸುಖ, ಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ಭಕ್ತ ಹಾಗೂ ಭಗವಂತನ ನಡುವೆ ವ್ಯವಹಾರ ನಡೆಯುವ ಸ್ಥಳ ದೇವಾಲಯ. ಈ ದೇವಾಲಯದಲ್ಲಿ ಅಜ್ಜನ ಹಾಗೂ ನಿಮ್ಮ ಆಶೀರ್ವಾದ ಪಡೆಯಲು ಬಂದಿದ್ದೇನೆ. ಪುರಂದರ ದಾಸರ, ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯ ಪದುಭನಾಭನ ಪಾದ ಭಜನೆ ಪರಮ ಸುಖವಯ್ಯ ಪದದಂತೆ ಎಂದು ಈ ಪವಿತ್ರ ಕಾರ್ಯಕ್ರಮದಲ್ಲಿ ನಿಮ್ಮನ್ನು ಭೇಟಿ ಮಾಡುರುವುದು ನನ್ನ ಭಾಗ್ಯ ಎಂದು ಹೇಳಿದರು.
ಮರಕ್ಕೆ ಬೇರು ಎಷ್ಟು ಮುಖ್ಯವೋ ಅದೇರೀತಿ ಮನುಷ್ಯರಿಗೆ ನಂಬಿಕೆ ಮುಖ್ಯ. ಈ ದೇವರನ್ನು ನಂಬಿ ಈ ಜಾತ್ರೆಯಲ್ಲಿ ಭಾಗವಹಿಸಲು ಬಂದಿರುವ ನಿಮಗೆ ಶ್ರೀಗಳ ಆಶೀರ್ವಾದ ಸಿಗಲಿ ಎಂದರು.
ರಾಜ್ಯದ 219 ಕೇಂದ್ರಗಳಲ್ಲಿ ‘800 ಡಯಾಲಿಸಿಸ್ ಯಂತ್ರ’ಗಳ ಅಳವಡಿಕೆ – ಸಿಎಂ ಸಿದ್ಧರಾಮಯ್ಯ
Covid19 Update: ರಾಜ್ಯದಲ್ಲಿಂದ 103 ಜನರಿಗೆ ಕೊರೋನಾ, 134 ಮಂದಿ ಗುಣಮುಖ