ಮುಂಬೈ: ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತದ ಕೈಗಾರಿಕೋದ್ಯಮಿ ಗೌತಮ್ ಅದಾನಿ(Gautam Adani) ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ(Uddhav Thackeray) ಅವರನ್ನು ಬುಧವಾರ ಮುಂಬೈನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಉದ್ದವ್ ಠಾಕ್ರೆ ನಿವಾಸ ಮಾತೋಶ್ರೀಗೆ ಭೇಟಿ ನೀಡಿದ ಅದಾನಿ ಮಾತುಕತೆ ನಡೆಸಿದ್ದಾರೆ. ಆದ್ರೆ, ಯಾವುದರ ಬಗ್ಗೆ ಚರ್ಚೆ ನಡೆದಿದೆ ಎಂಬುದನ್ನು ಮೂಲಗಳು ಬಹಿರಂಗಪಡಿಸಿಲ್ಲ.
ಇನ್ನೂ, ಉದ್ದವ್ ಠಾಕ್ರೆ ಭೇಟಿ ಮಾಡಿದ ಬಳಿಕ ಅದಾನಿ ಅವರನ್ನು ಬಿಜೆಪಿಯ ಮುಂಬೈ ಅಧ್ಯಕ್ಷ ಆಶಿಶ್ ಶೆಲಾರ್ ಭೇಟಿ ಮಾಡಿ ಚೆರ್ಚೆ ನಡೆಸಿದ್ದಾರೆ. ಈ ಎಲ್ಲ ಬೆಳವಣಿಗೆಗಳು ರಾಜ್ಯದಲ್ಲಿ ಭಾರೀ ಕುತೂಹಲ ಮೂಡಿಸಿವೆ.
ಶಿವಸೇನೆಯ ಹಿರಿಯ ನಾಯಕ ಏಕನಾಥ್ ಶಿಂಧೆ ಅವರು ತಮ್ಮ ನಾಯಕತ್ವದ ವಿರುದ್ಧ ದಂಗೆ ಎದ್ದ ನಂತರ ಮತ್ತು ಜೂನ್ನಲ್ಲಿ ಪಕ್ಷದ 39 ಶಾಸಕರೊಂದಿಗೆ ದೂರ ಸರಿದ ನಂತರ ಉದ್ದವ್ ಠಾಕ್ರೆ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರು.
ವೇಗವಾಗಿ ಬಂದು ಆಟೋ ರಿಕ್ಷಾಗಳಿಗೆ ಗುದ್ದಿದ ಕಾರು, ಹಲವರಿಗೆ ಗಾಯ… ಭಯಾನಕ ದೃಶ್ಯ ವೈರಲ್
BIGG NEWS : ವಿಪಕ್ಷಗಳ ವಿರೋಧದ ನಡುವೆಯೂ ವಿಧಾನಸಭೆಯಲ್ಲಿ `ಮತಾಂತರ ನಿಷೇಧ ಮಸೂದೆ’ ಅಂಗೀಕಾರ
Good News : ರಾಜ್ಯ ಸರ್ಕಾರದಿಂದ ಬಡಜನತೆಗೆ ಮತ್ತೊಂದು ಸಿಹಿಸುದ್ದಿ : 72 ಗಂಟೆಯೊಳಗೆ ಮನೆ ಬಾಗಿಲಿಗೆ ಬರಲಿದೆ ಪಿಂಚಣಿ!