ಕೆಎನ್ಎನ್ಡಿಜಿಟಲ್ ಡೆಸ್ಕ್ : ವ್ಯಾಪಾರ ಮಾಡುವ ಯೋಚನೆ ಇದ್ದರೆ ಗ್ಯಾಸ್ ಏಜೆನ್ಸಿ ಡೀಲರ್ಶಿಪ್ ಒಂದು ಉತ್ತಮ ಅವಕಾಶ. ಇದು ಲಾಭದಾಯಕ ವ್ಯವಹಾರವಾಗಿದ್ದು, ಡೀಲರ್ಶಿಪ್ಗಾಗಿ ಅರ್ಜಿಗಳನ್ನ ಸ್ವೀಕರಿಸಲಾಗುತ್ತಿದೆ. ಆ ವಿವರಗಳು ನಿಮಗಾಗಿ.
ಹೌದು, ವ್ಯಾಪಾರ ಮಾಡುವ ಆಲೋಚನೆ ಇದ್ದರೆ, ಗ್ಯಾಸ್ ಸಿಲಿಂಡರ್ ಡೀಲರ್ಶಿಪ್ ಉತ್ತಮ ಪರ್ಯಾಯವಾಗಿದೆ. ಯಾಕಂದ್ರೆ, ಪ್ರಯೋಜನಗಳು ಉತ್ತಮವಾಗಿವೆ. ಅನೇಕರು ಗ್ಯಾಸ್ ಸಿಲಿಂಡರ್ಗಳ ಡೀಲರ್ಶಿಪ್ನೊಂದಿಗೆ ಉತ್ತಮವಾಗಿ ಗಳಿಸಬೋದು. ಈಗ ಅಂತಹ ಅವಕಾಶ ನಿಮಗಾಗಿ ಕಾಯುತ್ತಿದೆ. ಈ ಡೀಲರ್ಶಿಪ್ʼನ್ನ ಪೆಟ್ರೋ ಗ್ಯಾಸ್ ಎನರ್ಜಿ ಇಂಡಿಯಾ ಲಿಮಿಟೆಡ್ ನೀಡುತ್ತದೆ. ನೀವು ತಕ್ಷಣ ಅರ್ಜಿ ಸಲ್ಲಿಸಿದ್ರೆ ನೀವು ಆ ಅವಕಾಶವನ್ನ ಪಡೆಯಬಹುದು.
ಅಂದ್ಹಾಗೆ, ಪೆಟ್ರೋ ಗ್ಯಾಸ್ ಎನರ್ಜಿ ಇಂಡಿಯಾ ಲಿಮಿಟೆಡ್ ಪೆಟ್ರೋಲಿಯಂ ಇಂಧನದ ಉತ್ಪಾದಕ. ಭಾರತವು ದೊಡ್ಡ ಸಂಖ್ಯೆಯ ಕಂಪನಿ ವ್ಯವಹಾರಗಳನ್ನ ಹೊಂದಿದೆ. ಕಂಪನಿ ವತಿಯಿಂದ ಎಲ್ ಪಿಜಿ ಗ್ಯಾಸ್ ಆರಂಭಿಸಲು ಡೀಲರ್ ಶಿಪ್ ನೀಡಲಾಗುತ್ತಿದೆ. ಕಂಪನಿಯು ತನ್ನ ವ್ಯವಹಾರವನ್ನ ಪ್ರತಿ ಮನೆಗೆ ತನ್ನ ಅನಿಲವನ್ನು ತರಲು ವಿಸ್ತರಿಸುತ್ತಿದೆ. ಇದರ ಭಾಗವಾಗಿ, ಡೀಲರ್ಶಿಪ್ ನೀಡುತ್ತಿದೆ.
ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಅರ್ಹತೆಯೇನು?
ಈ ಕಂಪನಿಯ ಗ್ಯಾಸ್ ಸಿಲಿಂಡರ್ ಡೀಲರ್ಶಿಪ್ ಅರ್ಜಿದಾರರು ಭಾರತೀಯರಾಗಿರಬೇಕು. ಅರ್ಜಿದಾರರು 10 ನೇ ತರಗತಿ ಪ್ರಮಾಣಪತ್ರವನ್ನ ಹೊಂದಿರಬೇಕು. ಅಲ್ಲದೇ ವಯಸ್ಸು 21 ರಿಂದ 60 ವರ್ಷದೊಳಗಿರಬೇಕು. ಅರ್ಜಿದಾರರ ಕುಟುಂಬದ ಎಲ್ಲಾ ಸದಸ್ಯರು ತೈಲ ಕಂಪನಿಯ ಉದ್ಯೋಗಿಗಳಾಗಿರಬಾರದು.
ಡೀಲರ್ಶಿಪ್ಗೆ ಏನು ಬೇಕು?
ಈ ಗ್ಯಾಸ್ ಏಜೆನ್ಸಿ ಡೀಲರ್ ಶಿಪ್ ನಡೆಸಲು ಖಾಲಿ ಜಾಗ ಅಥವಾ ದೊಡ್ಡ ಗೋಡೌನ್ ಇರಬೇಕು. ಸಣ್ಣ ಜಾಗದಲ್ಲಿ ಈ ವ್ಯವಹಾರ ಸಾಧ್ಯವಿಲ್ಲ. ಜತೆಗೆ ಸ್ಥಳಕ್ಕೆ ಸಂಬಂಧಿಸಿದ ದಾಖಲೆಗಳು ಇರಬೇಕು. ಈ ಏಜೆನ್ಸಿ ನಡೆಸಲು ಹತ್ತು ಮಂದಿ ಸಹಾಯಕರ ಅಗತ್ಯವಿದೆ. ಗೋಡೌನ್ ಕೂಡ ಇರಬೇಕು.