ಬೆಂಗಳೂರು : ವಾರದ ಹಿಂದಷ್ಟೇ ಕೆಜಿಗೆ 500 ರೂ. ಇದ್ದ ಬೆಳ್ಳುಳ್ಳಿ ದರ ಈಗ ಕೆಜಿಗೆ 150ರಿಂದ 200 ರೂ.ಗಳಿಗೆ ಇಳಿದಿದೆ. ಇದರಿಂದಾಗಿ, ಅನೇಕ ಕುಟುಂಬಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಇತ್ತೀಚೆಗೆ ಬೆಳ್ಳುಳ್ಳಿ ಬೆಲೆ ಏರಿಕೆಯಾಗಿದ್ದರಿಂದ ಅಡುಗೆಗೆ ಬೆಳ್ಳುಳ್ಳಿಯನ್ನು ಬಂಗಾರದಂತೆ ಉಪಯೋಗಿಸುವ ಹಾಗಾಗಿತ್ತು. ಉತ್ತರ ಭಾರತದಿಂದ ಬೆಳ್ಳುಳ್ಳಿ ಯಥೇಚ್ಛವಾಗಿ ರಾಜ್ಯಕ್ಕೆ ಬಂದಿದ್ದರಿಂದ ಬೆಲೆ ಇಳಿಕೆಗೆ ಅದು ಸಹಕಾರಿಯಾಗಿದೆ ಎಂದು ತಿಳಿದುಬಂದಿದೆ.
ಅನಗತ್ಯ ಖರ್ಚಿನ ನೆಪ ಹೇಳಿ ಪತ್ನಿಗೆ ನೀಡುವ ‘ಜೀವನಾಂಶದಲ್ಲಿ’ ಇಳಿಕೆ ಇಲ್ಲ : ಹೈಕೋರ್ಟ್
ಮಧ್ಯಪ್ರದೇಶ, ರಾಜಾಸ್ಥಾನ, ಗುಜರಾತ್ ಮತ್ತಿತರ ರಾಜ್ಯಗಳಲ್ಲಿ ಯಥೇಚ್ಛವಾಗಿ ಬೆಳೆಯಲಾಗಿದೆ. ಹೀಗಾಗಿ, ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಯಾಗಿದ್ದು, ಬೆಲೆಗಳು ಇಳಿಕೆಯಾಗಿವೆ.ಹೋಟೆಲ್‌ಗಳಲ್ಲಿಕೂಡ ಬೆಳ್ಳುಳ್ಳಿ ಬಳಕೆ ಎಂದಿನಂತಿರಲಿಲ್ಲ. ಆದರೆ ಈಗ ಬೆಳ್ಳುಳ್ಳಿ ದರದಲ್ಲಿಭಾರೀ ಇಳಿಕೆಯಾಗಿದ್ದು, ಅಗತ್ಯವಿರುವಷ್ಟು ಪ್ರಮಾಣದಲ್ಲಿ ಬಳಸಬಹುದಾಗಿದೆ. ದೇಶಾದ್ಯಂತ ಬೆಳ್ಳುಳ್ಳಿ ಕೊರತೆಯಿತ್ತು. ಉತ್ತರ ಭಾರತದ ರಾಜ್ಯಗಳಿಂದ ಬೆಳ್ಳುಳ್ಳಿ ಬೆಳೆ ಸಾಕಷ್ಟು ಪ್ರಮಾಣದಲ್ಲಿ ಬಂದಿದೆ.
ನೀರಿನ ಬಿಕ್ಕಟ್ಟನ್ನು ರಾಜ್ಯ ಸರ್ಕಾರ ಸರಿಯಾಗಿ ನಿರ್ವಹಿಸುತ್ತಿಲ್ಲ : ಸಂಸದ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಳ್ಳುಳ್ಳಿ ದರ ಭಾರೀ ಪ್ರಮಾಣದಲ್ಲಿಇಳಿಕೆಯಾಗಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸದ್ಯ, ಬೆಳ್ಳುಳ್ಳಿ ದರ ಏರಿಕೆಯಾಗುವುದಿಲ್ಲ. ಹೀಗಾಗಿ, ಸರಕಾರ ಖರೀದಿ ಕೇಂದ್ರಗಳನ್ನು ತೆರೆದು ರೈತರಿಂದ ಕನಿಷ್ಠ ಬೆಂಬಲ ಬೆಲೆಯಡಿ ಬೆಳ್ಳುಳ್ಳಿಯನ್ನು ಖರೀದಿಸಬೇಕು ಎಂದು ಹಲವರು ಒತ್ತಾಯಿಸಿದ್ದಾರೆ.
ಮುಂಬೈ : ಕಸ್ಟಮ್ಸ್ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ : 1.4ಕೋಟಿ ಮೌಲ್ಯದ 2.8ಕೆಜಿ ‘ಅಕ್ರಮ ಚಿನ್ನ’ ಜಪ್ತಿ