ಬೆಂಗಳೂರು : ಬೆಂಗಳೂರಿನಲ್ಲಿ ಗಾಜಾ ಬೆಳೆದು ಮಾರಾಟ ಮಾಡುತ್ತಿದ್ದ ವ್ಯಕ್ತಿ ಅರೆಸ್ಟ್ ಆಗಿದ್ದಾನೆ ಕುಮಾರಸ್ವಾಮಿ ಲೇಔಟ್ ಪೊಲೀಸರಿಂದ ಬಿ ಉಮೇಶ್ (35) ಎನ್ನುವ ವ್ಯಕ್ತಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯಿಂದ 15 ಲಕ್ಷ ಮೌಲ್ಯದ 30 ಕೆಜಿ 720 ಗ್ರಾಂ ಗಾಂಜಾ ಪೊಲೀಸರ ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಉಮೇಶ್ ಕಾಜ ಬೆಳೆಯುತ್ತಿದ್ದ ಬೆಂಗಳೂರಲ್ಲಿ ಮಾರಾಟ ಮಾಡಲು ಬಂದಾಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕುಮಾರಸ್ವಾಮಿ ಲೇಔಟ್ ನ ಕೆಲವು ಸ್ಥಳಗಳಲ್ಲಿ ಗಾಂಜ ಮಾರಾಟ ಮಾಡಿದ್ದಾನೆ. ಖಾಸಗಿ ಕಾಲೇಜು ಹಿಂಭಾಗ ಗಾಂಜಾ ಮಾರಾಟ ಮಾಡುತ್ತಿದ್ದಾಗ ಅರೆಸ್ಟ್ ಮಾಡಿದ್ದಾರೆ. ಜಮೀನಿನಲ್ಲಿ ಗಾಂಜಾ ಗಿಡ ಬೆಳೆದು ಆರೋಪಿ ಮಾರಾಟ ಮಾಡುತ್ತಿದ್ದ








