ಚಿಕ್ಕಮಗಳೂರು : ಗಾಂಜಾ ಮತ್ತಿನಲ್ಲಿ ಪುಂಡನೋರ್ವ ಕರ್ತವ್ಯನಿರತ ಪೊಲೀಸರ ಮೇಲೆಯೇ ಡ್ರ್ಯಾಗರ್‌ನಿಂದ ಹಲ್ಲೆ ನಡೆಸಿದ ಘಟನೆ ಚಿಕ್ಕಮಗಳೂರು ನಗರದ ಬೇಲೂರು -ಹಿರೇಮಗಳೂರು ರಸ್ತೆಯಲ್ಲಿ ಘಟನೆ ನಡೆದಿದೆ.
ಹೌದು ಸಗನೀಪುರದ ಕೌಶಿಕ್ ಎಂಬುವವ ಪುಂಡಾಟ ನಡೆಸಿದ್ದು, ಎಣ್ಣೆ-ಗಾಂಜಾ ದಾಸನಾಗಿದ್ದ ವ್ಯಕ್ತಿ. ಗಾಂಜಾ ಸೇವಿಸಿ ಮತ್ತಿನಲ್ಲಿ ರಸ್ತೆಯಲ್ಲಿ ಸಿಕ್ಕ ಸಿಕ್ಕವರ ಮೇಲೆ ರಾಡು ಡ್ರ್ಯಾಗರ್‌ನಿಂದ ಇರಿದು ಹಲ್ಲೆ ಮಾಡುತ್ತಿದ್ದ ಪಾತಕಿ. ಕೆಲಕಾಲ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆಯಲ್ಲಿ ಆತಂಕ ಸೃಷ್ಟಿಸಿದ್ದ.
ಈ ವೇಳೆ ಸ್ಥಳೀಯರು ಆತನ ಪುಂಡಾಟಕ್ಕೆ ಬೆಟ್ಟಿ ಬಿದ್ದಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಈ ವೇಳೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ಅವರ ಮೇಲು ಈತ ಹಲ್ಲೆ ನಡೆಸಲು ಮುಂದಾಗಿದ್ದ, ಈ ವೇಳೆ ಪೆಟ್ರೋಲ್ ಬಂಕಿ ನಿಂದ ಸಿಬ್ಬಂದಿಗೆ ಚಾಕುವಿನಿಂದ ಇರದಿದ್ದಾನೆ ಎನ್ನಲಾಗಿದೆ.ಘಟನೆ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.