ಚಿಕ್ಕಬಳ್ಳಾಪುರ : ಅಂತರಾಷ್ಟ್ರೀಯ ದರೋಡೆಕೋರ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ ಹೆಸರನ್ನು ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ ಮೇಲೆ ಬರೆದು ಕಿಡಿಗೇಡಿಗಳು ವಿಕೃತಿ ಮೆರೆದಿದ್ದಾರೆ. ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ ಬರೆದು ವಿಕೃತಿ ಮೆರೆದಿದ್ದಾರೆ.
ಚಿಕ್ಕಬಳ್ಳಾಪುರದ ನಂದಿ ಬೆಟ್ಟದಲ್ಲಿ ಇರುವಂತಹ ಟಿಪ್ಪು ಬೇಸಿಗೆ ಅರಮನೆಯ ಮೇಲೆ ಕಿಡಿಗೇಡಿಗಳು ಈ ರೀತಿ ಹೆಸರು ಬರೆದು ವಿಕೃತಿ ಮೆರೆದಿದ್ದಾರೆ. ಲಾರೆನ್ಸ್ ಬಿಷ್ಣೋಯಿ ಕುಖ್ಯಾತ ಅಂತರಾಷ್ಟ್ರೀಯ ದರೋಡೆಕೋರನಾಗಿದ್ದು ಭಾರತೀಯ ಪುರಾತತ್ವ ಇಲಾಖೆ ಅಧೀನದಲ್ಲಿ ಈ ಒಂದು ಅರಮನೆ ಇದೆ. ಅರಮನೆಯ ಗೋಡೆಯ ಮೇಲೆ ಲಾರೆನ್ಸ್ ಬಿಷ್ಣೋಯಿ ಹೆಸರು ಕೆತ್ತನೆ ಮಾಡಿ ವಿಕೃತಿ ಮೆರೆದಿದ್ದಾರೆ. ಪ್ರವಾಸಕ್ಕೆ ಎಂದು ಬರುವ ಪ್ರವಾಸಿಗರು ಈ ಒಂದು ಹೆಸರು ಬರೆದಿದ್ದಕ್ಕೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.








