ಬೆಂಗಳೂರು: ನಗರದಲ್ಲಿ ನಡೆದಿದ್ದಂತ ಮನೆ ಕಳ್ಳತನ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಸಂಬಂಧ ನಾಲ್ವರು ಕಳ್ಳರನ್ನು ಬಂಧಿಸಿದ್ದಾರೆ. ಆದ್ರೇ ಇವರು ಸಿಕ್ಕಿದ್ದೇ ರೋಚಕವಾಗಿದೆ. ಅದು ಹೇಗೆ ಎನ್ನುವ ಬಗ್ಗೆ ಮುಂದೆ ಓದಿ.
ಬೆಂಗಳೂರಿನ ರಾಮಮೂರ್ತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಮಂಜುನಾಥ್ ಎಂಬುವರ ಮನೆಯಲ್ಲಿ ಕಳ್ಳತನವಾಗಿತ್ತು. 400 ಗ್ರಾಂ ಚಿನ್ನಾಭರಣವನ್ನು ಕಳ್ಳರ ಗ್ಯಾಂಗ್ ದೋಚಿತ್ತು. ಕಳ್ಳತನದ ವೇಳೆಯಲ್ಲಿ ಮನೆಯ ಮುಂದೆ ಇದ್ದಂತ ಸಿಸಿಟಿವಿ ತಿರುಗಿಸಿ ಒಳಗೆ ನುಗ್ಗಿದ್ದಂತ ಕಳ್ಳರ ಕೈಚಳಕದ ದೃಶ್ಯ ಮನೆ ಒಳಗಿನ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಈ ಸಂಬಂಧ ಮಂಜುನಾಥ್ ನೀಡಿದಂತ ದೂರಿನ ಹಿನ್ನಲೆಯಲ್ಲಿ ರಾಮಮೂರ್ತಿ ನಗರದ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಇಂದು ನಾಲ್ವರು ಕಳ್ಳರನ್ನು ಸಿಸಿಟಿವಿ ದೃಶ್ಯ ಆಧರಿಸಿ ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 19.5 ಲಕ್ಷ ಮೌಲ್ಯದ 400 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ಅಂದಹಾಗೇ ಮಂಜುನಾಥ್ ಮನೆಯಲ್ಲಿ ಕಳ್ಳತನದಲ್ಲಿ ಸಿಕ್ಕಿದ್ದಂತ ಚಿನ್ನಾಭರಣವನ್ನು ಹೊಸೂರಿಗೆ ಕೊಂಡೊಯ್ದಿದ್ದಂತ ಬಂಧಿತ ಆರೋಪಿಗಳ ಗ್ಯಾಂಗ್ ಜ್ಯುವೆಲರಿ ಶಾಪ್ ನಲ್ಲಿ ಮಾರಾಟಕ್ಕೆ ಯತ್ನಿಸಿತ್ತು. ಆಗ ಆಭರಣ ಅಂಗಡಿಯ ಮಾಲೀಕ ಇವು ನಕಲಿ ಚಿನ್ನವೆಂದು ತಿಳಿಸಿದ್ದನು.
ನಕಲಿ ಚಿನ್ನಾಭರಣ ಎಂಬುದಾಗಿ ತಿಳಿದಂತ ಕಳ್ಳರು, ಹೊಸೂರು ರಸ್ತೆ ಬದಿಯಲ್ಲಿ ಬಿಸಾಕಿ ಹೋಗಿದ್ದರು. ಇದೀಗ ಪೊಲೀಸರು ಬಂಧಿಸಿದ ಬಳಿಕ ಆರೋಪಿಗಳಾದಂತ ವೆಂಕಟೇಶ್, ಹರೀಶ್, ರಾಜೇಶ್, ರಾಜ್ ಕಿರಣ್ ವಿಚಾರಣೆಯ ವೇಳೆಯಲ್ಲಿ ಈ ಮಾಹಿತಿ ನೀಡಿದ್ದರಿಂದ ಸ್ಥಳಕ್ಕೆ ತೆರಳಿ ಹುಡುಕಿದಾಗ ರಸ್ತೆ ಬದಿಯಲ್ಲಿ 400 ಗ್ರಾಂ ಚಿನ್ನಾಭರಣ ಪತ್ತೆಯಾಗಿದೆ.
HEALTH TIPS: ಗರ್ಭಿಣಿಯರು ವಾಂತಿ, ವಾಕರಿಕೆ ಸಮಸ್ಯೆ ಇದ್ಯಾ? ಹಾಗಾದ್ರೆ ಚಿಂತೆಬಿಡಿ ಮನೆಮದ್ದು ಬಳಸಿ
BREAKING NEWS : ‘BCCI ಆಯ್ಕೆ ಸಮಿತಿ’ಯ ಅಧ್ಯಕ್ಷರಾಗಿ ‘ಚೇತನ್ ಶರ್ಮಾ’ ಪುನರಾಯ್ಕೆ |Chetan Sharma