ಕಲಬುರಗಿ : ರಾಜ್ಯದಲ್ಲಿ ಅಕ್ರಮವಾಗಿ ಭ್ರೂಣಲಿಂಗ ಪತ್ತೆ ಮಾಡುವ ಗ್ಯಾಂಗ್ ಎಂಟ್ರಿಯಾಗಿದ್ದು, ಮಾಹಿತಿ ರವಾನೆಯಾಗುತ್ತಿದ್ದಂತೆ ಕಲಬುರ್ಗಿ ಆರೋಗ್ಯ ಇಲಾಖೆ ಡಿಎಚ್ಓ ರಾಜಶೇಖರ ಮಾಲಿ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ಬಳಿಕ ಭ್ರೂಣಲಿಂಗ ಪರೀಕ್ಷೆ ಯಂತ್ರ ವಶಕ್ಕೆ ಪಡೆದಿದ್ದಾರೆ.
BIGG NEWS : “ಇಸ್ಲಾಂ ಧರ್ಮವನ್ನ ಉಳಿಸಲು ಭಾರತದ ಮೇಲೆ ದಾಳಿ ಮಾಡಿ” ; ಬಹಿರಂಗವಾಗಿ ಮುಸ್ಲಿಂರನ್ನ ಪ್ರಚೋದಿಸಿದ ‘ISIS’
ಮಹಾರಾಷ್ಟ್ರದ ಉಸ್ಮಾನಬಾದ್ ಆರೋಗ್ಯ ಇಲಾಖೆ ಸಿಬ್ಬಂದಿ ನೀಡಿದ ಮಾಹಿತಿ ಮೇರೆಗೆ ನಿನ್ನೆ ಸಂಜೆ ಈ ಗ್ಯಾಂಗ್ ನ ಬಾಡಿಗೆ ಮನೆಗೆ ದಾಳಿ ನಡೆಸಿ, ಕಲಬುರಗಿ ಆರೋಗ್ಯ ಇಲಾಖೆ ಸಿಬ್ಬಂದಿ ಅಕ್ರಮ ದಂಧೆಯನ್ನು ಬಯಲಿಗೆಳೆದಿದ್ದಾರೆ.
BIGG NEWS : “ಇಸ್ಲಾಂ ಧರ್ಮವನ್ನ ಉಳಿಸಲು ಭಾರತದ ಮೇಲೆ ದಾಳಿ ಮಾಡಿ” ; ಬಹಿರಂಗವಾಗಿ ಮುಸ್ಲಿಂರನ್ನ ಪ್ರಚೋದಿಸಿದ ‘ISIS’
ಮಹಾರಾಷ್ಟ್ರದಿಂದ ಕಲಬುರಗಿ ನಗರಕ್ಕೆ ಬಂದು ಕೆಲವರು ಭ್ರೂಣಲಿಂಗ ಪರೀಕ್ಷೆ ಮಾಡಿಸಿಕೊಂಡು ಹೋಗಿದ್ದಾರೆ. ದಾಳಿ ವೇಳೆಯಲ್ಲಿ ಪರೀಕ್ಷಾ ಕೇಂದ್ರದಲ್ಲಿದ್ದ ಭ್ರೂಣಲಿಂಗ ಪತ್ತೆ ಮಾಡುತ್ತಿದ್ದ ತಂಡದವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಬ್ರಹ್ಮಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.