ಚಿಕ್ಕಬಳ್ಳಾಪುರ: ಬುಲೆಟ್ ಬೈಕ್ಗಳನ್ನು ಕದ್ದು ಆಂದ್ರಪ್ರದೇಶಲ್ಲಿ ಮಾರಾಟ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗೊಂದನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಒಂದು ಕೋಟಿ ರೂ. ಮೌಲ್ಯದ ಬುಲೆಟ್ ಬೈಕ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇಬ್ಬರು ಇಂಜಿನಿಯರಿಂಗ್ ಸ್ಟೂಡೆಂಟ್ಸ್ಗಳನ್ನು ಅರೆಸ್ಟ್ ಮಾಡಿ ಅವರಿಂದ 12 ಬುಲೆಟ್ ಬೈಕ್ಗಳನ್ನು ವಶಕ್ಕೆ ಪಡೆದಿದ್ದು,ಬಾಗೇಪಲ್ಲಿ ಪೊಲೀಸರು ಈಗ 06 ಮಂದಿ ಬೈಕ್ ಮೆಕ್ಯಾನಿಕ್ಗಳನ್ನು ಅರೆಸ್ಟ್ ಮಾಡಿ ಅವರಿಂದಲೂ 18 ರಾಯಲ್ ಎನ್ಫೀಲ್ಡ್ ಬುಲೆಟ್ ಬೈಕ್ಗಳು ಸೇರಿದಂತೆ 5 ಡಿಯೋ, 3 ಬಜಾಜ್ ಪಲ್ಸಾರ್, 1 ಕೆಟಿಎಂ ಡ್ಯೂಕ್, 1 ಯಮಹಾ ಆರ್ ಒನ್ ಫೈವ್, 1 ಅಕ್ಸೆಸ್, ಹಾಗೂ 1 ಪ್ಯಾಷನ್ ಪ್ರೋ ಬೈಕ್ ಸೇರಿ ಒಟ್ಟು 30 ಬೈಕ್ಗಳನ್ನು ಸೀಜ್ ಮಾಡಿದ್ದಾರೆ. ಎರಡು ಪ್ರಕರಣಗಳಲ್ಲಿ ಸರಿಸುಮಾರು 1 ಕೋಟಿ ರೂ. ಮೌಲ್ಯದ 46ಕ್ಕೂ ಹೆಚ್ಚು ಬೈಕ್ಗಳನ್ನು ಬಾಗೇಪಲ್ಲಿ ಪೊಲೀಸರು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ.