ಕೆಎನ್ಎನ್ಡಿಜಿಟಲ್ ಡೆಸ್ಕ್ ; ಗಣೇಶನನ್ನ ಬುದ್ಧಿವಂತಿಕೆ, ಸಂತೋಷ ಮತ್ತು ಸಮೃದ್ಧಿಯ ಸಂಕೇತ ಎಂದು ಹೇಳಲಾಗುತ್ತದೆ. 10 ದಿನಗಳ ಹಬ್ಬವಾದ ಗಣೇಶ ಚತುರ್ಥಿ ಆಗಸ್ಟ್ 31ರಿಂದ ಪ್ರಾರಂಭವಾಗುತ್ತದೆ. ಈ ದಿನದಂದು, ಜನರು ಮನೆಯಲ್ಲಿ ಗಣೇಶನನ್ನ ಆಡಂಬರದಿಂದ ಸ್ಥಾಪಿಸುತ್ತಾರೆ. ಧಾರ್ಮಿಕ ಗ್ರಂಥಗಳ ಪ್ರಕಾರ, ಸಂತೋಷ ಮತ್ತು ಸಮೃದ್ಧಿಯನ್ನ ನೀಡುವ ಭಗವಂತ ಗಣೇಶನು ಈ ದಿನದಂದು ಜನಿಸಿದ ಅನ್ನೋದು ಪ್ರತೀತಿ. ಎಲ್ಲಿ ಗಣೇಶನು ನೆಲೆಸಿರುತ್ತಾನೋ ಅಲ್ಲಿ ಸಿದ್ಧಿ-ಬುದ್ದಿ, ಶುಭ-ಪ್ರಯೋಜನವೂ ಇರುತ್ತದೆ ಎಂದು ಹೇಳಲಾಗುತ್ತದೆ.
ಗಣೇಶನನ್ನ ವ್ಯವಸ್ಥಿತವಾಗಿ ಪೂಜಿಸುವ ಮೂಲಕ ಆತನನ್ನ ಸಂತೋಷ ಪಡಿಸಬೋದು. ಭಕ್ತರ ಮೇಲೆ ಅನುಗ್ರಹ ತೋರುತ್ತಾನೆ. ಅವ್ರ ಎಲ್ಲಾ ದುಃಖಗಳನ್ನ ಕಳೆಯುತ್ತಾನೆ. ಎಲ್ಲಾ ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೇ ಪೂರ್ಣಗೊಳ್ಳುತ್ವೆ. ಭಕ್ತರು ಬಪ್ಪನನ್ನ ಮೆಚ್ಚಿಸಲು ಗಣೇಶ ಚತುರ್ಥಿಯಂದು ಆತನಿಗೆ ಪ್ರಿಯವಾದ ವಸ್ತುಗಳನ್ನ ಅರ್ಪಿಸುತ್ತಾರೆ. ಅಂತೆಯೇ, ಗಣೇಶನು ಸಹ ಕೆಂಪು ಕುಂಕುಮವನ್ನ ತುಂಬಾ ಇಷ್ಟಪಡುತ್ತಾನೆ.