ಬೆಂಗಳೂರು : ಇಂದು ಪುನೀತ್ ರಾಜ್ಕುಮಾರ್ ನಟನೆಯ ಡಾಕ್ಯುಮೆಂಟರಿ ಮಾದರಿಯ ಗಂಧದ ಗುಡಿ ಸಿನಿಮಾದ ಟ್ರೈಲರ್ ಬಿಡುಗಡೆ ಆಗುತ್ತಿದ್ದು, ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ.
ಇಂದು ಬೆಳಗ್ಗೆ 9.45ಕ್ಕೆ ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ಗಂಧದ ಗುಡಿ ಟ್ರೈಲರ್ ಬಿಡುಗಡೆ ಮಾಡಲಾಗುತ್ತಿದ್ದು, ಅಭಿಮಾನಿಗಳಿಗಾಗಿ ಟ್ರೈಲರ್ ನೋಡಲು ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಚಿತ್ರಮಂದಿರಕ್ಕೆ ಪುನೀತ್ ಕುಟುಂಬ ಕೂಡ ಭಾಗಿಯಾಗಲಿದೆ.
ಗಂಧದ ಗುಡಿ ಪುನೀತ್ ರಾಜ್ಕುಮಾರ್ ನಟನೆಯ ಕನಸಿನ ಪ್ರಾಜೆಕ್ಟ್. ಇದು ಅವರ ಕೊನೆಯ ಸಿನಿಮಾ ಕೂಡ. ಕರ್ನಾಟಕದ ಕಾಡಿನ ಪ್ರಾಣಿ, ಪರಿಸರ, ಜಲಚರ ಹೀಗೆ ಅನೇಕ ಸಂಗತಿಗಳನ್ನು ಇದರಲ್ಲಿ ತಂದಿದ್ದಾರೆ.
ಅಪ್ಪು… ನಿನ್ನನ್ನು ಬೆಳ್ಳಿತೆರೆಯ ಮೇಲೆ ನೋಡುವ ಕಾತುರದಲ್ಲಿ…@Ashwini_PRK ಅವರಿಂದ ಪ್ರೀತಿಯ ಅಭಿಮಾನಿಗಳ ಜೊತೆ #ಗಂಧದಗುಡಿ ಟ್ರೈಲರ್ ಲಾಂಚ್ ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ…
ನಾಳೆ 9ನೇ ಅಕ್ಟೋಬರ್ 2022 ಬೆಳಗ್ಗೆ 9:45ಕ್ಕೆ#GandhadaGudi pic.twitter.com/rCzvwcgnlh— Raghavendra Rajkumar (@RRK_Official_) October 8, 2022